ಮಂಗಳೂರು : ನಗರದ ಎಮ್ಮೆಕೆರೆಯಲ್ಲಿರುವ ರಾಮ ಲಕ್ಷ್ಮೀನಾರಾಯಣ ಕನ್ವೆನ್ಷನ್ ಹಾಲ್ನಲ್ಲಿ ನೂತನವಾಗಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಬಾಲ್ಕನಿಯ ತಡೆಗೋಡೆ ದಿಢೀರನೆ ಕುಸಿದುಬಿದ್ದು ದೊಡ್ಡ ದುರಂತ ಸಂಭವಿಸಿದೆ. ಈ ಸಮಾರಂಭಕ್ಕಾಗಿ ನೂರಾರು ವಿದ್ಯಾರ್ಥಿಗಳು ಸಭಾಂಗಣದಲ್ಲಿ ನೆರೆದಿದ್ದು, ಕಾರಿಡಾರ್ ಭಾಗದಲ್ಲಿ ವಿಪರೀತ ಜನದಟ್ಟಣೆ ಏರ್ಪಟ್ಟಿತ್ತು. ದುರ್ಬಲವಾಗಿದ್ದ ಕಾರಿಡಾರ್ ಆಧಾರ ಗೋಡೆಯ ಮೇಲೆ ವಿದ್ಯಾರ್ಥಿಗಳು ಒರಗಿನಿಂತ ಪರಿಣಾಮ, ಗೋಡೆ ಧರಾಶಾಹಿಯಾಗಿ ಐವರು ವಿದ್ಯಾರ್ಥಿಗಳು ಎತ್ತರದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹಳೆಯಂಗಡಿಯ ಮಹಮ್ಮದ್ ಶಮಾಜ್ (16), ಸೂರಿಂಜೆಯ ಮಹಮ್ಮದ್ ಶನಾನ್ ಅಹ್ಮದ್ (18), ಅಡ್ಯಾರ್ನ ಹನೀಫ್ (23), ಕಾವೂರ್ನ ದಾವೂದ್ ಫರ್ಸಿನ್ ಅಹ್ಮದ್ (18) ಹಾಗೂ ಮಂಗಳೂರು ಕಸ್ಟಾ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಎಂದು ಗುರುತಿಸಲಾಗಿದೆ. ತಕ್ಷಣವೇ ಎಲ್ಲರನ್ನೂ ನಗರದ ಹೈಲಾಂಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದ ಮಂಗಳೂರು ನಗರ ಪೊಲೀಸ್ ಆಯುಕ್ತರು, ಬಳಿಕ ಸ್ಪಷ್ಟನೆ ನೀಡಿ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ಖಚಿತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









