ಮಂಗಳೂರು : ಶ್ರೀ ಮಂಗಳಾದೇವಿ ಸೇವಾ ಸಮಿತಿಯ 56ನೇ ಸಾರ್ವಜನಿಕ ಗಣೇಶೋತ್ಸವ ಕ್ಕೆ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಆಗಸ್ಟ್ 27 ಬುಧವಾರ ಬ್ರಹ್ಮ ಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರಿಂದ ಗಣಹೋಮ ಹಾಗು ಶ್ರೀ ವಿನಾಯಕ ದೇವರ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳು ನಡೆಯಿತು.
56ನೇ ಸಾರ್ವಜನಿಕ ಗಣೇಶೋತ್ಸವ ದ ದೀಪ ಪ್ರಜ್ವಲನೆಯನ್ನು ಪ್ರಭಾಕರಶೆಟ್ಟಿ ಮತ್ತು ಡಾ ಶ್ರೀನಿಧಿ ನೆರವೇರಿಸಿದರು.
ಬಳಿಕ ಭಕ್ತಿ ಸಂಗೀತ, ಭಾಜನಾ ಕಾರ್ಯಕ್ರಮಗಳು ಮಧ್ಯಾಹ್ನ ಮಹಾಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಶ್ರೀ ಮಂಗಳಾದೇವಿ ಸೇವಾ ಸಮಿತಿಯ ಅಧ್ಯಕ್ಷ ದಿಲ್ ರಾಜ್ ಆಳ್ವ , ಗೌರವಾಧ್ಯಕ್ಷ ಬಿ. ಅಶೋಕ್ ಕುಮಾರ್, ಕೋಶಾಧಿಕಾರಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಂಗೇರ ಓಣಿಕೆರೆ ಹಾಗೂ ಪದಾಧಿಕಾರಿಗಳು, ಮಹಿಳಾಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಆಗಸ್ಟ್ 28 ರಂದು ಬೆಳಿಗ್ಗೆ 6 ರಿಂದ ಅಷ್ಟೋತ್ತರ ನಾರಿಕೇಳ ಗಣಹೋಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಆಗಸ್ಟ್ 29 ರಂದು ಬೆಳಿಗ್ಗೆ ದೀಪಾರಾಧನೆಯೊಂದಿಗೆ ಉಷಾ ಪೂಜೆ, ಭಜನೆ ಮಧ್ಯಾಹ್ನ 1.10 ಕ್ಕೆ ಮಹಾಪೂಜೆ ನಡೆಯಲಿದೆ.
ಸಂಜೆ 4 ರಿಂದ ಭಜನೆ, 6.30 ರಿಂದ ಶ್ರೀ ವಿನಾಯಕ ದೇವರ ಶೋಭಾಯತೇ ನಡೆಯಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









