“ಜಲಜೀವನ ಮಿಷನ್” ಅನುಷ್ಠಾನ ಕುರಿತು ಸರಕಾರದ ಗಮನ ಸೆಳೆದ ಶಾಸಕ ಮಂಜುನಾಥ ಭಂಡಾರಿ
Monday, December 9th, 2024ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕಾಮಗಾರಿಗಳು ಅನುಷ್ಠಾನಗೊಳ್ಳದ ಕುರಿತು ಸರಕಾರದ ಗಮನನ್ನು ಸೆಳೆದರು. ಜಲಜೀವನ ಮಿಷನ್ ಯೋಜನೆಯಲ್ಲಿ ನೀರಿನ ಮೂಲಗಳು ಅನುಷ್ಠಾನವಾಗದ ಕುರಿತು ಪ್ರಸ್ತಾಪಿಸಿ ಶೀಘ್ರವಾಗಿ ಯೋಜನೆಗೆ ಸಂಬಂಧಿಸಿದ ನೀರಿನ ಮೂಲಗಳನ್ನು ಪ್ರಥಮವಾಗಿ ಶೋಧಿಸಿ ಅಳವಡಿಸುವ ಮೂಲಕ ಸಮರ್ಪಕ ಅನುಷ್ಠಾನಕ್ಕಾಗಿ ಶೂನ್ಯ ವೇಳೆಯಲ್ಲಿ ಸರಕಾರವನ್ನು ಒತ್ತಾಯಿಸಿದರು. ಮಳೆಗಾಲ ಮುಗಿದು ಚಳಿ ಕಾಲಿರಿಸಿದ್ದರೂ ಕರಾವಳಿಯಲ್ಲಿ […]