ಮುಖ್ಯಮಂತ್ರಿ ತವರಿನಲ್ಲಿ ಕನ್ನಡ ನುಡಿ ತೇರು ಜಾಗೃತಿ ಜಾಥಾಕ್ಕೆ ಚಾಲನೆ

1:20 PM, Thursday, October 13th, 2011
Share
1 Star2 Stars3 Stars4 Stars5 Stars
(10 rating, 5 votes)
Loading...

Kannada Nudi Teru At Sullia

ಸುಳ್ಯ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ದ.ಕ ಮತ್ತು ಉಡುಪಿ ಜಿಲ್ಲಾಡಳಿತ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ಸುಳ್ಯದಲ್ಲಿ ಬುಧವಾರ ಆಯೋಜಿಸಲಾದ ಕನ್ನಡ ನುಡಿ ತೇರು ಜಾಗೃತಿ ಜಾಥಾಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಚಾಲನೆ ನೀಡಿದರು.

ಕನ್ನಡ ಭಾಷೆ, ಗಡಿನಾಡು ಅಭಿವೃದ್ಧಿಗೆ ಸರಕಾರ ಅನುದಾನ ನೀಡಲಿದ್ದು, 250 ಕೋಟಿ ರೂಪಾಯಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿದೆ , ಗಡಿನಾಡ ಪ್ರದೇಶದಲ್ಲಿ ಕನ್ನಡ ಶಾಲೆಯ ಉಳಿವಿಗಾಗಿ 10 ಮಕ್ಕಳಿಗಿಂತ ಕಡಿಮೆ ಇದ್ದ ಶಾಲೆಗಳನ್ನು ಮುಚ್ಚುದೆ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೊತ್ಸಾಹ ನೀಡಲಾಗುವುದು ಎಂದರು.

ನನ್ನ ಆಡಳಿತ ಅವಧಿಯಲ್ಲಿ ಭ್ರಷ್ಟಾಚಾರ ದಿಂದ ದೂರ ಉಳಿದು ಜಿಲ್ಲೆಯ ಹಾಗೂ ರಾಜ್ಯದ ಜನತೆಯ ಪ್ರೀತಿಯನ್ನು ಸದಾ ಉಳಿಸಿಕೊಂಡು ಕೆಟ್ಟ ಹೆಸರು ಬಾರದಂತೆ ಪಾರದರ್ಶಕ ಆಡಳಿತ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ನಿಮ್ಮ ಸಮಸ್ಯೆಗಳಿಗೆ ಮಧ್ಯ ರಾತ್ರಿಯೂ ನನಗೆ ಪೋನ್‌ ಮಾಡಿ ದೂರು ಸಲ್ಲಿಸಬಹುದು. ನನ್ನ ಗೃಹ ಕೃಷ್ಣದಲ್ಲಿ ಕ್ಯಾಮರಾ ಅಳವಡಿಸಿದ್ದೇನೆ. ವೆಬ್‌ಸೈಟ್‌ ಮೂಲಕ ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಬಹುದು ಎಂದರು.

Kannada Nudi Teru At Sullia

ಒಂದೇ ವೇದಿಕೆಯಲ್ಲಿ ಸನ್ಮಾನ ಹಾಗೂ ನುಡಿ ತೇರು ಜಾಥಾ ಉದ್ಘಾಟನೆ ಎರಡೂ ಕಾರ್ಯಕ್ರಮಗಳು ಜತೆಜತೆಯಾಗಿ ನಡೆದವು.

ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಡಿ.ವಿ. ಸದಾನಂದ ಗೌಡ ಅಭಿನಂದನಾ ಸಮಿತಿ ವತಿಯಿಂದ ಎರ್ಪಡಿಸಲಾದ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಡಿ.ವಿ. ಅವರನ್ನು ಸಮ್ಮಾನಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಡಿ.ವಿ. ಅವರನ್ನು ಸಮ್ಮಾನಿಸಿ, ಮಾತನಾಡಿದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಡಿ.ವಿ. ಅವರು ಮುಖ್ಯಮಂತ್ರಿಗಳಾಗಿರುವುದು ಈ ಮಣ್ಣಿನ ಸಂಸ್ಕೃತಿಗೆ ದೊರೆತ ಸ್ಥಾನ. ತುಳು ಭಾಷೆ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಆಗುವಂತೆ ಮುಖ್ಯಮಂತ್ರಿ ಒತ್ತಡ ಹೇರಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಬದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಮತ್ತು 102 ತೂಗುಸೇತುವೆ ನಿರ್ಮಾಣದಲ್ಲಿ ಸಾಧನೆ ಮಾಡಿದ ಸಾಧಕ ಗಿರೀಶ ಭಾರದ್ವಾಜ ಅವರನ್ನು ಮುಖ್ಯಮಂತ್ರಿ ಡಿ.ವಿ. ಅವರು ಸಮ್ಮಾನಿಸಿದರು.

ಜಾನಪದ ಕಲಾ ಜಾಥಾವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ| ಚಂದ್ರಶೇಖರ ಕಂಬಾರ ಉದ್ಘಾಟಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ತುಳುವನ್ನು 8ನೇ ಪರಿಚ್ಛೇದನಕ್ಕೆ ಸೇರಿಸಲು ಪ್ರಯತ್ನಿಸಬೇಕು ಎಂದರು.

ಕನ್ನಡ ಮಾಧ್ಯಮದಲ್ಲಿ ಓದುವ ಶಾಲೆಗಳಲ್ಲಿ 15 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಸರಕಾರದ ನಿರ್ಧಾರವನ್ನು ಕೈಬಿಡಬೇಕು. ಕನ್ನಡ ಉಳಿವಿಗಾಗಿ ಕನ್ನಡ ತಂತ್ರಾಂಶ ಉಚಿತವಾಗಿ ಸಿಗುವಂತಾಗಬೇಕು.ಕನ್ನಡ ದಿನಾಚರಣೆಯಂದು ನಾಡಧ್ವಜವನ್ನು ಕಡ್ಡಾಯವಾಗಿ ಅರಳಿಸುವ ಕೆಲಸವಾಗಬೇಕೆಂದರು. ಆಂಗ್ಲ ಭಾಷೆಯ ವ್ಯಾಮೋಹದಿಂದಾಗಿ 15 ದಿವಸಕ್ಕೊಂದು ಭಾಷೆ ಸಾಯುತ್ತಿದೆ. ಹೀಗೆ 6,000 ಭಾಷೆಗಳು ನಿರ್ನಾಮವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆಯನ್ನು ಶಾಸಕ ಎಸ್‌. ಅಂಗಾರ ವಹಿಸಿ, ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌, ವಿಧಾನಸಭಾ ಉಪಸಭಾಧ್ಯಕ್ಷ ಯೋಗೀಶ ಭಟ್‌, ಸಂಸದ ನಳಿನ್‌ಕುಮಾರ್‌ ಕಟೀಲು, ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ ಕಾರ್ಣಿಕ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಕೆಎಫ್‌ಡಿಸಿ ಅಧ್ಯಕ್ಷ ಎಸ್‌.ಎನ್‌. ಮನ್ಮಥ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪಕುಮಾರ್‌ ಕಲ್ಕೂರ, ತಾಲೂಕು ಅಧ್ಯಕ್ಷೆ ಎಂ. ಮೀನಾಕ್ಷಿ ಗೌಡ, ತಾ.ಪಂ. ಅಧ್ಯಕ್ಷ ಮುಳಿಯ ಕೇಶವ‌ ಭಟ್‌, ನ.ಪಂ. ಅಧ್ಯಕ್ಷೆ ಸುಮತಿ ಜಿ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್‌. ವಿಜಯಪ್ರಕಾಶ್‌, ಐಜಿ ಆಲೋಕ್‌ ಮೋಹನ್‌, ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ, ಡಾಟಿ ಸದಾನಂದ ಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ, ನುಡಿತೇರಿನ ಸಂಚಾಲಕ ವಿಷ್ಣು ನಾಯ್ಕ, ಕಾರ್ಯದರ್ಶಿ ಶಾಂತರಾಜು, ಅಕಾಡೆಮಿ ಉಪಾಧ್ಯಕ್ಷ ಡಾ| ಕೆ.ವಿ. ಚಿದಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್‌, ಬಿ. ಸುರೇಶ್‌, ಶಶಿಧರ ಅಡಪ, ಪ್ರಧಾನ ಸಂಯೋಜಕ ನಾರಾಯಣ ಕೇಕಡ್ಕ ವೇದಿಕೆಯಲ್ಲಿದ್ದರು.

ಸಮಿತಿ ಕಾರ್ಯದರ್ಶಿ ಭಾಸ್ಕರ ಬಯಂಬು ವಂದಿಸಿದರು. ಡಾ| ಚಂದ್ರಶೇಖರ ದಾಮ್ಲೆ ಮತ್ತು ಜಾಥಾ ಸಂಯೋಜಕ, ರಂಗಕರ್ಮಿ ಕೆ.ವಿ. ನಾಗರಾಜ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕೋಶಾಧಿಕಾರಿ ಎಂ.ಪಿ. ಉಮೇಶ್‌ ಉಪಸ್ಥಿತರಿದ್ದರು.

4 ಪ್ರತಿಕ್ರಿಯ - ಶೀರ್ಷಿಕೆ - ಮುಖ್ಯಮಂತ್ರಿ ತವರಿನಲ್ಲಿ ಕನ್ನಡ ನುಡಿ ತೇರು ಜಾಗೃತಿ ಜಾಥಾಕ್ಕೆ ಚಾಲನೆ

  1. tjbhtqto, tluarjxubypa.com/

    WjjeEa , [url=http://mgnahggknbft.com/]mgnahggknbft[/url], [link=http://hysstabzlfly.com/]hysstabzlfly[/link], http://vsuaxlvvoaqp.com/

  2. imbjta, gqhbrlwwiaoy.com/

    pMChbx jxoklbfvsgkx

  3. isymeyjek, ieyvsiuglcxj.com/

    kmezxC yaproknqzgts

  4. Denver, www.yahoo.com/

    Thanks for the great info dog I owe you bgigity.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English