ರಾಮಕೃಷ್ಣ ಮಿಷನ್ನಿಂದ ಮೋರ್ಗನ್ಸ್ ಗೇಟ್, ಮಹಾಕಾಳಿಪಡ್ಪುನಲ್ಲಿ ಸ್ವಚ್ಛತೆ
Monday, February 5th, 2018ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 4ನೆ ಹಂತದ 14ನೆ ವಾರದ ಸ್ವಚ್ಛತಾ ಕಾರ್ಯಕ್ರಮ ರವಿವಾರ ಮೋರ್ಗನ್ಸ್ ಗೇಟ್, ಮಹಾಕಾಳಿಪಡ್ಪುನಲ್ಲಿ ನಡೆಯಿತು. ಬೆಳಗ್ಗೆ 7:30ಕ್ಕೆ ರಾಗತರಂಗ ಸಂಸ್ಥೆಯ ಮುಖ್ಯಸ್ಥ ಸದಾನಂದ ಉಪಾಧ್ಯಾಯ ಹಾಗೂ ಸೀತಾರಾಮ್ ಎ. ಜಂಟಿಯಾಗಿ ಅಭಿಯಾನವನ್ನು ಶುಭಾರಂಭಗೊಳಿಸಿದರು. ಈ ಸಂದರ್ಭದಲ್ಲಿ ಕೆ.ಪ್ರಸಾದ್, ಪಿ.ಎನ್.ಭಟ್, ಸುರೇಶ್ ಶೆಟ್ಟಿ, ಲೆಕ್ಕಪರಿಶೋಧಕ ಕೆ. ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 250 ಮಂದಿ ಕಾರ್ಯಕರ್ತರು ಆರು ಗುಂಪುಗಳಾಗಿ ವಿಂಗಡಿಸಿಕೊಂಡು ಮಹಾಕಾಳಿಪಡ್ಪು ರೈಲ್ವೆ ಕ್ರಾಸಿಂಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರಮದಾನ ಕೈಗೊಂಡರು. ಸಂತ […]