ಮಂಗಳೂರು : ಮಂಗಳೂರು ನಗರದ ಸರ್ವತೋಮುಖ ಬೆಳವಣಿಗೆಗಾಗಿ, ವಿಮಾನ ನಿಲ್ದಾಣ, ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ಸರ್ವಋತು ಬಂದರು, ಬೃಹತ್ ಸೇತುವೆ, ರಾಷ್ಟ್ರೀಯ ಹೆದ್ದಾರಿ, ರಸಗೊಬ್ಬರ ಕಾರ್ಖಾನೆ, ಇತ್ಯಾದಿ ಹತ್ತಾರು ಯೋಜನೆಗಳನ್ನು ಕಾರ್ಯಗತ ಗೊಳಿಸಿದ, ಅಭಿವೃದ್ಧಿ ಹರಿಕಾರ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಇವರ 59 ನೇ ಪುಣ್ಯತಿಥಿ ಅಂಗವಾಗಿ ಪಡೀ್ಲ್ ಜಂಕ್ಶನ್ ನಲ್ಲಿರುವ ಶಿಲಾ ಪ್ರತಿಮೆಗೆ ಗೌರವ ನೀಡಿ ಪುಷ್ಪ ಮಾಲಾರ್ಪಣೆ ಮಾಡಲಾಯಿತು.
ವಿಶ್ವ ಕೊಂಕಣಿ ಕೇಂದ್ರ, ಕೆನರಾ ಚೇಂಬರ ಆಫ್ ಕಾಮರ್ಸ್ ಮತ್ತು ಲೆಕ್ಕ ಪರಿಶೋಧಕರ ಸಂಘ ಜಂಟಿಯಾಗಿ ಭಾಗವಹಿಸಿದ ಈ ಸಂಧರ್ಭದಲ್ಲಿ ಸಿ. ಎ. ನಂದಗೋಪಾಲ ಶೆಣೈ, ಡಾ ಕೆ ಮೋಹನ ಪೈ, ಆನಂದ ಜಿ ಪೈ, ಸಿ.ಎ.ಗೌತಮ ಪೈ ಇವರು ದಿ. ಮಲ್ಯರ ಅಪಾರ ಸಮಾಜ ಸೇವೆಯನ್ನು ಕೊಂಡಾಡಿದರು.
ಉಳ್ಳಾಲ ದೇವಾಲಯದ ಟ್ರಸ್ಟಿ ಶ್ರೀಕರ ಕಿಣಿ, ನವೀನ ನಾಯಕ, ಸುರೇಂದ್ರ ಪೈ, ಅನಿಲ್ ಪೈ, ಆಗಮಿಸಿದ್ದರು. ಪ್ರಮುಖರಾದ ಅಹಮ್ಮದ ಮುದಸರ್, ಆದಿತ್ಯ ಪೈ, ಸ್ಥಳೀಯ ಕಾರ್ಪೊರೇಟರ ಕಿಶೋರ ಕೊಟ್ಟಾರಿ ಮಾಜಿ ಕಾರ್ಪೊರೇಟರ ವಿಜಯ ಕುಮಾರ್, ವಿಲಿಯಂ ಡಿಸೋಜಾ, ಡಿ ರಮೇಶ ನಾಯಕ, ಬಿ ಆರ್ ಭಟ್, ಡಾ. ಬಿ ದೇವದಾಸ ಪೈ, ವಿಘ್ನೇಶ್ ಇವರುಗಳು ಪುಷ್ಫ ನಮನ ಸಲ್ಲಿಸಿದರು.
Click this button or press Ctrl+G to toggle between Kannada and English