ಬೆಳ್ತಂಗಡಿ : ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿರುವ ಕಾರಣ, ಪ್ರವಾಸಿಗರ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜುಲೈ 8ರಿಂದ ಗಡಾಯಿಕಲ್ಲು ಚಾರಣಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ತಾತ್ಕಾಲಿಕ ನಿರ್ಬಂಧ ವಿಧಿಸಿದೆ.
ಸತತ ಮಳೆಯಿಂದಾಗಿ ಚಾರಣದ ಹಾದಿ ಅತ್ಯಂತ ಜಾರಿಕೆಯಾಗಿದ್ದು, ಇಂತಹ ಸಂದರ್ಭದಲ್ಲಿ ಬೆಟ್ಟ ಹತ್ತುವುದು ಪ್ರವಾಸಿಗರ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಹವಾಮಾನದಲ್ಲಿ ಸುಧಾರಣೆ ಕಂಡುಬಂದು, ಚಾರಣ ಮಾರ್ಗಗಳು ಸುರಕ್ಷಿತವೆಂದು ಖಾತರಿಯಾದ ನಂತರವಷ್ಟೇ ಮುಂದಿನ ದಿನಗಳಲ್ಲಿ ನಿರ್ಬಂಧವನ್ನು ತೆರವುಗೊಳಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಜೂನ್ 1ರಂದು ಆರಂಭಗೊಂಡಿದ್ದ ಈ ಚಾರಣವು, ಅಸ್ಥಿರ ಹವಾಮಾನದ ಕಾರಣದಿಂದಾಗಿ ಹಿಂದೆ ಒಮ್ಮೆ ಸ್ಥಗಿತಗೊಂಡು, ಬಳಿಕ ಜೂನ್ 25ರಂದು ಪುನರಾರಂಭವಾಗಿತ್ತು. ಇದೀಗ ಮಳೆಯ ಆರ್ಭಟ ಹೆಚ್ಚಾದ ಕಾರಣ ಮತ್ತೆ ಬಂದ್ ಮಾಡಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










