ಏರ್‌ ಇಂಡಿಯಾ ವಿಮಾನದಲ್ಲಿ ಆಕ್ರಮ ಚಿನ್ನ ಸಾಗಾಟ ; 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಚಿನ್ನ ವಶ

10:51 AM, Sunday, July 21st, 2013
Share
1 Star2 Stars3 Stars4 Stars5 Stars
(4 rating, 6 votes)
Loading...

Illigal Goldಮಂಗಳೂರು: ಶನಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ  ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟದ ಎರಡು ಪ್ರಕರಣಗಳನ್ನು ಪತ್ತೆಹಚಿದ್ದಾರೆ.

ಆಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ದಂಪತಿ ಸಹಿತ ಒಟ್ಟು ಮೂವರನ್ನು ಬಂಧಿಸಿ 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಬಂಗಾರವನ್ನು ವಶಪಡಿಸಿ ಕೊಂಡಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬೆಳಗ್ಗೆ 9.30 ಕ್ಕೆ  ತಲುಪಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಈ ಆರೋಪಿಗಳು ಪ್ರಯಾಣಿಸಿದ್ದರು. ವಿಮಾನ ದುಬೈನಿಂದ ರಾತ್ರಿ ಹೊರಟಿತ್ತು.

ಭಟ್ಕಳದ ದಂಪತಿ ಅರ್ಶದ್‌ ಅಲಿ ಮುಸ್ತಾಕ್ ಅಹ್ಮದ್‌ (30) ಮತ್ತು ಅವರ ಪತ್ನಿ ಫಾತಿಮಾ ನಸ್ರಿನ್‌ (29) ತಂದ 2 ಕೆ.ಜಿ. ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಮಂಗಳೂರು ವಿಭಾಗದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶ ಪಡಿಸಿಕೊಂಡಿದ್ದಾರೆ. ತಲಾ 160 ಗ್ರಾಂ ತೂಕದ 2 ಚಿನ್ನದ ಬಿಸ್ಕಿಟ್‌ಗಳು, ಉಳಿದವುಗಳು ಚಿನ್ನದ ವಿವಿಧ ಆಭರಣಗಳಾಗಿವೆ. ಇದರ ಮೌಲ್ಯ 50 ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.

ಪತ್ನಿ ಫಾತಿಮಾ ನಸ್ರಿನ್‌ ಅವರು ಧರಿಸಿದ ಮೇಲ್ಭಾಗದ ಮತ್ತು ಸೊಂಟದ ಒಳ ಉಡುಪುಗಳಲ್ಲಿ ಈ ಚಿನ್ನ ಪತ್ತೆಯಾಗಿತ್ತು. ವಿಮಾನದಿಂದ ಇಳಿದು ಬರುತ್ತಿದ್ದ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆಗೆ ಒಳ ಪಡಿಸಿದಾಗ ಈ ಚಿನ್ನ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ದಂಪತಿ ಜತೆ ಮೂರುವರು ವರ್ಷ ಪ್ರಾಯದ ಒಂದು ಹೆಣ್ಣು ಮಗು ಕೂಡಾ ಇದೆ.

ಕೇರಳದ ಕಾಸರಗೋಡಿನ ಪಳ್ಳಿಕೆರೆಯ ಹೈದರಾಲಿಯವರಿಂದ ಸುಮಾರು 2 ಲಕ್ಷ ರೂ. ಮೌಲ್ಯದ 160 ಗ್ರಾಂ ಚಿನ್ನಾಭರಣವನ್ನು ಕಸ್ಟಮ್ಸ್‌ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಈತ ಚಿನ್ನವನ್ನು ವಿದ್ಯುತ್‌ ಉಪಕರಣ ಎಕ್ಸ್‌ಟೆನ್ಶನ್‌ ಕೋರ್ಡ್‌ನಲ್ಲಿರಿಸಿ ಸಾಗಿಸಿದ್ದಾನೆ.

ಆರೋಪಿ ದಂಪತಿಯನ್ನು ಮತ್ತು ಮಗುವನ್ನು ಶನಿವಾರ ರಾತ್ರಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಉದಯಾನಂದ ಅವರ ಮೂಲಕ ಮಂಗಳೂರಿನ ಸಿಜೆಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ಮೂವರಿಗೂ 10 ದಿನಗಳ ರಿಮಾಂಡ್‌ ವಿಧಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English