ಮಂಗಳೂರು : ಪುತ್ತೂರು ತಾಲೂಕಿನ ಸತೀಶ್ ರೈ ನಡುಬೈಲು ಎಂಬುವವರು ಅಂಗಡಿಯೊಂದರಿಂದ ಖರೀದಿಸಿದ ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಲಭಿಸಿದ್ದು, ಈ ಕುರಿತು ಉಪ್ಪಿನ ಕಾಯಿ ಸಂಸ್ಥೆಯ ಮಾಲಕರನ್ನು ಸಂಪ ರ್ಕಿಸಿದಾಗ ಅವರು ಹಾರಿಕೆಯ ಉತ್ತರ ನೀಡಿರುವುದಾಗಿ ಆರೋಪಿಸಿದ್ದಾರೆ.
ಸತೀಶ್ ರೈ ನಡುಬೈಲು ಎರಡು ದಿನಗಳ ಹಿಂದೆ ಪುತ್ತೂ ರಿನ ಅಂಗಡಿಯೊಂದರಿಂದ ಯಜ ಮಾನ ಉಪ್ಪಿನಕಾಯಿ ಉತ್ಪನ್ನ ಖರೀದಿಸಿದ್ದು. ಅರ್ಧ ಕೆ.ಜಿ.ಯ ಬಾಟಲಿಯ ಮುಚ್ಚಳವನ್ನು ತೆರೆದು ಒಳ ನೋಡಿದಾಗ ಉಪ್ಪಿನಕಾಯಿಯ ಜೊತೆಗೆ ಕಬ್ಬಿಣದ ಸ್ಪಾನರ್ ಸಿಕ್ಕಿದ್ದು, ಈ ಬಗ್ಗೆ ಅವರು ಉಪ್ಪಿನಕಾಯಿ ಸಂಸ್ಥೆಯವರನ್ನು ಸಂಪರ್ಕಿಸಿದಾಗ ಅವರು ಹಾರಿಕೆಯ ಉತ್ತರ ನೀಡಿ, ನಿರ್ಲಕ್ಷಿಸಿದ್ದರಿಂದ ಈ ಕುರಿತು ಆರೋಗ್ಯಾಧಿಕಾರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.
Click this button or press Ctrl+G to toggle between Kannada and English