ಸುಳ್ಯ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತ, ಖ್ಯಾತ ತೂಗುಸೇತುವೆಗಳ ನಿರ್ಮಾಪಕ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಬೆಳಗ್ಗೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ವಿಧಿವಶರಾದರು. ಕಳೆದ ಕೆಲ ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಮಾಜಮುಖಿ ಸೇವೆಗೆ ಮೀಸಲಾಗಿದ್ದ ಭಾರದ್ವಾಜ್ ಅವರು, ದೇಶದ ಉದ್ದಗಲಕ್ಕೂ 125ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ‘ಸೇತು ಬಂಧು’ ಹಾಗೂ ‘ಬ್ರಿಡ್ಜ್ಮ್ಯಾನ್ ಆಫ್ ಇಂಡಿಯಾ’ ಎಂದೇ ಜನಪ್ರಿಯರಾಗಿದ್ದರು. ಇವರ ಈ ಅಪೂರ್ವ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ದಕ್ಷಿಣ ಕನ್ನಡದ ಅರಂಬೂರಿನಲ್ಲಿ 1989ರಲ್ಲಿ ಪಯಸ್ವಿನಿ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗುಸೇತುವೆ ಇವರ ವೃತ್ತಿಜೀವನದ ಮೊದಲ ಹೆಜ್ಜೆಯಾಗಿತ್ತು. ಅಲ್ಲಿಂದ ಆರಂಭವಾದ ಈ ಸೇವಾ ಯಾನವು ಕೇರಳದಲ್ಲಿ 30, ಆಂಧ್ರಪ್ರದೇಶ ಹಾಗೂ ಒಡಿಶಾದಲ್ಲಿ ತಲಾ ಎರಡು ಸೇತುವೆಗಳ ನಿರ್ಮಾಣದೊಂದಿಗೆ ವಿಸ್ತಾರಗೊಂಡಿತು. ಉಳಿದ ಬಹುತೇಕ ಸೇತುವೆಗಳು ಕರ್ನಾಟಕದ ವಿವಿಧ ಗ್ರಾಮೀಣ ಭಾಗಗಳಲ್ಲಿ ನಿರ್ಮಾಣಗೊಂಡು, ಇಂದಿಗೂ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










