ಅಕ್ರಮ ಗಳಿಕೆ – ಕೆಐಎಡಿಬಿ ವಿಶೇಷ ಅಧಿಕಾರಿಯ ಮೂರು ಮನೆಗಳ ಮೇಲೆ ಎಸಿಬಿ ದಾಳಿ
Friday, June 12th, 2020ಮಂಗಳೂರು : ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಕೆಐಎಡಿಬಿ ವಿಶೇಷ ಅಧಿಕಾರಿ ದಾಸೇಗೌಡ ಅವರ ಮಂಗಳೂರು, ಬೆಂಗಳೂರು ಹಾಗೂ ಮಂಡ್ಯದಲ್ಲಿರುವ ಮನೆಗಳ ಮೇಲೆ ಶುಕ್ರವಾರ ದಾಳಿ ನಡೆಸಿದ್ದಾರೆ. ಕೆಐಎಡಿಬಿ ವಿಶೇಷ ಅಧಿಕಾರಿಯಾಗಿದ್ದ ದಾಸೇಗೌಡ ಭೂಸ್ವಾಧೀನದ ಪರಿಹಾರ ಮೊತ್ತದಲ್ಲಿ ಕಮಿಷನ್ ಪಡೆದು 2019ರ ಡಿಸೆಂಬರ್ ನಲ್ಲಿ ಸಿಕ್ಕಿಬಿದ್ದಿದ್ದರು. ಸದ್ಯ ಲಂಚ ಸ್ವೀಕಾರ ಆರೋಪದಡಿ ಅಮಾನತ್ತಿನಲ್ಲಿದ್ದಾರೆ. ಆದುದರಿಂದ ವಿಶೇಷ ಅಧಿಕಾರಿಗಳು ದಾಸೇಗೌಡನಿಗೆ ಸೇರಿದ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ನಿವಾಸಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. […]