ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ನಾನಲ್ಲ : ಶ್ರುತಿ

2:51 PM, Saturday, July 13th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Shruthi ಬೆಂಗಳೂರು: ವಿಷಾಹಾರ ಸೇವನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಶ್ರುತಿ ಶುಕ್ರವಾರ (ಜು.12) ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು.

ಬಿಡುಗಡೆಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ನಿನ್ನೆ ರಾತ್ರಿಯಿಂದ ಎಲ್ಲರನ್ನೂ ಕಾಯಿಸಿದ್ದಕ್ಕೆ ಮೊದಲು ನಾನು ಕ್ಷಮೆ ಕೇಳುತ್ತೇನೆ. ರಾತ್ರಿ 8 ಗಂಟೆ ಹೊತ್ತಿಗಾದರೂ ನಿಮ್ಮೊಂದಿಗೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ತುಂಬಾ ಆಯಾಸವಾಗಿತ್ತು ಸಾಧ್ಯವಾಗಲಿಲ್ಲ ಎಂದು  ಹೇಳಿದರು.

ಆತ್ಮಹತ್ಯೆ ಯತ್ನ ವದಂತಿಗೆ ಪ್ರತಿಕ್ರಿಯಿಸಿರುವ ಸ್ಯಾಂಡಲ್‌ವುಡ್ ನಟಿ ಶೃತಿ, ಇದು ಕೇವಲ ವದಂತಿ ಅಷ್ಟೇ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿ ನಾನಲ್ಲ ಎಂದು ಹೇಳುವ ಮೂಲಕ ಶನಿವಾರ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಆತ್ಮಹತ್ಯೆ ವದಂತಿ ಸಂಬಂಧ ಪುಣ್ಯ ಖಾಸಗಿ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರುತಿ , ನಾನು ಮಾನಸಿಕವಾಗಿ ನೊಂದಿರುವುದ ನಿಜ. ಆದರೆ ಕಷ್ಟಗಳಿಗೆ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಲ್ಲ ಮತ್ತು ಕಷ್ಟಗಳನ್ನು ಎದುರಿಸುವ ಆತ್ಮ ಸ್ಥೈರ್ಯ ನನ್ನಲ್ಲಿದೆ. ನಾನು ಮಾಧ್ಯಮಗಳ ಮುಂದೆ ಯಾವುದನ್ನು ಮುಚ್ಚಿಟ್ಟಿಲ್ಲ ನನ್ನ ಕಷ್ಟ ಸುಖ ಎಲ್ಲವನ್ನು ಹೇಳಿಕೊಂಡಿದ್ದೇನೆ ಎಂದು ಶ್ರುತಿ ತಿಳಿಸಿದ್ದಾರೆ.

ನಿನ್ನೆ ಶಿರಡಿಯಿಂದ ವಾಪಸ್ ಬರುವಾಗ ರಸ್ತೆ ಬದಿಯಲ್ಲಿ ತಯಾರಿಸಿದ ಊಟ ಸೇವಿಸಿದ್ದರ ಪರಿಣಾಮ ಪುಡ್ ಪಾಯ್ಸನ್ ಆಗಿ ಅಸ್ವಸ್ಥೆಯಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದೆ ವಿನಃ ಆತ್ಮಹತ್ಯೆಗೆ ಯತ್ನಿಸಿರಲಿಲ್ಲ ಎಂದು ಶ್ರುತಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ. ಕಳೆದ 8 ತಿಂಗಳಲ್ಲಿ ನನಗೆ 2 ಸರ್ಜರಿಗಳಾಗಿವೆ. ಆದ್ದರಿಂದ ನಾನು ಆಸ್ಪತ್ರೆಗೆ ಬಂದು ಹೋಗುವುದ ಸಾಮಾನ್ಯ. ಇದನ್ನೇ ನೆಪ ಮಾಡಿಕೊಂಡು ಸುಖಾಸುಮ್ಮನೆ ವದಂತಿಗಳನ್ನು ಸೃಷ್ಟಿಸುವುದು ಸರಿಯಲ್ಲ ಎಂದರು. ಅಲ್ಲದೆ ಮುಂದಿನ ತಿಂಗಳಲ್ಲಿ ಮತ್ತೊಂದು ಸರ್ಜರಿ ಮಾಡಿಸಿಕೊಳ್ಳಬೇಕೆಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು.

ಇತ್ತೀಚೆಗಷ್ಟೆ ಪತ್ರಕರ್ತ ಚಂದ್ರಚೂಡರನ್ನು ಎರಡನೇ ಮದುವೆಯಾಗಿದ್ದ ಶ್ರುತಿ , ತಮ್ಮ ದಾಂಪತ್ಯ ಜೀವನದಿಂದ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಶುಕ್ರವಾರ ಮಾಧ್ಯಮಗಳಲ್ಲಿ ವರದಿಯಾಗಿತ್ತು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English