ಹೊಸ ವರ್ಷದ ದಿನದಂದೇ ರೈಲ್ವೆ ಪ್ರಯಾಣ ದರದಲ್ಲಿ ಹೆಚ್ಚಳ

Wednesday, January 1st, 2020
Railway

ನವದೆಹಲಿ : ಹೊಸ ವರ್ಷದ ದಿನದಂದೇ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಜೇಬಿಗೆ ಬರೆ ಎಳೆದಿದೆ. ರೈಲು ಪ್ರಯಾಣದ ದರ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಉಪನಗರ ರೈಲು ಪ್ರಯಾಣ ದರದಲ್ಲಿ ಬದಲಾವಣೆ ಇಲ್ಲ. ಆರ್ಡಿನರಿ ನಾನ್ ಎಸಿ, ಎಸಿ, ಶತಾಬ್ದಿ, ರಾಜಧಾನಿ, ತುರಂತ್ ರೈಲುಗಳಿಗೆ ದರ ಹೆಚ್ಚಳ ಅನ್ವಯವಾಗಲಿದೆ. ಟಿಕೆಟ್ ಕಾಯ್ದಿರಿಸುವಿಕೆ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಇಲಾಖೆ ತಿಳಿಸಿದೆ. ಈಗಾಗಲೇ ಕಾಯ್ದಿರಿಸಿರುವ ಟಿಕೆಟ್ಗಳಿಗೆ ದರ ಹೆಚ್ಚಳ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ […]

ಕೆದೂರು : ರೈಲ್ವೆ ಹಳಿ ಮೇಲೆ ಮಹಿಳೆಯ ಶವ ಪತ್ತೆ

Thursday, October 10th, 2019
kedoru

ಕೆದೂರು : ಕೆದೂರಿನ ರೈಲ್ವೆ ಹಳಿ ಮೇಲೆ ಮಹಿಳೆಯ ಶವವೊಂದು ಪತ್ತೆಯಾಗಿದ್ದು. ರಾತ್ರಿ ವೇಳೆ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಅನುಮಾನ ವ್ಯಕ್ತವಾಗಿದೆ. ಮೃತ ಮಹಿಳೆ ಸುಮಾರು 50 ವರ್ಷ ವಯಸ್ಸಿನ ಮೇಲ್ಪಟ್ಟಿದ್ದು, ದೇಹ ಸಂಪೂರ್ಣ ಛಿದ್ರಗೊಂಡಿದ್ದು ಗುರುತಿಸದ ಸ್ಥಿತಿಯಲ್ಲಿದೆ. ನೀಲಿ ಬಣ್ಣದ ಸೀರೆ ಧರಿಸಿದ್ದು ಉಳ್ತೂರು ಪರಿಸರದವರು ಎಂಬ ಅನುಮಾನವೂ ವ್ಯಕ್ತವಾಗಿದೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಕುಂದಾಪುರ ಶವಗಾರದಲ್ಲಿ ಮೃತದೇಹ ಇರಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿಲಾಗುತ್ತಿದೆ.  

ಕುಲಶೇಖರ, ರೈಲಿನ ಹಳಿಗೆ ಮಣ್ಣು ಕುಸಿತ; ಸಂಚಾರ ಸ್ಥಗಿತ

Friday, August 23rd, 2019
Kulshekar

ಮಂಗಳೂರು : ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಧರೆ ಕುಸಿತ ಪ್ರಕರಣಗಳು ಮುಂದುವರಿದಿದ್ದು, ಇದೀಗ ಕುಲಶೇಖರ ಬಳಿಯೂ ಹಳಿಗೆ ಮಣ್ಣು ಕುಸಿದ ಬಿದ್ದ ಪರಿಣಾಮ ಈ ಮಾರ್ಗವಾಗಿ ಶುಕ್ರವಾರ ಈ ಮಾರ್ಗವಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಕುಲಶೇಖರದಲ್ಲಿ ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕುಲಶೇಖರ-ಪಡೀಲ್ ರೈಲ್ವೆ ಸುರಂಗ ಮಾರ್ಗದ ಸನಿಹ ಈ ಘಟನೆ ನಡೆದಿದ್ದು ಈ ಹಿನ್ನಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಹಳಿಯಲ್ಲಿದ್ದ ಮಣ್ಣು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ […]

ಇನ್ಮುಂದೆ ರೈಲು ನಿಲ್ದಾಣದ ಒಳಗೆ ಸೆಲ್ಪಿ ತೆಗೆದುಕೊಂಡರೆ 2 ಸಾವಿರ ರೂ. ದಂಡ!

Friday, June 22nd, 2018
selfie

ಚೆನ್ನೈ: ಸೆಲ್ಪಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ಓಡುವ ರೈಲಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ದಿನೇಶ್‌ ಕುಮಾರ್‌ ಎಂಬ 16 ವರ್ಷದ ಬಾಲಕ ಮೃತಪಟ್ಟಿದ್ದ. ಇನ್ನೊಂದು ಪ್ರಕರಣದಲ್ಲಿ ಪಾರ್ಥಸಾರಥಿ ಎಂಬುವವ ಪ್ರಾಣ ಕಳೆದುಕೊಂಡಿದ್ದ. ಇಂತಹ ಘಟನೆಗಳಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆ, ತಮಿಳುನಾಡಿನ ರೈಲ್ವು ನಿಲ್ದಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವವರಿಗೆ ಸುಮಾರು 2 ಸಾವಿರ ರೂ. ದಂಡ ಹಾಕಲು ನಿರ್ಧರಿಸಿದೆ. ಈ ಬಗ್ಗೆ ಚೆನ್ನೈನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಮಂಡಳಿ, ಸೆಲ್ಪಿ […]

ರೈಲ್ವೆ ಮೇಲ್ಸೆತುವೆ ಕೆಳಗಡೆ ಸಿಲುಕಿಕೊಂಡ ಕಂಟೈನರ್: ಮಾಣಿ ಹೈವೇ ಸಂಚಾರ ಬಂದ್‌

Wednesday, February 7th, 2018
bantwala

ಮಂಗಳೂರು: ಪುತ್ತೂರು ತಾಲೂಕಿನ ಮಿತ್ತೂರಿನಲ್ಲಿ ರೈಲ್ವೆ ಮೇಲ್ಸೇತುವೆ ಕೆಳಗಡೆ ಬೃಹತ್ ಕಂಟೈನರೊಂದು ಸಿಲುಕಿಕೊಂಡು ಜನರು‌ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮುಂಜಾನೆ ಹೊತ್ತಿನಲ್ಲಿ ಕಂಟೈನರ್ ಸಿಲುಕಿಕೊಂಡಿದ್ದು ಈ ರಸ್ತೆಯಲ್ಲಿ ಸಂಚಾರಕ್ಕೆ ತೊಡಕುಂಟಾಗಿದೆ. ಮಾಣಿ-ಪುತ್ತೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವುದರಿಂದ‌ ಹೆದ್ದಾರಿಯಲ್ಲಿ ಸಂಚರಿಸುವವರು ಮುಂದೆ ಹೋಗಲಾಗದೆ ಪರದಾಡುತ್ತಿದ್ದಾರೆ.