9ನೇ ದಿನವೂ ಮುಂದುವರಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ!

Wednesday, October 31st, 2018
toll-gate

ಮಂಗಳೂರು: ಇಲ್ಲಿನ ಟೋಲ್ ಗೇಟ್ ನವೀಕರಣಕ್ಕೆ ವಿರೋಧ ವ್ಯಕ್ತಪಡಿಸಿ, ಟೋಲ್ ಮುಚ್ಚಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಸಮಿತಿಯ ಹಗಲಿರುಲು ನಡೆಸುತ್ತಿರುವ ಧರಣಿ 9ನೇ ದಿನವೂ ಮುಂದುವರಿದಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಮಾತನಾಡಿ, ತಾತ್ಕಾಲಿಕ ಎಂದು ಆರಂಭವಾದ ಸುರತ್ಕಲ್ ಟೋಲ್ ಗೇಟ್ ಮೂರು ವರ್ಷವಾದರೂ ತೆರವುಗೊಳ್ಳದಿರುವುದು ಅಕ್ಷಮ್ಯ ಅಪರಾಧ. ಅಲ್ಲದೆ ಇದನ್ನು ಹೆಜಮಾಡಿಯ ಟೋಲ್ನೊಂದಿಗೆ ವಿಲೀನಗೊಲಿಸುವ ನಿರ್ಧಾರವನ್ನು ಜಾರಿಗೊಳಿಸದಿರುವ ಹಿಂದಿನ ಉದ್ದೇಶವೇನು? ಕೂಳೂರು ಸೇತುವೆ ಕುಸಿಯುವ ಭೀತಿಯಲ್ಲಿದೆ. ಆದರೆ ಸಂಸದ ನಳಿನ್ […]

ನೀತಿ ಸಂಹಿತೆ ಜಾರಿ: ಸರ್ಕಾರಿ ಕಾರು ಬಿಟ್ಟು ಬಸ್‌ನಲ್ಲೇ ಪ್ರಯಾಣಿಸಿದ ಶಾಸಕಿ ಶಕುಂತಲಾ ಶೆಟ್ಟಿ

Tuesday, March 27th, 2018
shakuntala-shetty

ಪುತ್ತೂರು: ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಪರಿಣಾಮವಾಗಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಸರ್ಕಾರಿ ಕಾರು ಬಿಟ್ಟು ಬಸ್‌ನಲ್ಲಿ ಪ್ರಯಾಣ ಬೆಳಸಿದರು. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಶಕುಂತಲಾ ಶೆಟ್ಟಿ ಅವರು ಸರ್ಕಾರಿ ಕಾರು ಬಿಟ್ಟು ಬಿಟ್ಟು ಬಸ್‌ನಲ್ಲೇ ಪ್ರಯಾಣಿಸಿದರು. ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಹಾಗಿಗಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ.

ತುಳುವರ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ ಯಶಸ್ವಿಯಾಗುವುದು: ಶಕುಂತಲಾ ಶೆಟ್ಟಿ

Saturday, September 3rd, 2016
Thuluvere-ayano

ಬದಿಯಡ್ಕ: ಚಾರಿತ್ರಿಕವಾಗಿ ಪ್ರಾಚೀನ ತುಳುನಾಡು ಸೌಹಾರ್ಧತೆ,ಭಾವೈಕ್ಯತೆಗೆ ವಿಶಿಷ್ಟ ಕೊಡುಗೆ ನೀಡಿದ್ದು,ತುಳುನಾಡೊಳಗಿನ ಪ್ರತಿಯೊಬ್ಬರೂ ತುಳುವರೆಂಬ ಭಾವ ತೀವ್ರತೆ ಇತ್ತು. ಆದರೆ ಇಂದು ಕುಸಿದಿರುವ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ ಯಶಸ್ವಿಯಾಗುವುದೆಂದು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಸಮಿತಿಯ ನೇತೃತ್ವದಲ್ಲಿ ಡಿ.9 ರಿಂದ ೧೩ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಕಾರ್ಯಾಲಯವನ್ನು ಬದಿಯಡ್ಕ ಗಲ್ಫ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸೋಣ ಅಮಾವಾಸ್ಯೆಯ […]