ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಮೊಬೈಲ್‌ ನಿಷೇಧಿಸಿದ ಮೇಯರ್‌

7:48 PM, Saturday, February 18th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

Mayor Praveen Kumar

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಭೆ ನಡೆಯುವಾಗ ಸದನದೊಳಗೆ ಮೊಬೈಲ್‌ ಬಳಕೆಯನ್ನು ನಿಷೇಧಿಸಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ, ಶುಕ್ರವಾರ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮೇಯರ್‌ ಪ್ರವೀಣ್‌ ಅಂಚನ್‌ ಅವರು ಸದನ ಕಲಾಪ ನಡೆಯುತ್ತಿರುವಾಗ ಮೊಬೈಲ್‌ ಬಳಸದಂತೆ ಆದೇಶ ನೀಡಿದ್ದಾರೆ.

ವಿಪಕ್ಷ ಸದಸ್ಯ ಆಶ್ರಫ್‌ ಮೊದಲಿಗೆ ವಿಷಯ ಪ್ರಸ್ತಾವಿಸಿ ಸದನದ ಒಳಗಡೆ ಮೊಬೈಲ್‌ ಬಳಕೆ ನಿಷೇಧಿಸಬೇಕು ಎಂದು ಸೂಚಿಸಿದರು. ಮಾಧ್ಯಮದವರು ನಮ್ಮನ್ನೇ ಗುರಿಯಾಗಿಸಿಕೊಂಡು ಕಣ್ಣಿಡುತ್ತಿದ್ದಾರೆ. ಸದನ ಸಭೆ ನಡೆಯುವಾಗ ಕೆಲವರು ಮೊಬೈಲ್‌ ಬಳಸುತ್ತಿದ್ದಾರೆ. ಈ ಕಾರಣದಿಂದಾಗಿ ಮೊಬೈಲ್‌ ಬಳಕೆ ನಿಷೇಧಿಸುವಂತೆ ಅವರು ಆಗ್ರಹಿಸಿದರು. ಮರಿಯಮ್ಮ ಥಾಮಸ್‌ ಪಾಲಿಕೆಯೊಳಗೆ ಮೊಬೈಲ್‌ ಬಳಸದೆ ಮೂರು ಗಂಟೆಗಳ ಕಾಲ ಸಭೆಯಲ್ಲಿ ಭಾಗವಹಿಸಿದರೆ, ನಮ್ಮ ವಾರ್ಡ್‌ನ ಸಮಸ್ಯೆ ತಿಳಿಯೋದು ಹೇಗೆ ಎಂದು ವಿರೋಧಿಸಿದರು.

ಸದಸ್ಯ ಕೆ. ಮಧುಕಿರಣ್‌ ಸದನದೊಳಗೆ ಮೊಬೈಲ್‌ ತರಲೇ ಬಾರದಾ? ಅಥವಾ ತಂದಿದ್ದರೆ, ಒಳಗೆ ಬಳಸಬಾರದಾ? ನನ್ನಲ್ಲಿರುವ ಮೊಬೈಲ್‌ ತುಂಬ ಬೆಲೆಬಾಳುವಂತಹುದು. ಹೀಗಿರುವಾಗ ಅದನ್ನು ಹೊರಗಡೆ ಇಟ್ಟು ಬರುವುದು ಅಥವಾ ಬೇರೆಯವರಲ್ಲಿ ಕೊಟ್ಟುಬರುವುದು ಕಷ್ಟ. ಈ ಕಾರಣಕ್ಕಾಗಿ ಸೂಕ್ತ ಉತ್ತರ ನೀಡಬೇಕು ಎಂದು ಅವರು ಮೇಯರ್‌ ಅವರನ್ನು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೇಯರ್‌ ಪ್ರವೀಣ್‌ ಅಂಚನ್‌ ಮೊಬೈಲ್‌ ತರಬಾರದು ಎಂದು ಹೇಳುತ್ತಿಲ್ಲ. ತಂದರೆ, ಸ್ವಿಚ್‌ ಆಫ್‌ ಮಾಡಿ ಅಥವಾ ಸೈಲೆಂಟ್‌ ಮೋಡ್‌ನ‌ಲ್ಲಿ ಇಡಬೇಕು. ಸದನ ಸಭೆ ನಡೆಯುವಾಗ ಮೊಬೈಲ್‌ನಲ್ಲಿ ಮಾತನಾಡಬಾರದು. ಮಾತನಾಡುವ ಅಗತ್ಯವಿದ್ದರೆ ಹೊರಗೆ ಹೋಗಿ ಮಾತನಾಡಿ ಬರಬೇಕು. ಇದು ಸದನದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅನ್ವಯ ಎಂದು ಸ್ಪಷ್ಟೀಕರಣ ನೀಡಿದರು.

ವಿಧಾನಸಭೆಯಲ್ಲಿ ಬ್ಲೂ ಫಿಲ್ಮ್ ವೀಕ್ಷಿಸಿ, ಮೂವರು ಸಚಿವ ಸ್ಥಾನ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯಲ್ಲಿ ವಿಪಕ್ಷ ಸದಸ್ಯರೆ ಆಡಲಿತ ಪಕ್ಷವನ್ನು ಎಚ್ಚರಿದ್ದಾರೆ. ಅದಕ್ಕೆ ಮೇಯರ್ ಕೂಡ ಸಮ್ಮತಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English