ಸುರತ್ಕಲ್ : ಎಂ.ಆರ್.ಪಿ.ಎಲ್. ಕಾರ್ಖಾನೆಯಲ್ಲಿ ಸೆಪ್ಟೆಂಬರ್ 30ರಂದು ಸಂಭವಿಸಿದ್ದ ಭೀಕರ ಸ್ಫೋಟದ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಮನೀಶ್ ಕರ್ಕಡ ಅವರ ಕುಟುಂಬ ವರ್ಗಕ್ಕೆ ಸಂಸ್ಥೆಯ ವತಿಯಿಂದ ಗುರುವಾರ ಧನ ಸಹಾಯದ ಚೆಕ್ ಅನ್ನು ವಿತರಿಸಲಾಯಿತು.
ಮೂಡಬಿದ್ರೆಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಹಾಗೂ ಎಂ.ಆರ್.ಪಿ.ಎಲ್.ನ ಮಾನವ ಸಂಪನ್ಮೂಲ ವಿಭಾಗದ ಮಹಾಪ್ರಬಂಧಕರಾದ ಪ್ರಶಾಂತ್ ಪುದುವಾಳ್ ಅವರು ಒಟ್ಟು ತೊಂಬತ್ತು ಲಕ್ಷ ರೂಪಾಯಿಗಳ ಮೊತ್ತದ ಚೆಕ್ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಟ್ರಸ್ಟ್ ಮೂಲಕ ಸಿಗಲಿರುವ ಉದ್ಯೋಗದ ನೇಮಕಾತಿ ಆದೇಶ ಪತ್ರವನ್ನು ಮೃತ ಮನೀಶ್ ಕರ್ಕಡ ಅವರ ತಂದೆಯವರಿಗೆ ಅಧಿಕೃತವಾಗಿ ಒಪ್ಪಿಸಿದರು.
ಈ ಸಾಂತ್ವನ ಸಂದರ್ಭದಲ್ಲಿ ಎಂ.ಆರ್.ಪಿ.ಎಲ್. ನೌಕರರ ಸಂಘದ ಅಧ್ಯಕ್ಷ ಶರತ್ ಜೋಗಿ, ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜಂಟಿ ಕಾರ್ಯದರ್ಶಿ ಸುನೀಲ್, ಕೋಶಾಧಿಕಾರಿ ಪುರುಷೋತ್ತಮ ಹಾಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಂತೋಷ್ ಪೂಂಜ ಸೇರಿದಂತೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









