ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಅಗೆದಿರುವ ಹೊಂಡಕ್ಕೆ ಕಾರು ಮಗುಚಿಬಿದ್ದು ಪ್ರಯಾಣಿಕರಿಗೆ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಅಗೆದಿರುವ ಹೊಂಡಕ್ಕೆ ಕಾರು ಬಿದ್ದಿರುವುದು ಮೊದಲ ಅಪಘಾತವಾಗಿದ್ದು ವಾಹನ ಸವಾರರು ಜಾಗರೂಕರಾಗಿರಬೇಕಿದೆ ಎಂದು ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ.
ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ಕಾಮಗಾರಿಗೆ ಪರವಿರೋಧ ಚರ್ಚೆಗಳು/ಹೋರಾಟಗಳು ಜೋರಾಗಿ ನಡೆಯುತ್ತಿರುವ ಹೊತ್ತಿನಲ್ಲಿ ಈ ಅಪಘಾತ ಸಂಭವಿಸಿದೆ. ಸ್ವಹಿತಾಸಕ್ತಿಯುಳ್ಳ ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ, ಕರಾವಳಿ ಬೈಪಾಸ್ ಕಾಮಗಾರಿಯು ಅವೈಜ್ಞಾನಿಕವಾಗಿದೆ.
ಹೆದ್ದಾರಿ ಇಲಾಖೆ ಮತ್ತು ಜಿಲ್ಲಾಡಳಿತ ಅಂಬಲಪಾಡಿಯಲ್ಲಿ ಕಾರ್ಯಗತವಾಗುತ್ತಿರುವ ಕಾಮಗಾರಿಯ ಮಾಹಿತಿ ಫಲಕ ಅಳವಡಿಸಲಿಲ್ಲ ಮತ್ತು ಅನುಷ್ಠಾನ ಮಾಡುವಾಗ ಸಾರ್ವಜನಿಕರಿಗೆ ಬದಲಿ ವಾಹನ ಸಂಚಾರದ ಮಾಹಿತಿ ನೀಡಿಲ್ಲ” ಎಂದು ಅಂಬಲಪಾಡಿ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸದಸ್ಯರು ಆಪಾದಿಸಿದ್ದರು.
” ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ, ಸುರಕ್ಷತಾ ದೃಷ್ಟಿಯಿಂದ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ಪಾಲಿಸಲು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಲಾಗುವುದು ” ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Click this button or press Ctrl+G to toggle between Kannada and English