ಕರಾವಳಿಯಲ್ಲಿ ಪುರುಷರೇ ಬಂಜೆಯರು !

4:37 PM, Wednesday, October 24th, 2012
Share
1 Star2 Stars3 Stars4 Stars5 Stars
(8 rating, 2 votes)
Loading...

Banjeಮಂಗಳೂರು : ದೇಶದಲ್ಲಿ ಬಂಜೆ ಪುರಷರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಂಗಳೂರು ನಗರವೊಂದರಲ್ಲೇ ಕಳೆದ ಕೆಲವು ವರ್ಷಗಳ ಪರೀಕ್ಷೆಯಲ್ಲಿ ಶೇಕಡಾ 40 ಪುರುಷರು ಸಂತಾನೋತ್ಪತ್ತಿಗೆ ವಿಫಲರಾಗಿರುವ ಆತಂಕಕಾರಿ ಅಂಶವೊಂದನ್ನು ವೈದ್ಯರೊಬ್ಬರು ಬಹಿರಂಗ ಪಡಿಸಿದ್ದಾರೆ.

`ಒಂದು ಕಾಲದಲ್ಲಿ ದಂಪತಿಯೊಂದು ಮಗುವನ್ನು ಪಡೆಯಲು ವಿಫಲವಾಗಿದ್ದರೆ ಅದಕ್ಕೆ ಹೆಣ್ಮಕ್ಕಳೇ ಕಾರಣ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಈ ಪರಿಕಲ್ಪನೆ ಬದಲಾಗಿದ್ದು, ವೈದ್ಯರು ಹೇಳುವ ಪ್ರಕಾರ ಶೇಕಡಾ 40ಕ್ಕಿಂತಲೂ ಅಧಿಕ ಪ್ರಕರಣಗಳಲ್ಲಿ ಪುರುಷನೇ ಬಂಜೆಯಾಗಿರುವುದು ಪತ್ತೆಯಾಗಿದೆ. ಹಿಂದೆ ಬಹುತೇಕ ಟ್ರಕ್ ಡ್ರೈವರ್ ಸೇರಿದಂತೆ ಬಹುಕಾಲ ಕುಳಿತುಕೊಂಡು ಕೆಲಸ ಮಾಡುವಂತಹ ಪುರುಷರಲ್ಲಿ ಈ ತೊಂದರೆ ಕಂಡುಬರುತ್ತಿತ್ತು. ಆದರೆ ಇಂದು ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಪುರುಷರಲ್ಲಿ ಈ ಬಂಜೆತನ ಸಮಸ್ಯೆ ಕಂಡುಬರುತ್ತಿದೆ’ ಎಂದು ಮಂಗಳೂರು ಮೂಲದ ಬಂಜೆತನ ತಜ್ಞೆ ಡಾ. ರೂಪಾ ಕೆ ಎಸ್ ಹೇಳಿದ್ದಾರೆ. ದಶಕಗಳ ಹಿಂದೆ ಶೇ. 20 ಇದ್ದಂತಹ ಬಂಜೆ ಪುರುಷರ ಸಂಖ್ಯೆ ಇಂದು ಆತಂಕಕಾರಿ ಬೆಳವಣಿಗೆ ಕಂಡಿದೆ.

ಜೀವನ ಶೈಲಿ ಬದಲಾವಣೆ, ಒತ್ತಡ, ಬೊಜ್ಜು, ಪರಿಸರ ಮಾಲಿನ್ಯ, ದೈಹಿಕ ವ್ಯಾಯಾಮದ ಕೊರತೆ, ಆಹಾರ ಸೇವನಾ ಶೈಲಿಯ ಬದಲಾವಣೆ, ಧೂಮಪಾನ, ಮದ್ಯಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಹಲವು ಪ್ರಾಕೃತಿಕ ಅಂಶಗಳು ಮತ್ತು ಜೀವನ ವಿಧಾನದ ಆಯ್ಕೆಗಳು ಮೊದಲ ಹಲವು ಅಂಶಗಳು ಪುರುಷ ಬಂಜೆತನಕ್ಕೆ ಕಾರಣವಾಗಿದೆ ಎಂದು ರೂಪಾ ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಇನ್ನೊoದು ಪ್ರಮುಖವಾದ ಅಂಶವೆಂದರೆ ಮೊಬೈಲ್ ಪೋನು ಮತ್ತು ಲ್ಯಾಪ್ಟಾಪ್ ಬಳಕೆ ಹೆಚ್ಚಳ. ಹೆಚ್ಚಿನ ಪುರುಷರು ಮೊಬೈಲ್ ಫೋನನ್ನು ಜೇಬಲ್ಲಿ ಅಥವಾ ಬೆಲ್ಟಲ್ಲಿ ಸಿಕ್ಕಿಸಿರುತ್ತಾರೆ.

ಮೊಬೈಲ್ಗಳ ವಿಕಿರಣದಿಂದಾಗಿ ವೀರ್ಯಾಣು ಸಂಖ್ಯೆ ಇಳಿಕೆಯಾಗುತ್ತದೆ. ಅದೇ ರೀತಿ ತೊಡೆ ಮೇಲೆ ಇಟ್ಟು ಲ್ಯಾಪ್ ಟಾಪ್ ಬಳಕೆ ಮಾಡುತ್ತಿರುವುದರಿಂದ ಸ್ಥಳೀಯ ಉಷ್ಣ ತ ಹೆಚ್ಚಾಗುತ್ತದೆ. ಇದರಿಂದ ವೀರ್ಯದಲ್ಲಿ ಅಸಮಾನತೆಗಳಾಗುವುದು ಹೆಚ್ಚಾಗುತ್ತದೆ ಎಂದು ಬಂಜೆತನ ತಜ್ಞರ ಅಭಿಪ್ರಾಯಪಟ್ಟಿದ್ದಾರೆ. ಸ್ವಾಭವಿಕವಾಗಿ ಮಕ್ಕಳನ್ನು ಪಡೆಯಲಾಗದ ಪುರುಷರು ವಿಟ್ರೊ  ಫರ್ಟಿಲೈಜೇಷನ್ (ಐವಿಎಫ್) ಮುಖಮಾಡುತ್ತಾರೆ. ಆದರೆ ಈ ವಿಧಾನದಲ್ಲಿ ಯಶಸ್ವಿ ಕಾಣುವುದು ಬಹಳ ವಿರಳ. ಕಳೆದ ಕೆಲವು ವರ್ಷಗಳಲ್ಲಿ ಪುರುಷರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯೆಂದರೆ ವೀರ್ಯಾಣು ಸಂಖ್ಯೆಯ ಕೊರತೆ.  ಬಂಜೆತನ ಸಮಸ್ಯೆ ಈಗ ಪುರುಷ ಮತ್ತು ಮಹಿಳೆಯರಲ್ಲಿ ಸಮಾನವಾಗಿದೆ. ಶೇಕಡಾ 40 ಮಹಿಳೆಯರು ಮತ್ತು ಪುರುಷರು ಬಂಜೆತನ ಸಮಸ್ಯೆ ಹೊಂದಿದ್ದು , ಇದಕ್ಕೆ ಕೆಲವೊಂದು ನಿರ್ಧಿಸ್ಟ ಕಾರಣಗಳನ್ನು ಹೇಳಬಹುದಾಗಿದ್ದರೆ, ಉಳಿದಂತೆ ತಲಾ 10 ಶೇಕಡಾ ಬಂಜೆತನಕ್ಕೆ ಕಾರಣವನ್ನು ವಿವರಿಸಲು ಸಾಧ್ಯವಾಗುತ್ತಿ ಲ್ಲ  ಎನ್ನೋದು ಮಂಗಳೂರು ರಾಯಲ್ ಹೆಲ್ತ್ ಕ್ಲಿನಿಕ್ ನ ರಾಣಾ ಅವರ ಮಾತು.

ವೀರ್ಯಾಣು ಪ್ರಮಾಣ ಸರಿಸುಮಾರು 60 ಮಿಲಿಯನ್ ಕ್ಕಿಂತ ಕಡಿಮೆ ಇರುವವರನ್ನು ಬಂಜೆಯರು ಎಂದು ಹೇಳಿಕೊಳ್ಳಬಹುದು. ಈಗ ಶೇ. 95ರಷ್ಟು ಪುರುಷರಲ್ಲಿಯೇ ಸಮಸ್ಯೆ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತದೆ.ಇದಕ್ಕೆ ಕಾರಣ ಬಿಸಿ ನೀರಿನ ಸ್ನಾನ, ಗುಟ್ಕಾ ಸೇವನೆ, ಹಸ್ತ ಮೈಥುನ ಎಲ್ಲವೂ ಪುರುಷರ ವೀರ್ಯಾಣು ಶಕ್ತಿಯನ್ನು ಕಡಿಮೆ ಮಾಡುತ್ತದೆ. ಹೆಚ್ಚಾಗಿ ದೇಶದ ಉತ್ತರ ಭಾಗದಲ್ಲಿ ಗುಟ್ಕಾ ಸೇವನೆಯನ್ನು ಬಾಲ್ಯದಲ್ಲಿಯೇ ಆರಂಭಿಸಿರುತ್ತಾರೆ. ಇಲ್ಲಿನವರ ಮುಖ್ಯ ಸಮಸ್ಯೆಯೇ ವೀರ್ಯಾಣು ಶಕ್ತಿ ಕಡಿಮೆಯಾಗಿರೋದು. ಆದರೆ ಕರಾವಳಿಯಲ್ಲೂ ಇಂತಹ ಪರಿಸ್ಥಿತಿ ಇತ್ತೀಚೆಗಷ್ಟೇ ನಿರ್ಮಾಣವಾಗಿದೆ ಎನ್ನೋದು ಡಾ. ರಾಣಾ ಅವರ ಮಾತು. ಈ ಮೂಲಕ ಕರಾವಳಿಯಲ್ಲಿ ಪುರುಷರೇ ಬಂಜೆತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆಗಳು ಕಾಣಿಸಿಕೊಳ್ಳುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English