ಉಡುಪಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ದೈವೈಕ್ಯರಾಗಿದ್ದಾರೆ. ಗೋವಾದಲ್ಲಿರಯವ ಶ್ರೀ ಮಠದಲ್ಲಿ ಅವರು ಹರಿಪಾದ ಸೇರಿದ ಬಗ್ಗೆ ಮಠದ ಮೂಲಗಳು ತಿಳಿಸಿವೆ.
ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಗೋಕರ್ಣ ಪರ್ತಗಾಳಿ ಮಠದ ಶ್ರೀವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಸೋಮವಾರ ಹರಿಪಾದ ಸೇರಿದರು. ಸೋಮವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸೇನಾಪುರ ಆಚಾರ್ಯ ಮನೆತನದವರಾದ ಅವರು ಗಂಗೊಳ್ಳಿಯ ಶ್ರೀ ವೇಂಕಟರಮಣ ದೇವಾಲಯದ ಅರ್ಚಕ ಮನೆತನದವರು. ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಮತ್ತ ಶ್ರೀಮತಿ ದಂಪತಿಯ ದ್ವಿತೀಯ ಪುತ್ರರಾಗಿ ಜನಿಸಿದರು.
ಅವರ ಪೂರ್ವಾಶ್ರಮದ ಹೆಸರು ರಾಘವೇಂದ್ರ. ಗಂಗೊಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮ ಶಿಕ್ಷಣ ಪಡೆದು ಕುಂದಾಪುರದ ಭಂಡಾರಕರ ಕಾಲೇಜಿನಲ್ಲಿ ಓದುವಾಗ ಶ್ರೀ ದ್ವಾರಕಾನಾಥ ಶ್ರೀಗಳ ಶಿಷ್ಯತ್ವ ಹೊಂದುವ ಅವಕಾಶ ಬಂತು. ಗುರುವರ್ಯರ ಆದೇಶ ಕೇಳಿ ಖುಷಿಯಿಂದ ಸನ್ಯಾಸಾಶ್ರಮ ಸ್ವೀಕಾರಕ್ಕೆ ಒಪ್ಪಿದರು.
ಮುಂಬಯಿ ವಡಾಲಾದ ದ್ವಾರಕಾನಾಥ ಭವನದಲ್ಲಿ ಅವರು ಶ್ರೀ ದ್ವಾರಕಾನಾಥ ಸ್ವಾಮಿಗಳಿಂದ 9-02-1967 ರಲ್ಲಿ ಸನ್ಯಾಸ ದೀಕ್ಷೆ ಪಡೆದು ಶ್ರೀ ಮದ್ ವಿದ್ಯಾಧಿರಾಜ ತೀರ್ಥ ಸ್ವಾಮಿಗಳಾಗಿ ನಾಮಕರಣಗೊಂಡರು. ಸುಮಾರು ಐದು ದಶಕಗಳ ಸನ್ಯಾಸಾಶ್ರಮದಲ್ಲಿದ್ದ ಅವರು ಶ್ರೀಗಳು 1971 ರಲ್ಲಿ ಗೋಕರ್ಣ ಪರ್ಥಗಾಳಿ ಮಠದ ಪೀಠಾಧಿಪತಿಗಳಾಗಿದ್ದರು.
ಮೂಲತಃ ಉಡಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿಯವರಾದ ಶ್ರೀಗಳು ಇದೇ ಜುಲೈ 28 ರಂದು ಪರ್ತಗಾಳಿ ಮಠದಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕಾರ ಮಾಡುವವರಿದ್ದರು. ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳ ಅಭಿವೃದ್ಧಿ ಮಾಡಿದ್ದರು. ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಿಧನ ಅಪಾರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಗಣ್ಯಾತಿ ಗಣ್ಯರು ಶ್ರೀಗಳ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ವಿ. ಸುನಿಲ್ ಕುಮಾರ್ ತೀವ್ರ ಸಂತಾಪ
ಶ್ರೀ ಗೋಕರ್ಣ ಪರ್ಥಗಾಳಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರು ಶ್ರೀ ಹರಿಪಾದ ಸೇರಿರುವುದಕ್ಕೆ ಕಾರ್ಕಳ ಶಾಸಕರು, ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ವಿ. ಸುನಿಲ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಗೋಕರ್ಣ ಪರ್ಥಗಾಳಿ ಮಠಾಧೀಪತಿಗಳಾಗಿರುವ ಶ್ರೀಗಳು ಸಮಾಜದ ಶೈಕ್ಷಣಿಕ, ಧಾರ್ಮಿಕ ಅಭಿವೃದ್ಧಿಗಾಗಿ ಸಂಸ್ಕೃತಿಯನ್ನು ಬೆಳೆಸುವಲ್ಲಿ ಇಂದಿನ ಯುವ ಜನಾಂಗಕ್ಕೆ ಧರ್ಮದ ಬಗ್ಗೆ ತಿಳಿಸುವಲ್ಲಿ ಹಾಗೂ ವಿಶೇಷವಾಗಿ ಸಮಯಕ್ಕೆ ಬಹಳ ಪ್ರಾಧಾನ್ಯ ಕೊಡುತ್ತಿರುವುದು ಅದ್ಬುತವಾಗಿತ್ತು.
ಶ್ರೀಗಳು ಬೆಳಗ್ಗಿನ ನೈರ್ಮಲ್ಯ ವಿಸರ್ಜನೆ ಪೂಜೆಯನ್ನು ಏಕಾಂತರಾಗಿ ಧ್ಯಾನಗಸ್ತರಾದ ಸಮಯದಲ್ಲೇ ಶ್ರೀ ಹರಿಪಾದ ಸೇರಿರುವುದು ಶ್ರೀಗಳಿಗೆ ತಮ್ಮ ಕೊನೆಯ ಸಮಯ ಬಂದಿರುವುದು ತಿಳಿದಿರಬೇಕು. ಇಂತಹ ಶ್ರೇಷ್ಠ ಯತಿಗಳನ್ನು ಕಳೆದುಕೊಂಡಿರುವುದು ಹಿಂದೂ ಧರ್ಮಕ್ಕೆ ದೊಡ್ಡ ನಷ್ಠ ಎಂದು ಕಾರ್ಕಳ ಶಾಸಕರು ಸಂತಾಪ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English