ಮಂಗಳೂರು : ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಪರಿಸರ ಕಾಳಜಿಯ ಲಾವ್ದತೊ ಸಿ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು.
2015 ರಲ್ಲಿ ಅಂದಿನ ಪೋಪ್ ಫ್ರಾನ್ಸಿಸ್ ಅವರು ನೀಡಿದ ಕರೆಯನ್ವಯ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಚರ್ಚ್ ಗಳಲ್ಲಿ ಪರಿಸರಕ್ಕೆ ಪೂರಕವಾದ ಗಿಡಗಳನ್ನು ನೆಡುವ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ.
ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಸಿಯಸ್ ಕುವೆಲ್ಲೊ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಗಿಡಗಳನ್ನು ನೆಡುವುದರಿಂದ ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಬರ ಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಪ್ರೇಮಿಗಳಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸರ್ವ ಆಯೋಗಗಳ ಸಂಚಾಲಕ ಜೋಸ್ಲಿನ್ ಲೋಬೊ, ಪರಿಸರ ಆಯೋಗದ ಸಂಚಾಲಕಿ ಸೆಲಿನ್ ಡಿ ಸೋಜಾ, ಮಾಜಿ ಉಪಾಧ್ಯಕ್ಷ ವಿಲಿಯಂ ಲೋಬೊ, ಅಕಾರ್ ಎಂಟರ್ ಪ್ರೈಸಸ್ ನ ಮಾಲಕ ಮೆಲ್ವಿನ್ ಡಿ ಸೋಜಾ, ಸೇಕ್ರೆಡ್ ಹಾರ್ಟ್ ವಾರ್ಡಿನ ಪ್ರತಿನಿಧಿ ರಿಚಾರ್ಡ್ ಮಾರ್ಟಿಸ್, ಗಾಯನ ಮಂಡಳಿಯ ಸಂಚಾಲಕಿ ಲಿಝೀ ಫೆರ್ನಾಂಡಿಸ್. ವಾರ್ಡಿನ ಮುಖ್ಯಸ್ಥರು, ಪ್ರತಿನಿಧಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









