ಗರೋಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ತುಂಬುವ ಘಟಕ ಪತ್ತೆ

8:40 PM, Friday, July 26th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Illigal Gas Fillಮಂಗಳೂರು: ಗರೋಡಿಯಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದ ತಹಶೀಲ್ದಾರ್ ಮತ್ತು ಗ್ರಾಮಾಂತರ ಪೊಲೀಸರು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ತುಂಬಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ತಾರನಾಥ(50) ಬಂಧಿತ ವ್ಯಕ್ತಿಯಾಗಿದ್ದು ಈತ ಗ್ಯಾಸ್ ಸಿಲಿಂಡರ್ ಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ.

ಆತನ ಮನೆಯಿಂದ 15.6 ಕೆ.ಜಿ.ಯ 16 ಸಿಲಿಂಡರ್ ಮತ್ತು 14.2 ಕೆ.ಜಿಯ 22 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ಎಚ್ ಪಿ ಮೋಟರ್, ತೂಕಯಂತ್ರ ಮತ್ತು ಐದು ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Illigal Gas Fillವಾಹನ ಬಳಕೆಯ ಮತ್ತು ಗ್ರಹ ಬಳಕೆಯ ಸಿಲಿಂಡರ್ ಗಳಿಗೆ ಆಕ್ರಮ  ಗ್ಯಾಸ್ ತುಂಬಿಸುತ್ತಿದ್ದ. ಪತ್ತೆಯಾದ ಸಿಲಿಂಡರ್ ಗಳು ಇಂಡೇನ್ ಗ್ಯಾಸ್ ಮತ್ತು ಭಾರತ್ ಗ್ಯಾಸ್ ಕಂಪನಿಗೆ ಸೇರಿದ್ದಾಗಿದೆ.

ತಹಶೀಲ್ದಾರ್ ಶಿವಪ್ಪ ಲಮನಿ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English