ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರಿಂದ ಕ್ರಿಸ್ಮಸ್‌ ಸಂದೇಶ

6:28 PM, Saturday, December 24th, 2011
Share
1 Star2 Stars3 Stars4 Stars5 Stars
(8 rating, 7 votes)
Loading...

Aloysius Paul D’Souza

ಮಂಗಳೂರು : ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಶುಕ್ರವಾರ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಷಪ್ಸ್ ಹೌಸ್‌ನಲ್ಲಿ ಕೇಕ್‌ ಕತ್ತರಿಸಿ ಕ್ರಿಸ್ಮಸ್‌ ಸಂದೇಶ ನೀಡಿದರು.

ನಿರಾಶ್ರಿತರಿಗೆ ಆಶ್ರಯ ನೀಡಬೇಕೆಂಬ ಸಾಮಾಜಿಕ ಮತ್ತು ಮಾನವೀಯ ಕಳಕಳಿಯ ಸಂದೇಶವನ್ನು ಕ್ರಿಸ್ಮಸ್‌ ನೀಡುತ್ತದೆ. ಯೇಸು ಕ್ರಿಸ್ತರು ಜನಿಸಿದಾಗ ಅವರಿಗೆ ಛತ್ರದಲ್ಲೆಲ್ಲಿಯೂ ಜಾಗ ಸಿಕ್ಕಿರಲಿಲ್ಲ; ಹಾಗಾಗಿ ತಾಯಿ ಮೇರಿ ಶಿಶು ಯೇಸುವನ್ನು ಬಟ್ಟೆಯಲ್ಲಿ ಸುತ್ತಿ ಗೋವುಗಳ ಕೊಟ್ಟಿಗೆಯಲ್ಲಿ (ಗೋದಲಿ) ಮಲಗಿಸಿದ್ದರು ಎಂದು ಬೈಬಲ್‌ ತಿಳಿಸುತ್ತದೆ. ನಿರಾಶ್ರಿತರಿಗೆ ಆಶ್ರಯ ನೀಡಬೇಕೆಂಬ ಸಂದೇಶವನ್ನು ಈ ವಿದ್ಯಮಾನ ಸಾರುತ್ತದೆ ಎಂದು ಧರ್ಮಾಧ್ಯಕ್ಷರು ವಿವರಿಸಿದರು.

ಕ್ರೈಸ್ತ ಧರ್ಮ ಸಭೆ ಜನಹಿತಕ್ಕಾಗಿ ಕೈಗೊಳ್ಳುವ ಕೈಗಾರಿಕೋದ್ಯಮ ಮತ್ತು ಸಾಮಾಜಿಕ ಅಭಿವೃದ್ಧಿ ಹಾಗೂ ಸುಧಾರಣೆಯನ್ನು ವಿರೋಧಿಸುವುದಿಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಜನರು ವ್ಯಾಪಕವಾಗಿ ನಿರಾಶ್ರಿತರಾಗುವುದನ್ನು ಅಥವಾ ಪರಿಸರಕ್ಕೆ ಹಾನಿ ಆಗುವುದನ್ನು ವಿರೋಧಿಸುತ್ತದೆ.

ಯುಪಿಸಿಎಲ್‌, ಎಂಎಸ್‌ಇಝಡ್‌, ಐಎಸ್‌ಪಿಆರ್‌ಎಲ್‌ ಯೋಜನೆಗಳಿಂದ ಜನರು ನಿರಾಶ್ರಿತರಾಗುವುದು ಮತ್ತು ಕಲುಷಿತ ಪರಿಸರದಲ್ಲಿ ಜನರು ಭಯ ಭೀತಿಯಿಂದ ವಾಸಿಸುತ್ತಿರುವ ಬಗ್ಗೆ ತಮಗೆ ಆತಂಕವಿದೆ. ನಿರಾಶ್ರಿತರಿಗೆ ಆಶ್ರಯ ಎಂಬ ಕ್ರಿಸ್ಮಸ್‌ ಸಂದೇಶ ಇಲ್ಲಿ ಹೆಚ್ಚು ಪ್ರಸ್ತುತ ಎಂದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English