ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

Monday, November 27th, 2023
ಮಂಗಳೂರಿನಲ್ಲಿ ನಾಯಿ ಸಾಕಬೇಕಾದರೆ ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ ಅಗತ್ಯ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಬೀದಿ ನಾಯಿ ಗಳ ಹಾವಳಿಗಳು ಹೆಚ್ಚಾಗಿದ್ದು ಬೀದಿ ನಾಯಿಗಳಿಂದ ಕಡಿತಕ್ಕೊಳಗಾಗುವವರ ಸಂಖ್ಯೆಯೂ ಆಧಿಕವಾಗಿರುತ್ತದೆ. ನಗರದಲ್ಲಿ ರೇಬಿಸ್‌ಹರಡುವ ಸಂಭವ ಹೆಚ್ಚಾಗಿರುತ್ತದೆ. ಈ ಎಲ್ಲ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯು ನಗರದಲ್ಲಿ ಸಾಕು ನಾಯಿಗಳಿಗೆ ಪರವಾನಿಗೆ ಪಡೆಯುವಂತೆ ಸೂಚಿಸಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಪಾಲಿಕೆಯಿಂದ ಪರವಾನಿಗೆ ಪಡೆಯಲು ಅರ್ಜಿ ಪ್ರತಿ ಪಡೆದುಕೊಳ್ಳಬೇಕು. ಸಾಕು ನಾಯಿಗೆ ನೀಡಲಾಗಿರುವ ಲಸಿಕಾ ದಾಖಲೆ, ಮಾಲೀಕರ ಆಧಾರ್ ಕಾರ್ಡ್, ನೆರೆಹೊರೆಯವರಿಂದ ನಿರಾಕ್ಷೇಪಣಾ ಪತ್ರ, ಸಾಕು […]

ಪುತ್ತೂರಿನಲ್ಲಿ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ಪೇಟೆಗೆ ಬಂದ ವ್ಯಕ್ತಿ

Saturday, May 1st, 2021
dog Mask

ಪುತ್ತೂರು :  ಪೇಟೆಗೆ ಬಂದಾಗ ತಮ್ಮ ಜತೆ ಕರೆ ತಂದಿದ್ದ ಸಾಕು ನಾಯಿಗೂ ಮಾಸ್ಕ್‌ ತೊಡಿಸಿ ದ್ವಿಚಕ್ರ ವಾಹನದಲ್ಲಿ ಕರೆತಂದ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ. ಪ್ರವೀಣ್‌ ಎಂಬವರು ಗುರುವಾರ ಬೆಳಗ್ಗೆ ಪುತ್ತೂರು ನಗರಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಾಗ ನಾಯಿ ಮರಿಯನ್ನೂ ಕೂರಿಸಿಕೊಂಡು ಬಂದಿದ್ದರು. ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರು ಇದನ್ನು ಗಮನಿಸಿದ್ದರು. ತಾವು ಮಾಸ್ಕ್‌ ಧರಿಸಿದ್ದಲ್ಲದೆ ನಾಯಿ ಮರಿಗೂ ಮಾಸ್ಕ್‌ ಹಾಕಿದ್ದರು. ನಮ್ಮ ಸುರಕ್ಷತೆ ಬಗ್ಗೆ ಕಾಳಜಿ ವಹಿಸುತ್ತಿರುವಾಗ ಸಾಕುಪ್ರಾಣಿಗಳ ಬಗೆಗೂ ಕಾಳಜಿ ವಹಿಸಬೇಕಲ್ಲವೇ? ಇದು ನಮ್ಮ ಜವಾಬ್ದಾರಿಯಲ್ಲವೇ ಎಂದು ಹೇಳಿದರು.