ಮಂಗಳೂರು : ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಸಂಕಷ್ಟ ಸಮಯದಲ್ಲಿ ರೈತರ ಬೆನ್ನೆಲುಬಾಗಿ ನಿಂತ ಕ್ಯಾಂಪ್ಕೊ ಕೋವಿಡ್ ಸಂಕಷ್ಟ ಕಾಲದಲ್ಲಿ ಕೂಡ ರೈತರಿಗೆ ನೆರವಾಗಿ ಯೋಗ್ಯ ಬೆಲೆಯನ್ನು ನೀಡಿ ಅಡಿಕೆ ಖರೀದಿಸುವುದರಲ್ಲಿ ಯಶಸ್ವಿ ಆಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್ ಖಂಡಿಗೆ ಅವರು ತಿಳಿಸಿದರು.
ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಸಹಯೋಗದೊಂದಿಗೆ ಪಾವೂರು, ವರ್ಕಾಡಿ ಯಲ್ಲಿ ಕಾರ್ಯಾರಂಭಿಸಿದ ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದೀಗ ಸಂಸ್ಥೆಯ ಸಕ್ರಿಯ ಸದಸ್ಯರಿಗೆ ತೆರೆದ ಹ್ರದಯ ಶಸ್ತ್ರಕ್ರಿಯೆ, ಎಂಜಿಯೋಪ್ಲಾಸ್ಟಿ, ಡಯಾಲಿಸಿಸ್ ಮುಂತಾದ ಗಂಭೀರ ಖಾಯಿಲೆಗಳಿಗೆ ಹಣಕಾಸಿನ ನೆರವು ಹಾಗು ಆಕಸ್ಮಿಕ ಮರಣ ಪರಿಹಾರಗಳನ್ನು ಘೋಷಿಸಿರುವುದರಿಂದ ಸಂಘದ ಸಕ್ರಿಯ ಸದಸ್ಯರಾಗುವ ಮೂಲಕ ಆಪತ್ಕಾಲದಲ್ಲಿ ಕ್ಯಾಂಪ್ಕೊದ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಿರಿ ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು .
ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಶ್ರೀ ದಿವಾಕರ ಎಸ್.ಜೆ. ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವರ್ಕಾಡಿ ಚರ್ಚ್ ನ ಧರ್ಮ ಗುರುಗಳಾದ ಶ್ರೀ ಫ್ರಾನ್ಸಿಸ್ ರೋಡ್ರಿಗೆಸ್ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕ್ಯಾಂಪ್ಕೊ ನಿರ್ದೇಶಕರುಗಳಾದ ಶ್ರೀ ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಶ್ರೀ ಬಾಲಕೃಷ್ಣ ರೈ ಬಾನೊಟ್ಟು , ಶ್ರೀ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ , ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾ ಭಾಸ್ಕರ್ , ಮಿಂಜ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ನಾರಾಯಣ ತುಂಗಾ , ಶ್ರೀ ಬಾಬು, ಬದಿಯಡ್ಕ ವಲಯದ ಕ್ಯಾಂಪ್ಕೊ ಮ್ಯಾನೇಜರ್ ಶ್ರೀ ಗಿರೀಶ್, ಹಿರಿಯ ಕೃಷಿಕರಾದ ಶ್ರೀ ನಾರಾಯಣ ನಾವಡ ಚೆಂಡೆಲ್ ವರ್ಕಾಡಿ ಮುಂತಾದವರು ಶುಭಾಶಂಸನೆಗೈದರು. ಬ್ಯಾಂಕ್ ನ ಉಪಾಧ್ಯಕ್ಷರಾದ ಶ್ರೀ ಅಬ್ದುಲ್ಲಾ, ನಿರ್ದೇಶಕರುಗಳಾದ ಶ್ರೀ ಮೊಹಮ್ಮದ್ ಇಕ್ಬಲ್ , ಶ್ರೀಮತಿ ಬೀಫಾತಿಮ , ಶ್ರೀ ಸೀತಾರಾಮ ಪೂಜಾರಿ, ಶ್ರೀ ಜಯಾ , ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶ್ರೀ ಅಬ್ದುಲ್ ಖಾದರ್ , ಶ್ರೀ ಗೋಪಾಲ ಶೆಟ್ಟಿ ಅರಿಬೈಲ್ , ಶ್ರೀ ಕಿಶೋರ್ ಕುಮಾರ್ ನಾಯ್ಕ್, ಶ್ರೀ ಮೊಹಮ್ಮದ್ ಪಿ.ಎಮ್. , ಶ್ರೀ ರಹಿಮಾನ್ ಸಾಹೀಬ್ , ಶ್ರೀ ಅಜಿತ್ ಪ್ರಸಾದ್ ನಾಯ್ಕ್, ಶ್ರೀ ಶ್ರೀಪತಿ ರಾವ್, ಶ್ರೀ ಟಿ ನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು>
ಬ್ಯಾಂಕ್ ನ ಕಾರ್ಯದರ್ಶಿಗಳಾದ ಶ್ರೀ ಶ್ರೀವತ್ಸ ಭಟ್ ಸ್ವಾಗತಿಸಿ ಬ್ಯಾಂಕ್ ನ ನಿರ್ದೇಶಕರಾದ ಶ್ರೀ ಸೀತಾರಾಮ ಬೇರಿಂಜ ಅವರು ಧನ್ಯವಾದ ಸಮರ್ಪಿಸಿದರು.
Click this button or press Ctrl+G to toggle between Kannada and English