ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ 154ನೇ ಚಳಿಗಾಲದ ಅಧಿವೇಶನದ 4ನೇ ದಿನವಾದ ಇಂದು ವಿಧಾನ ಪರಿಷತ್ ಸದನದಲ್ಲಿ ಸಭಾಪತಿಗಳಾಗಿ ಪರಿಷತ್ ಶಾಸಕ ಮಂಜುನಾಥ ಭಂಡಾರಿಯವರು ಯಶಸ್ವಿ ಕಲಾಪ ನಡೆಸಿಕೊಟ್ಟರು.
ಗುರುವಾರದಂದು ನಡೆದ ಅಧಿವೇಶನ ಸಂದರ್ಭ ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನದಲ್ಲಿ ಕುಳಿತ ಮಂಜುನಾಥ ಭಂಡಾರಿ ಅವರು ಕಲಾಪವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಸೈ ಅನ್ನಿಸಿಕೊಂಡರು.
ಚಳಿಗಾಲ ಅಧಿವೇಶನ ಪ್ರಾರಂಭದ ದಿನದಿಂದಲೂ ಮಂಜುನಾಥ ಭಂಡಾರಿ ಅವರು ರಾಜ್ಯದ ಜನರ ಪರವಾಗಿ ನಾನಾ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತುವ ಮೂಲಕ ಶಾಸಕರಾಗಿ ತಮ್ಮ ಜವಾಬ್ದಾರಿ ನಿರ್ವಹಿಸಿ ಸುದ್ದಿಯಲ್ಲಿದ್ದಾರೆ.
ಶಾಸಕ ಮಂಜುನಾಥ ಭಂಡಾರಿ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿಗಳು ಅನುಷ್ಠಾನಗೊಳ್ಳದ ಕುರಿತು ಸರಕಾರದ ಗಮನನ್ನು ಸೆಳೆದಿದ್ದು ಜಲಜೀವನ ಮಿಷನ್ ಯೋಜನೆಯಲ್ಲಿ ನೀರಿನ ಮೂಲಗಳು ಅನುಷ್ಠಾನವಾಗದ ಕುರಿತು ಪ್ರಸ್ತಾಪಿಸಿ ಶೀಘ್ರವಾಗಿ ಯೋಜನೆಗೆ ಸಂಬಂಧಿಸಿದ ನೀರಿನ ಮೂಲಗಳನ್ನು ಪ್ರಥಮವಾಗಿ ಶೋಧಿಸಿ ಅಳವಡಿಸುವ ಮೂಲಕ ಸಮರ್ಪಕ ಅನುಷ್ಠಾನಕ್ಕಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ ನಂದಿಕೂರು-ಕಾಸರಗೋಡು ವಿದ್ಯುತ್ ಲೈನ್ ಕಾಮಗಾರಿಯ ಅವೈಜ್ಞಾನಿಕ ಯೋಜನೆಯಿಂದ ರೈತರಿಗೆ ತೊಂದರೆಯಗುತ್ತಿದ್ದು ಟವರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ನೆಲದಡಿಯಲ್ಲಿ ವಿದ್ಯುತ್ ಲೈನ್ ನಿರ್ಮಾಣ ಮಾಡುವ ಕುರಿತು ಸರಕಾರದ ಗಮನ ಸೆಳೆದಿದ್ದಾರೆ.
Click this button or press Ctrl+G to toggle between Kannada and English