ಡಾ. ಬಿ.ಮಾಧವ ಭಂಡಾಯವರಿಗೆ ಗಣ್ಯರಿಂದ ಅಂತಿಮ ನಮನ

11:25 AM, Friday, July 20th, 2012
Share
1 Star2 Stars3 Stars4 Stars5 Stars
(9 rating, 2 votes)
Loading...

Madava Bandaryಮಂಗಳೂರು : ಮಂಗಳವಾರ ರಾತ್ರಿ ನಿಧನರಾದ ಆರೆಸ್ಸೆಸ್ ಮಾಜಿ ವಿಭಾಗ ಸಂಘ ಚಾಲಕ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮಾಧವ ಭಂಡಾರಿ ಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಬೋಳೂರು ರುದ್ರಭೂಮಿಯಲ್ಲಿನೆರವೇರಿತು.

ನಗರದ ಸಂಘನಿಕೇತನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು  ಸಮಾಜ ಬಾಂಧವರು ಪಡೆದು ಗೌರವ ಸಲ್ಲಿಸಿದರು. ಬಿ. ಜನಾರ್ದನ ಪೂಜಾರಿ  ಮಾಧವ ಭಂಡಾರಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಆರೆಸ್ಸೆಸ್ ಹಿರಿಯ ನಾಯಕ ದಾ.ಮ. ರವೀಂದ್ರ, ಆರೆಸ್ಸೆಸ್ ನಲ್ಲಿ 35 ವರ್ಷಗಳ ಕಾಲ ದುಡಿದಿದ್ದ ಡಾ. ಭಂಡಾರಿಯವರು ತನ್ನ್ನ ಕ್ಲಿನಿಕ್‌ನಲ್ಲಿ ಕನಿಷ್ಠ ಮೊತ್ತಕ್ಕ್ಕೆ ಔಷಧಿ ನೀಡುತ್ತಿದ್ದರು. ತನ್ನ ಸ್ವಂತ ಕ್ಲಿನಿಕ್‌ನ್ನು ಆರೆಸ್ಸೆಸ್ ಸೇವೆಗೆ ಬಳಸಿಕೊಳ್ಳಲು ದಾನಪತ್ರ ಬರೆದಿದ್ದಾರೆ ಎಂದು ಹೇಳಿದರು.

ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅಭಿಮಾನದ ರೂಪದಲ್ಲಿ ಲಭಿಸಿದ 56 ಲಕ್ಷ ರೂ.ಗಳನ್ನು ಸಂಸ್ಥೆಗಳಿಗೆ ಹಂಚಿದ್ದರು. ದಲಿತ, ಕೊರಗ ಬಂಧು ಗಳ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸಿದ್ದರು. 15 ದಿನಗಳ ಹಿಂದೆ ಅವರು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಗ ಚಿಕಿತ್ಸೆ ವೆಚ್ಚ ಭರಿಸಲು ಅವರಲ್ಲಿ ಹಣ ಇರಲಿಲ್ಲ. ಈ ಸಂದರ್ಭ ದಲ್ಲಿ ತನ್ನನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದರು.ಡಾ. ಭಂಡಾರಿಯವರ ಆದರ್ಶ, ಧ್ಯೇಯವೇ ಅವರನ್ನು ಉನ್ನತ ವ್ಯಕ್ತಿತ್ವಕ್ಕೆ ಏರಿಸಿದೆ. ಜು.29ರಂದು ಅವರಿಗೆಸಾರ್ವಜನಿಕವಾಗಿ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಮಾತನಾಡಿ ಡಾ. ಭಂಡಾರಿಯವರು ಹಾಕಿಕೊಟ್ಟ ಹಾದಿ ಸಂಘದಕಾರ್ಯಕರ್ತರಿಗೆ ಮಾರ್ಗದರ್ಶಿ ಎಂದರು. ವಿಶ್ವ ಹಿಂದು ಪರಿಷತ್ ವಿಭಾಗ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ವಿಭಾಗ ಸಂಘ ಚಾಲಕ ಡಾ. ವಾಮನ ಶೆಣೈ, ಉಪ ಸಭಾಪತಿ ಎನ್. ಯೋಗೀಶ್ ಭಟ್, ಶಾಸಕ ಜೆ. ಕೃಷ್ಣ ಪಾಲೆಮಾರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಶೀಲ್ ನರೋನ್ಹ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ, ದಲಿಸ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್ ವಾದ) ದ.ಕ. ಜಿಲ್ಲಾ ಸಂಚಾಲಕ ರಮೇಶ್ ಕೊಟ್ಯಾನ್ ಹಾಗೂ ನಾಗರಿಕ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಅಧ್ಯಕ್ಷ ಕೆ.ಸೋಮನಾಥ್ ನಾಯಕ್, ಸ್ಥಾಪಕ ಟ್ರಸ್ಟಿಗಳಾದ ರಂಜನ್ ರಾವ್ ಯರ್ಡೂರು ಮತ್ತು ಕೆ.ಸುಬ್ರಾಯ ಶೆಣೈ ಸಂತಾಪ ಸೂಚಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English