ಕಮ್ಯೂನಿಷ್ಟ್ ಚಳುವಳಿಯ ಕಾಂ. ಲಿಂಗಪ್ಪ ಚೌಟ ಇನ್ನಿಲ್ಲ

10:22 PM, Monday, December 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಸಿಪಿಐಎಮ್ ಹಿರಿಯ ಸದಸ್ಯರೂ, ತನ್ನ ಕೊನೆಯ ಕಾಲಾವಧಿವರೆಗೂ ಕಮ್ಯೂನಿಷ್ಟ್ ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿರುವ ಕಾಂ. ಲಿಂಗಪ್ಪ ಚೌಟ ಬಜಾಲ್ ( 85 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ನಮ್ಮನ್ನಗಲಿರುತ್ತಾರೆ.

ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬಜಾಲ್ ಪ್ರದೇಶದ ಜಲ್ಲಿಗುಡ್ಡೆಯಲ್ಲಿ ಹುಟ್ಟಿ ಬೆಳೆದಿರುವ ಲಿಂಗಪ್ಪ ಚೌಟ ರವರು, ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ ,ಹಂಚು, ಬೀಡಿ ಮತ್ತು ರೈತ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಬಳಿಕ ಹಂಚು ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ವೇಳೆ ಸಂಪೂರ್ಣ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು. ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ದುಡಿದಿರುವ ಲಿಂಗಪ್ಪ ಚೌಟ ರವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. ಒಟ್ಟಿನಲ್ಲಿ ಕಾಂ ಲಿಂಗಪ್ಪ ಚೌಟರವರ ಅಗಲುವಿಕೆಯು ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.

ಕಾಂ ಲಿಂಗಪ್ಪ ಚೌಟರವರು ಪತ್ನಿ ಮೂರು ಗಂಡು ಮತ್ತು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ಅಗಲಿಕೆಗೆ ಸಿಪಿಐಎಂ, ಡಿವೈಎಫ್ಐ, ಶ್ರಮಶಕ್ತಿ ಕೇಂದ್ರ ಬಜಾಲ್ ಸಂತಾಪ ಸೂಚಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English