“ಕನ್ನಡ ಭವನ ಕಾಸರಗೋಡಿನ” ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆಯಾಗಿ ಸಂಘಟಕಿ, ಲೇಖಕಿ , ಕವಯತ್ರಿ ರೇಖಾ ಸುದೇಶ್ ರಾವ್ ಆಯ್ಕೆ.

7:57 PM, Thursday, December 12th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕಾಸರಗೋಡು :ವಿವಿಧ ಸಂಘಟನೆಗಳ ಪದಾಧಿಕಾರಿಯಾಗಿ, ವಿಶ್ವ ಸಾಹಿತ್ಯ ಬಳಗದ ಸಂಚಾಲಕಿಯಾಗಿ, ಸಾಹಿತ್ಯ, ಸಾಮಾಜಿಕ ಸೇವಾ ಧರ್ಮವನ್ನು ನಿರಂತರತೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಇವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧ್ಯಕ್ಷೆಯಾನ್ನಾಗಿ ಸಂಘಟಕಿ, ಲೇಖಕಿ, ಕವಯತ್ರಿ ರೇಖಾ ಸುದೇಶ್ ರಾವ್ ಇವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ಭವನದ “ರಜತ ಸಂಭ್ರಮ “ವರ್ಷವಾದ 2025.ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡಪರ ಕಾರ್ಯಕ್ರಮ ಹಾಗೂ “ಮನೆಗೊಂದು ಗ್ರಂಥಾಲಯ,-ಪುಸ್ತಕ ಸತ್ಯ -ಪುಸ್ತಕ ನಿತ್ಯ, ಜನಜಾಗೃತಿ ಮೂಡಿಸುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು ಕಾಸರಗೋಡು ಕನ್ನಡ ಭವನದ ನಿರ್ದೇಶಕ ಡಾ. ಕೊಲಚಪ್ಪೆ ಗೋವಿಂದ ಭಟ್ ನಾಮನಿರ್ದೇಶನ ಮಾಡಿದ್ದು ಕನ್ನಡ ಭವನದ ಗೌರವ ಅಧ್ಯಕ್ಷ ಹಿರಿಯ ಪತ್ರಕರ್ತ ಪ್ರದೀಪ್ ಬೇಕಲ್ ಅನುಮೋದಿಸಿದರು.

ಸರ್ವಾನುಮತಿಯಿಂದ ಆಯ್ಕೆಯಾದ ಶ್ರಿಮತಿ ರೇಖಾ ಸುದೇಶ್ ರಾವ್ ಇವರು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ ಸೌಕರ್ಯ, ಕನ್ನಡ ಭವನ “ರಜತ ಸಂಭ್ರಮ “2025 ಈ ಮೇಲಿನ ಕಾರ್ಯಕ್ರಮ ಸಂಯೋಜನೆಯ ಜವಾಬ್ದಾರಿ ಸ್ವೀಕರಿಸಿ, ಜಿಲ್ಲಾ ಘಟಕವನ್ನು ವಿಸ್ತರಿಸಿ ಕಾರ್ಯ ನಿರ್ವಹಿಸ ಬೇಕೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ ವಾಮನ್ ರಾವ್ ಬೇಕಲ್ ಹಾಗೂ ಕೋಶಧಿಕಾರಿ ಸಂದ್ಯಾ ರಾಣಿ ಟೀಚರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English