ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮಂಗಳೂರು ಆಸ್ಪತ್ರೆಯಲ್ಲಿ ಸಾವು

Tuesday, April 21st, 2020
vidya

ಮಂಗಳೂರು :  ಬಾಳುಗೋಡು ಗ್ರಾಮದ ಉಪ್ಪುಕಳದ ನಿವಾಸಿ ವಿದ್ಯಾ (20) ಬಂದ್ಯಡ್ಕ ಅವರು ಮಂಗಳವಾರ  ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಂಗಳೂರಿನಲ್ಲಿ ನರ್ಸಿಂಗ್‌ ಮಾಡುತ್ತಿದ್ದ ಯುವತಿ ಇತ್ತೀಚೆಗೆ ಊರಿಗೆ ಬಂದಿದ್ದು ಮೂರು ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದರು. ಅಸ್ವಸ್ಥಗೊಂಡ ಆಕೆಯನ್ನು ಮನೆಯವರು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಮಂಗಳವಾರ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. ಮೃತರು ಉಪ್ಪುಕಳದ ವೆಂಕಟ್ರಮಣ ಅವರ ಪುತ್ರಿಯಾಗಿದ್ದು ತಾಯಿ, ಸಹೋದರರನ್ನು ಅಗಲಿದ್ದಾರೆ.