ಮಂಗಳೂರು : ಕೆಲವೇ ದಿನಗಳ ಹಿಂದಷ್ಟೇ ಜನಿಸಿರಬಹುದಾದ ಪುಟ್ಟ ಮಗುವೊಂದು ತಲಪಾಡಿ ನದಿಯಲ್ಲಿ ಸತ್ತುಬಿದ್ದಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಸ್ಥಳೀಯರು ಇಂದು ಬೆಳಿಗ್ಗೆ ನದಿ ತಟದಲ್ಲಿ ಮೃತ ಮಗುವನ್ನು ಪತ್ತೆ ಹಚ್ಚಿದರು. ಬಳಿಕ ಪಂಚಾಯತ್ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಗು ಗಂಡಾಗಿದ್ದು, ಮಗುವಿನ ದೇಹದ ಮೇಲೆ ಕೆಲವು ಗಾಯದ ಗುರುತುಗಳಿದ್ದು ಅದು ಸಾವಿನ ನಂತರ ಉಂಟಾಗಿರಬಹುದೆಂದು ಪೊಲೀಸರು ಊಹಿಸಿದ್ದಾರೆ.
ಇದೀಗ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ, ಮೃತ ಮಗುವಿನ ಹೆತ್ತವರ ಬಗ್ಗೆ ಯಾವುದೇ ಸುಳಿವಿಲ್ಲ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English