Blog Archive

ಚುನಾವಣೆಯಲ್ಲಿ ಅಕ್ರಮ ಹಣ ಹಂಚಿಕೆಗೆ ಕಡಿವಾಣ: ಬಿ.ಆರ್. ಬಾಲಕೃಷ್ಣನ್

Saturday, March 17th, 2018
t-r-suresh

ಮಂಗಳೂರು: ಗೋವಾ ರಾಜ್ಯಗಳಿಗೆ ಸಂಬಂಧಿಸಿದಂತೆ 2016ರಿಂದ ಆದಾಯ ತೆರಿಗೆ ಇಲಾಖೆಯ ಮೂಲಕ ನಡೆದ ಕಾರ್ಯಾಚರಣೆಯಲ್ಲಿ 500 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ಕರ್ನಾಟಕ, ಗೋವಾ ರಾಜ್ಯದ ಆದಾಯ ತೆರಿಗೆ ಇಲಾಖೆಯ ಮಹಾ ನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ತಿಳಿಸಿದ್ದಾರೆ. ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರ ಕೇಂದ್ರೀಯ ವಿಭಾಗದ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಣ ಅಪ ನಗದೀಕರಣದ ಸಂದರ್ಭದಲ್ಲಿ ಹಲವರಿಗೆ ತೊಂದರೆಗಳಾಗಿವೆ. ಕೆಲವು ಸಹಕಾರಿ ಬ್ಯಾಂಕ್‌ಗಳಿಗೆ ಸಮಸ್ಯೆಯಾಗಿರಬಹುದು. ಹಲವು ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ […]

ಸರ್ಕಾರಿ ಬಸ್‌ ಕಾರಿಗೆ ಢಿಕ್ಕಿ :ನಾಲ್ವರು ಗಂಭೀರ

Friday, January 26th, 2018
car-accident

ಪುತ್ತೂರು :ಇಲ್ಲಿದ ಕಬಕ ಬಳಿಯ ಪೋಳ್ಯದಲ್ಲಿ ರಾಜಹಂಸ ಬಸ್ಸೊಂದು ಐ20 ಕಾರಿಗೆ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ತೂರು ಕಡೆಯಿಂದ ಬರುತ್ತಿದ್ದ ಬಸ್‌ ಮತ್ತು ಮಂಗಳೂರಿನಿಂದ ಬರುತ್ತಿದ್ದ ಕಾರು ಮುಖಾಮುಖೀ ಢಿಕ್ಕಿಯಾಗಿ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ ಚಾಲಕನ ಅಜಾಗರುಕತೆಯೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳನ್ನು ಹೊರತೆಗೆಯಲು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಅಫಘಾತ ಸ್ಥಳದಲ್ಲಿ ಯಾರೂ ಇಲ್ಲದ […]

ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆ: ಗೋವಾ ಸಚಿವನ ವಿರುದ್ಧ ಬಿಜೆಪಿ ನಾಯಕರು ಗರಂ

Monday, January 15th, 2018
pratap-simha

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌‌ ಕನ್ನಡಿಗರ ಬಗ್ಗೆ ಅವಾಚ್ಯ ಪದ ಬಳಕೆಯನ್ನು ರಾಜ್ಯ ಬಿಜೆಪಿ ಮುಖಂಡರು ಖಂಡಿಸಿದ್ದಾರೆ. ಗೋವಾ ಸಚಿವ ವಿನೋದ್‌ ಪಾಲೇಕರ್‌‌ ಬೆಳಗಾವಿ ಜಿಲ್ಲೆಯ ಕಣಕುಂಬಿಗೆ ಭೇಟಿ ನೀಡಿದ ಬಳಿಕ ‘ಕನ್ನಡಿಗರು ಹರಾಮಿಗರು’ ಎಂದು ಉದ್ಧತಟನದ ಹೇಳಿಕೆ ಕೊಟ್ಟಿದ್ದರು. ಪಾಲೇಕರ್‌‌ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದ ಪ್ರತಾಪ್‌ ಸಿಂಹ ಕೂಡ ಗೋವಾ ಸಚಿವ […]

ಮಹಾಡ್‌ನ‌ ಹೆದ್ದಾರಿಯಲ್ಲಿದ್ದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನಲ್ಲಿ ಕೊಚ್ಚಿ ವಾಹನಗಳು, 22 ಮಂದಿ ಕಣ್ಮರೆ

Wednesday, August 3rd, 2016
Mumbai-gova-bridge

ಮುಂಬಯಿ: ಮಹಾಡ್‌ನ‌ ಹೆದ್ದಾರಿಯಲ್ಲಿದ್ದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಶತಮಾನಗಳಷ್ಟು ಹಳೆಯದಾದ ಸೇತುವೆಯೊಂದು ಮಂಗಳವಾರ ತಡರಾತ್ರಿ ಪ್ರವಾಹದಿಂದ ಕುಸಿದ ಪರಿಣಾಮ 12ಕ್ಕೂ ಹೆಚ್ಚು ವಾಹನಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿ, 22 ಮಂದಿ ಕಣ್ಮರೆಯಾಗಿರುವ ಕುರಿತು ವರದಿಯಾಗಿದೆ. ಸಾವಿತ್ರಿ ನದಿಗೆ ಅಡ್ಡಲಾಗಿದ್ದ ಬ್ರಿಟೀಷ್‌ ಕಾಲದ ಸೇತುವೆ ಕುಸಿದು ದುರಂತ ಸಂಭವಿಸಿದ್ದು,ಇದೀಗ ಸಮೀಪದಲ್ಲಿರುವ ಇನ್ನೊಂದು ಸೇತುವೆಯ ಮೂಲಕ ವಾಹನಗಳು ಸಂಚರಿಸುತ್ತಿವೆ. 2 ಬಸ್‌ಗಳು ಸೇರಿ ಇತರ ವಾಹನಗಳು ಕೊಚ್ಚಿ ಹೋಗಿರುವ ಕುರಿತು ವರದಿಯಾಗಿದೆ. ಸ್ಥಳದಲ್ಲಿ ಎನ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, […]

ಮಾನವಿಕ ಐಕ್ಯ ಸಂದೇಶ ಯಾತ್ರೆಗೆ ಚಾಲನೆ

Sunday, February 21st, 2016
Kerala Yuva Janatha Dal

ಕುಂಬಳೆ: ಭೂರಹಿತ ಸಮೂಹಕ್ಕೆ ಯುವಪ್ರದ ರಕ್ಷಣೆ ಎಂಬ ಸಂದೇಶದೊಂದಿಗೆ ಯುವಜನತಾದಳ(ಯು) ಇದರ ರಾಜ್ಯ ಅಧ್ಯಕ್ಷ ಸಲಾಂ ಮಡವೂರ್‌ರ ನೇತೃತ್ವದ ಮಾನವಿಕ ಐಕ್ಯ ಸಂದೇಶ ಯಾತ್ರೆ ಕುಂಬಳೆಯಿಂದ ಶನಿವಾರ ಆರಂಭಗೊಂಡಿತು. ಯುವ ಜನತಾದಳ ಕೇಂದ್ರ ಪ್ರಧಾನ ಕಾರ್ಯದರ್ಶಿ ಜಾವೇದ್ ರಾಸ ಯಾತ್ರೆಯನ್ನು ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ.ಕೆ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಕೆ.ಶ್ರೀಧರನ್, ಜೆಡಿಯುರಾಜ್ಯ ಉಪಾಧ್ಯಕ್ಷ ಕೋರನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಪಿ.ಕುಂಞಲಿ ಸಹಿತ ಅನೇಕರ ಗಣ್ಯರು ಉಪಸ್ಥಿತರಿದ್ದರು.