ಮಂಗಳೂರು :ಸೂಪರ್‌ಹಿಟ್ಸ್ 93.5 ರೆಡ್ ಎಫ್‌ಎಮ್ ವತಿಯಿಂದ ದೀಪಾವಳಿ ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ರೆಡ್ ರಥವನ್ನು ನಗರದಲ್ಲಿ ನಿನ್ನೆ ಆರಂಭಿಸಲಾಗಿದೆ. ಇನ್‌ಲ್ಯಾಂಡ್ ಗ್ರೂಪ್‌ನ ಚೇರ್‌ಮನ್ ಶ್ರೀ ಸಿರಾಜ್ ಅಹಮ್ಮದ್ ಅವರು ರೆಡ್ ಎಫ್ಎಮ್ ರೆಡ್ ರಥಕ್ಕೆ ಚಾಲನೆ ನೀಡಿದರು.
ಮಂಗಳೂರಿನ ರೇಡಿಯೋ ಇತಿಹಾಸದಲ್ಲಿಯೇ ಇದು ಮೊಟ್ಟ ಮೊದಲ ಪ್ರಯತ್ನವಾಗಿದ್ದು ಮಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಮಂಗಳೂರಿನ ಜನತೆಗೆ ದೀಪಾವಳಿ ಕೊಡುಗೆಯೊಂದಿಗೆ ವಿಶಿಷ್ಠ ಅನುಭವ ನೀಡಲಿದೆ.
ಈ ರೆಡ್ ರಥ ದಲ್ಲಿ ಕಚೇರಿಯಲ್ಲಿರುವಂತೆ ಸ್ಟೂಡೀಯೋ ವನ್ನು ಜೋಡಿಸಲಾಗಿದ್ದು, ರೇಡಿಯೋ ಜಾಕಿ ಕೂಡ ಈ ರಥದಲ್ಲೇ ತನ್ನ ಕರ್ತವ್ಯ ನಿರ್ವಹಿಸುವ ಮೂಲಕ ಜನಸಾಮಾನ್ಯರೊಂದಿಗೆ ಬೆರೆತು ವಿಶಿಷ್ಠ ಅನುಭವ ನೀಡಲಿದ್ದಾರೆ. ಮಾತ್ರವಲ್ಲದೇ ಕೆಲವೊಂದು ನಿರ್ಧಿಷ್ಠ ಸ್ಥಳಗಳಲ್ಲಿ ರಥವನ್ನು ನಿಲ್ಲಿಸಿ ದೀಪಾವಳಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಹಾಗೂ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಿದ್ದಾರೆ. ಇಂದಿನಿಂದ ನವೆಂಬರ್ 17ರವರೆಗೆ ನಗರದಲ್ಲಿ ಸಂಚರಿಸಲಿರುವ ಈ ರಥದಲ್ಲಿ ಲೈವ್ ಪ್ರದರ್ಶನ ನೀಡಲಾಗುವುದು. ಮಾತ್ರವಲ್ಲದೇ ರೆಡ್ ಎಫ್‌ಎಮ್ ಆರ್‌ಜೆಗಳ ಕಾರ್ಯಕ್ರಮ ನಿರ್ವಾಹಣ ಶೈಲಿಯನ್ನು ಸಾರ್ವಜನಿಕರು ಅತೀ ಸಮೀಪದಲ್ಲಿ ವೀಕ್ಷಿಸಬಹುದು.
ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‌ನ ನಿರ್ದೇಶಕ ಮೆರಾಜ್ ಯೂಸೂಫ್, ವಾಲ್ಸ್‌ವ್ಯಾಗನ್ ಮಂಗಳೂರು ಘಟಕದ ಪ್ರಬಂಧಕ ಶ್ರೀ ಚರಣ್, ಎಲ್‌ಜಿ ಸಂಸ್ಥೆಯ ಮಂಗಳೂರು ಶಾಖೆಯ ಪ್ರಬಂಧಕ ಶೂಕ್, ಮಾರುಕಟ್ಟೆ ಮ್ಯಾನೇಜರ್ ಶ್ರೀ ಸೂರ್ಯಾ ಭಾಗವಹಿಸಿದ್ದರು. ಸೂಪರ್‌ಹಿಟ್ಸ್ 93.5 ರೆಡ್ ಎಫ್‌ಎಮ್‌ನ ಕಾರ್ಯಕ್ರಮ ನಿರ್ಮಾಪಕ ಯಶ್‌ರಾಜ್ ಟಿ.ಎಚ್ ಸ್ವಾಗತಿಸಿದರು. ರೆಡ್ ಎಫ್‌ಎಮ್‌ನ ಸ್ಟೇಷನ್ ಹೆಡ್ ರಾಘವ ಬಿ.ವಿ, ಆರ್.ಜೆಗಳಾದ ನಾಗರಾಜ್, ದೀಪಕ್ ಶೆಟ್ಟಿ, ಪ್ರಸನ್ನ, ಇಂಜೀನಿಯರ್ ಸುಜೀತ್, ತಾಂತ್ರಿಕ ತಂಡದ ರೀಜು ಮತ್ತು ದೀಪಕ್ ನಾಯಕ್ ಹಾಗೂ ಅಕೌಂಟ್ ಮ್ಯಾನೇಜರ್ ರಂಜೀತ್ ಕುಮಾರ್ ರೈ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕರು ರೆಡ್ ಎಫ್ಎಮ್ ನ ರೆಡ್ ರಥ ಕಾರ್ಯಾಕ್ರಮಗಳಲ್ಲಿ ಪಾಲ್ಗೊಂಡು ಹಲವಾರು ಬಹುಮಾನಗಳನ್ನು ಗೆಲ್ಲಲು ಉತ್ತಮ ಅವಕಾಶವನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ದೀಪಾವಳಿಯ ಕೊಡುಗೆಯಾಗಿ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು. ಹಾಗೂ ಈ ಬಾರಿಯ ದೀಪಾವಳಿಯನ್ನು ಹೆಚ್ಚು ವ್ಯಯ ಮಾಡದೇ ಆಚರಿಸುವಲ್ಲಿ ಸೂಪರ್‌ಹಿಟ್ಸ್ 93.5 ರೆಡ್ ಎಫ್‌ಎಮ್‌ನೊಂದಿಗೆ ಕೈ ಜೋಡಿಸಬೇಕೆಂದು ಕಾರ್ಯಕ್ರಮ ನಿರ್ಮಾಪಕ ಯಶ್‌ರಾಜ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.
Click this button or press Ctrl+G to toggle between Kannada and English