ಬೆಳ್ತಂಗಡಿ : ಭಾರೀ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೋಚಕ ತಿರುವು ಲಭ್ಯವಾಗಿದ್ದು, ಪೊಲೀಸರ ತನಿಖೆಯಲ್ಲಿ ಇದು ಬರೀ ಹಸಿ ಸುಳ್ಳು ಎಂಬುದು ಬಯಲಾಗಿದೆ. ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ವೇಳೆ ಮುಸುಕುಧಾರಿಗಳು ಕಾರಿನಲ್ಲಿ ಬಂದು ತನ್ನನ್ನು ಅಪಹರಿಸಲು ಯತ್ನಿಸಿ, ಕೈಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿನಿ ಕತೆ ಕಟ್ಟಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಹರೀಶ್ ಪೂಂಜ ಹಾಗೂ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ಆದರೆ, ಘಟನೆಯ ಬಗ್ಗೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ವಿದ್ಯಾರ್ಥಿನಿಯ ಹೇಳಿಕೆಗಳಲ್ಲಿ ಅನುಮಾನಗಳು ಮೂಡಲಾರಂಭಿಸಿದವು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಂತಹ ಯಾವುದೇ ಕಾರು ಸಂಚರಿಸಿದ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ಇದರಿಂದಾಗಿ ಪೊಲೀಸರು ವಿದ್ಯಾರ್ಥಿನಿಯನ್ನು ಮತ್ತಷ್ಟು ಪ್ರಶ್ನಿಸಿದಾಗ ಆಕೆ ತಬ್ಬಿಬ್ಬುಗೊಂಡಿದ್ದಾಳೆ. ಕಾರಿನ ಬಣ್ಣ, ನಂಬರ್ ಪ್ಲೇಟ್ ಹಾಗೂ ಘಟನಾ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ನೀಡಲು ಆಕೆಗೆ ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸರ ಹಂತ ಹಂತದ ವಿಚಾರಣೆಗೆ ಬಗ್ಗಿದ ವಿದ್ಯಾರ್ಥಿನಿ, ಮಂಗಳೂರಿನ ನಗರ ಪ್ರದೇಶದ ಕಾಲೇಜಿನಲ್ಲಿ ಓದಬೇಕೆಂಬ ಹಂಬಲದಿಂದ ಈ ಕಿಡ್ನಾಪ್ ನಾಟಕವಾಡಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾಳೆ.
ತನ್ನ ಆಸೆಯಂತೆ ನಗರದ ಕಾಲೇಜು ಸೇರಲು ಮನೆಯವರನ್ನು ಒಪ್ಪಿಸಲು ಸಾಧ್ಯವಾಗದಿದ್ದಾಗ, ಈ ರೀತಿ ಅಪಹರಣದ ಕತೆ ಸೃಷ್ಟಿಸಿ ತಾನೇ ಬ್ಲೇಡ್ನಿಂದ ಕೈಗೆ ಗೀಚಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಕಾಲೇಜು ಪುಸ್ತಕಗಳನ್ನು ಮನೆಯ ಸಮೀಪವೇ ಸುಟ್ಟು ಹಾಕಿ, ಕಿಡ್ನಾಪರ್ಸ್ ಬ್ಯಾಗ್ ಹೊತ್ತೊಯ್ದಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಗ್ರಾಮೀಣ ಭಾಗದ ಕಾಲೇಜು ಬಿಡಲು ಆಕೆ ಮಾಡಿದ್ದ ಈ ಸ್ಕೆಚ್ ನೋಡಿ ಪೊಲೀಸರೇ ದಂಗಾಗಿದ್ದಾರೆ. ಸದ್ಯ ಪ್ರಕರಣವು ಸುಖಾಂತ್ಯ ಕಂಡಿದ್ದು, ಸಾರ್ವಜನಿಕರಲ್ಲಿ ಮೂಡಿದ್ದ ಆತಂಕ ದೂರವಾಗಿದೆ.
ಬೆಳ್ತಂಗಡಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಂಗಳೂರು ಕಾಲೇಜು ಸೇರಲು ವಿದ್ಯಾರ್ಥಿನಿಯಿಂದಲೇ ಸುಳ್ಳು ಕತೆ!

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು