Blog Archive

ಪ್ರವಾದಿ ಬಗ್ಗೆ ಅವಹೇಳನ ಆರೋಪ : ನಾಪೋಕ್ಲುವಿನಲ್ಲಿ ದೂರು ದಾಖಲು

Tuesday, February 18th, 2020
haris

ಮಡಿಕೇರಿ : ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಅತುಲ್ ಕುಮಾರ್ (ಮಧುಗಿರಿ ಮೋದಿ) ಎಂಬುವವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ನಾಪೋಕ್ಲು ಅವರು ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತುಲ್ ಕುಮಾರ್ ಎಂಬುವವರು ಮುಸಲ್ಮಾನರ ಭಾವನೆಗೆ ದಕ್ಕೆ ತರುವ ರೀತಿಯಲ್ಲಿ ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾರಿಸ್ ದೂರಿನಲ್ಲಿ ತಿಳಿಸಿದ್ದಾರೆ.  

ಸಾಮಾಜಿಕ ಜಾಲತಾಣದಲ್ಲಿ ಕದ್ರಿ ಪಾರ್ಕ್ ಜ್ಯೂಸ್ ವ್ಯಾಪಾರಿಗಳ ತೇಜೋವಧೆಗೆ ಯತ್ನಿಸಿದವರ ವಿರುದ್ಧ ದೂರು

Thursday, February 13th, 2020
kadri

ಮಂಗಳೂರು : ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸ್ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ನಾಯಿ ಒಂದು ಜ್ಯೂಸಿಗೆ ಬಳಸಲಾಗುವ ಮಂಜುಗಡ್ಡೆಯನ್ನು ತಿನ್ನುವ ವಿಡಿಯೋ ಒಂದನ್ನು ವಾಟ್ಸಾಪ್ ಗಳಲ್ಲಿ ಹರಿಯಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸ್ಟಾಲ್ ಗಳಲ್ಲಿ ಜ್ಯೂಸು ಕುಡಿಯಬಾರದೆಂದು ಈ ವಿಡಿಯೋ ವೈರಲ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸವನ್ನು ಕೆಲವು ವಾಟ್ಸಾಪ್ ವಿಘ್ನ ಸಂತೋಷಿಗಳು ಮಾಡಿರುತ್ತಾರೆ. ಈ ಹುನ್ನಾರವನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ತೀವ್ರವಾಗಿ ಖಂಡಿಸಿದೆ. ಮಹಾನಗರ […]

ತಾಲಿಬಾನ್ ಉಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿ

Saturday, February 8th, 2020
ugra

ಇಸ್ಲಾಮಾಬಾದ್ : 2012ರಲ್ಲಿ ಮಲಾಲಾ ಯುಸುಫ್ ಝೈ ಅವರ ಮೇಲೆ ಗುಂಡಿ ಹಾರಿಸಿದ್ದ ಮತ್ತು 2014ರಲ್ಲಿ ಪೇಶಾವರದ ಸೈನಿಕ ಶಾಲೆ ಮೇಲೆ ದಾಳಿ ನಡೆಸಿ 132 ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ತಾಲಿಬಾನ್ ಉಗ್ರ ಇಹ್ಸಾನುಲ್ಲಾ ಇಹ್ಸಾನ್ ಪಾಕ್ ಜೈಲಿನಿಂದ ಪರಾರಿಯಾಗಿದ್ದಾನೆಂದು ವರದಿಗಳು ತಿಳಿಸಿವೆ. ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಉಗ್ರ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಈ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತಾನಿರುವ ಸ್ಥಳದ ಮಾಹಿತಿ ನೀಡದ ಉಗ್ರ, ದೇವರ ಸಹಾಯದಿಂದ ನಾನು ಭದ್ರತಾ […]

ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ

Saturday, January 11th, 2020
grama-panchayiti

ಬೆಂಗಳೂರು : ಗ್ರಾಮ ಪಂಚಾಯಿತಿ ಚುನಾವಣೆ 2020 ವರ್ಷದ ವೇಳಾಪಟ್ಟಿಯನ್ನು ರಾಜ್ಯಸರ್ಕಾರ ಪ್ರಕಟಿಸಿದೆ. ಎಂಬ ಒಕ್ಕಣೆಯೊಂದಿಗೆ ರಾಜ್ಯಪತ್ರದ ಚಿತ್ರವೊಂದು ಹರಿದಾಡುತ್ತಿದೆ. ಏಪ್ರಿಲ್ 5 ಮತ್ತು ಏಪ್ರಿಲ್ 9 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿದೆ. ಈ ಚುನಾವಣೆಗಳನ್ನು ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ನಡೆಸಲಿದೆ ಎಂದು ಮುದ್ರಿತವಾಗಿರುವ ರಾಜ್ಯಪತ್ರದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಸುದ್ದಿ ಸುಳ್ಳಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಡ್ಯ, ಹಾಸನ, ಮೈಸೂರು, […]

ಮಂಗಳೂರು : ಪ್ರಚೋದನಕಾರಿ ಸಂದೇಶ ರವಾನಿಸಿದ ಆರೋಪ; ಯುವಕ ಬಂಧನ

Tuesday, December 31st, 2019
Moidin

ಮಂಗಳೂರು : ಗಲಭೆ ನಡೆಯಬೇಕೆಂಬ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆಯ ಸಂದೇಶ ರವಾನಿಸಿದ ಆರೋಪದ ಮೇಲೆ ನಗರದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೇಶ್ವರ ನಿವಾಸಿ ಮೊಯ್ದಿನ್ ಹಫೀಜ್(25) ಬಂಧಿತ ಆರೋಪಿ. ಈತ ಗಲಭೆ ನಡೆಯಬೇಕೆಂಬ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶ ರವಾನಿಸಿದ್ದ ಎನ್ನಲಾಗ್ತಿದೆ. ಡಿ.19ರಂದು ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚಿಕೊಳ್ಳುವುದು, ರವಾನೆ ಮಾಡುವುದು ಅಪರಾಧ ಎಂದು ಪೊಲೀಸರು ತಿಳಿಸಿದ್ದರು. ಈ ಹಿಂದೆಯೇ ಪ್ರಚೋದಕ ರೀತಿಯಲ್ಲಿ ಸಂದೇಶ ರವಾನಿಸಿದ್ದ […]

ಮಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸುದ್ದಿ ರವಾನೆ ಮಾಡುವವರ ವಿರುದ್ಧ ಕಠಿಣ ಕ್ರಮ; ಡಾ. ಪಿ.ಎಸ್. ಹರ್ಷ

Wednesday, December 18th, 2019
harsha

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಭಟನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶ ರವಾನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಿ.20 ಮತ್ತು ಡಿ. 23ರಂದು ವಿವಿಧ ಸಂಘಸಂಸ್ಥೆಗಳು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಕೈಬಿಡಲು ನಿರ್ಧರಿಸಿದ್ದಾರೆ. ಹಾಗಾಗಿ ಅದಕ್ಕೆ ವಿರುದ್ಧವಾಗಿ ಇತರ ಸಂಘಟನೆಗಳು, ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು, ಸುಮಾರು 7 ಸಂಘಟನೆಗಳಿಗೆ […]

ಅಯೋಧ್ಯೆ ತೀರ್ಪು ಹಿನ್ನೆಲೆ : ಸಾಮಾಜಿಕ‌ ಜಾಲತಾಣದ ಮೇಲೆ ತೀವ್ರ ನಿಗಾ

Saturday, November 9th, 2019
social-media

ಬೆಂಗಳೂರು : ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸರು ಕೆಲವೊಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು-ಸುದ್ದಿ ಹರಡದಂತೆ ಸೂಚನೆ ನೀಡಿದ್ದಾರೆ. ಪರ-ವಿರೋಧ ತೀರ್ಪು ಬಂದರೆ ವಿಜಯೋತ್ಸವ ಆಚರಿಸುವುದಾಗಲೀ ಅಥವಾ ಘೋಷಣೆ ಕೂಗುವುದನ್ನಾಗಲಿ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು, ಪೋಸ್ಟ್‌ಗಳನ್ನು, ಕಮೆಂಟ್‍ಗಳನ್ನು ಹಾಕಬೇಡಿ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನಿಂದ ನಿಯಮಗಳು ಅನ್ವಯವಾಗಲಿದ್ದು, ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳ […]

ಅಯೋಧ್ಯೆ ತೀರ್ಪಿಗೂ ಮುನ್ನವೇ 500 ಮಂದಿ ಅರೆಸ್ಟ್ : 12 ಸಾವಿರ ಮಂದಿ ಮೇಲೆ ಹದ್ದಿನ ಕಣ್ಣು

Friday, November 8th, 2019
ayodhye

ಲಕ್ನೋ : ಇಡೀ ದೇಶವೇ ಎದುರು ನೋಡುತ್ತಿರುವ ಮಹತ್ವದ ಅಯೋಧ್ಯೆ ತೀರ್ಪು ಶೀಘ್ರವೇ ಹೊರಬೀಳಲಿದ್ದು, ರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ತೀರ್ಪಿಗೂ ಮುನ್ನವೇ 500 ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ 12 ಸಾವಿರ ಮಂದಿ ಮೇಲೆ ಕಣ್ಣಿಟ್ಟಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತಿಹೊಂದಲಿದ್ದಾರೆ. ಅವರ ಅಧಿಕಾರಾವಧಿ ಮುಗಿಯುವ ಮುನ್ನ ಅಯೋಧ್ಯೆ ತೀರ್ಪು ಹೊರಬರಲಿದೆ. ಈ ಹಿನ್ನೆಲೆ ಯಾವುದೇ ಹಿಂಸಾಚಾರ ನಡೆಬಾರದೆಂದು ಉತ್ತರ ಪ್ರದೇಶ ಪೊಲೀಸರು […]

ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್ : ಬೇಸರಗೊಂಡ ನಟಿ

Thursday, November 7th, 2019
rashmika

ಬೆಂಗಳೂರು : ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮ್ಮ ಬಾಲ್ಯದ ಫೋಟೋಗೆ ಅಸಭ್ಯ ಪದಗಳನ್ನು ಬಳಸಿದವರ ವಿರುದ್ಧ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದರು. ಆದರೆ ನೆಟ್ಟಿಗರು ರಶ್ಮಿಕಾ ಅವರ ಈ ಫೋಟೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗಾಗಿ ರಶ್ಮಿಕಾ ಟ್ರೋಲ್ ಮಾಡಿದವರಿಗೆ ಖಡಕ್ಕಾಗಿಯೇ ಉತ್ತರಿಸಿದ್ದಾರೆ. ರಶ್ಮಿಕಾ ಅವರ ಬಾಲ್ಯದ ಫೋಟೋ ಮೇಲೆ ಟ್ರೋಲಾಯ ನಮಃ ಎಂಬ ಲೋಗೋ ಇದೆ. ಅಲ್ಲದೆ ಆ ಫೋಟೋವನ್ನು ಟ್ರೋಲ್ ಮಾಡಿ, ಅಸಭ್ಯ […]

ಸಂಚಾರ ನಿಯಮ ಉಲ್ಲಂಘಿಸಿದ ಆರೋಪ : ಕಾಲರ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್

Thursday, October 31st, 2019
Bantwal

ಬಂಟ್ವಾಳ : ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರರ ಜೊತೆ ಟ್ರಾಫಿಕ್ ಪೊಲೀಸರು ದುರ್ವರ್ತನೆ ತೋರಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಬೈಕಿನಲ್ಲಿ ಹಿಂಬದಿ ಸವಾರರೊಬ್ಬರು ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎಎಸ್‍ಐ ಬಾಲಕೃಷ್ಣ ಬೈಕ್ ಸವಾರರನ್ನು ನಿಲ್ಲಿಸಿದ್ದಾರೆ. ಬಳಿಕ ಯುವಕನ ಶರ್ಟ್ ಕಾಲರ್ ಹಿಡಿದು ತಳ್ಳುತ್ತಾ ಎಳೆದಾಡಿದ್ದಾರೆ. ಈ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪೇಟೆಯಲ್ಲಿ ನಡೆದಿದ್ದು, ಈ ದೃಶ್ಯವನ್ನು ಮತ್ತೊಬ್ಬ ಬೈಕ್ ಸವಾರ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು […]