ಧರ್ಮಸ್ಥಳ : 80ನೇ ಸರ್ವಧರ್ಮ ಸಮ್ಮೇಳನ

2:24 PM, Wednesday, December 12th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Sarva Dharma Sammelanಧರ್ಮಸ್ಥಳ :ಧರ್ಮಸ್ಥಳದ ಲಕ್ಷದೀಪೋತ್ಸವ ಅಂಗವಾಗಿ ಮಂಗಳವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 80ನೆ ಸರ್ವಧರ್ಮ ಸಮ್ಮೇಳನವು ನಡೆಯಿತು ನಿವೃತ್ತ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಯಾವುದೇ ಧರ್ಮವು ಮತ್ತೊಂದು ಧರ್ಮವನ್ನು ವಿರೋಧಿಸು, ದ್ವೇಷಿಸು ಎಂದು ಹೇಳಿಲ್ಲ ಆದರೆ ಧರ್ಮದ ಮೂಲ ತಿರುಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದೇಶ, ದೇಶಗಳು ಹಾಗೂ ಧರ್ಮ, ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿವೆ. ಕೆಲವರು ಧರ್ಮಗಳ ನಡುವೆ ಭಿನ್ನಮತ ಸೃಷ್ಟಿಸಿ ಲಾಭ ಪಡೆಯುಲು ಯತ್ನಿಸುತ್ತಾರೆ ಎಂದ ಅವರು, ಧರ್ಮದ ಸಾರವನ್ನು ಸರಿಯಾಗಿ ತಿಳಿದುಕೊಂಡು ಧರ್ಮಗಳ ನಡುವೆ ತಿಕ್ಕಾಟ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ ಇದೆ ಎಂದರು.

ಕಳೆದ 80 ವರ್ಷದಿಂದ ಕ್ಷೇತ್ರದಲ್ಲಿ ನಿರಂತರವಾಗಿ ಧರ್ಮ ಸಮ್ಮೇಳನ ನಡೆದುಕೊಂಡು ಬಂದಿರುವುದು ಹೆಗ್ಗಳಿಕೆಯ ವಿಷಯವಾಗಿದೆ, ಧರ್ಮಗಳ ಸಮನ್ವಯಕ್ಕಾಗಿ ಧರ್ಮ ಸಮ್ಮೇಳನಗಳು ಶ ಎಲ್ಲ ಕ್ಷೇತ್ರಗಳಲ್ಲಿ ಪ್ರತಿವರ್ಷ ನಡೆಯುವ ಅವಶ್ಯಕತೆಯಿದೆ. ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡುತ್ತಿದ್ದ ನಾನು ಇನ್ನು ಮುಂದೆ ಧರ್ಮ ಸಮನ್ವಯತೆಗಾಗಿಯೂ ಹೋರಾಡುತ್ತೇನೆ ಎಂದರು.

ಚೆನ್ನೆಯ ಶ್ರೀ ರಾಮಾನುಜಂ ಮಿಶನ್ ಟ್ರಸ್ಟ್ ನ ಡಾ. ಪ್ರಸನ್ನ ವೆಂಕಟಾಚಾರ್ಯರ್ ಚತುರ್ವೇದಿ ಸ್ವಾಮೀಜಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ನಿತ್ಯ ಕ್ಷೇಮ ಕೊಡುವ ಸರ್ವಕಾಲೀನ ಸಂಸ್ಕೃತಿಯೇ ಧರ್ಮ. ಧರ್ಮದಲ್ಲಿ ಕಾಲಾಂತರ, ವಂಶಾಂತರ, ದೇಹಾಂತರ ಬಂಧವೆಂಬ ಮೂರು ಅನುಷ್ಠಾನವಿದೆ ಆದರೆ ವಿಶ್ವಜಾಲದಲ್ಲಿ ಮಾಡಿರುವ ಚಿಕ್ಕ ತಪ್ಪುಗಳು ಧರ್ಮಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದವರು ಹೇಳಿದರು.

ಧರ್ಮ ಎಂದರೆ ಪರಸ್ಪರ ಸೌಹಾರ್ದದಿಂದ ಬದುಕಲು ಕಲಿಸುವ ಆದರ್ಶ ಕಲ್ಪನೆ. ಜಗತ್ತಿನ ಎಲ್ಲ ಜೀವಿಗಳನ್ನೂ ತನ್ನಂತೆ ಬಗೆಯುವ ಉದಾರ ದೃಷ್ಟಿಕೋನ. ಹಿಂದೂ ಧರ್ಮ ಭಗವಂತನನ್ನು ಎಲ್ಲೆಡೆಯೂ ಗುರುತಿಸಬಲ್ಲ ವಸುದೈವ ಕುಟುಂಬದ ಪರಿಕಲ್ಪನೆಯನ್ನು ಸಾರಿ ಹೇಳುತ್ತದೆ. ಪ್ರಪಂಚದ ಎಲ್ಲ ಜೀವಿಗಳೂ ಸುಖವಾಗಿರಲಿ ಎಂಬುದೇ ಧರ್ಮಗಳ ಅಂತಿಮ ಗುರಿ ಎಂದು ಡಾ.ವಿರೇಂದ್ರ ಹೆಗ್ಗಡೆ ಹೇಳಿದರು.

ಕ್ರೈಸ್ತಧರ್ಮದಲ್ಲಿ ಸಮನ್ವಯ ದೃಷ್ಟಿ ಎಂಬ ವಿಚಾರದ ಕುರಿತು ಕಲಘಟಗಿಯ ಫಾ. ಪಿ.ಕೆ. ಜೇಕಬ್, ಜೈನ ಧರ್ಮದಲ್ಲಿ ಸಮನ್ವಯ ವಿಚಾರದ ಕುರಿತು ಅಥಣಿಯ ಉಪನ್ಯಾಸಕ ಪ್ರೊ. ಬಿ.ಕೆ. ನ್ಯಾಮಗೌಡ, ಇಸ್ಲಾಂ ಧರ್ಮದಲ್ಲಿ ಸಮನ್ವಯ ದೃಷ್ಟಿ ವಿಚಾರದ ಕುರಿತು ಪತ್ರಕರ್ತ ಅಬುಸಲಾಂ ಪುತ್ತಿಗೆ ಉಪನ್ಯಾಸ ನೀಡಿದರು. ಮತ್ತು ಕಳೆದ 62 ವರ್ಷದಿಂದ ಸಮ್ಮೇಳನಕ್ಕೆ ಆಗಮಿಸುತ್ತಿರುವ 82ರ ಹರೆಯದ ಲಕ್ಷ್ಮೀದೇವಿಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕ್ಷೇತ್ರದ ಮರುವಿನ್ಯಾಸ ಮಾಡಲಾದ ವೆಬ್‌ಸೈಟಗೆ ಎನ್. ಸಂತೋಷ್ ಹೆಗ್ಡೆ ಚಾಲನೆ ನೀಡಿದರು

ಡಿ. ಸುರೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ, ಪೂರಣ್‌ವರ್ಮ, ರುಡ್‌ಸೆಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಕೆ.ಎಸ್ ಪ್ರಭು, ಎಸ್‌ಡಿಎಂ ಕಾಲೇಜಿನ ಉಪನ್ಯಾಸಕರಾದ ಡಾ.ಬಿ.ಪಿ.ಸಂಪತ್ ಕುಮಾರ್, ಡಾ. ಬಿ.ಎ. ಕುಮಾರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.


image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English