ಒಳ ಚರಂಡಿ ಕಾಮಗಾರಿ, ನೀರಿನಲ್ಲಿ ಮುಳುಗಿ ಕಾರ್ಮಿಕನ ಸಾವು

12:16 PM, Monday, December 24th, 2012
Share
1 Star2 Stars3 Stars4 Stars5 Stars
(No Ratings Yet)
Loading...

water pipe burst Nagoriಮಂಗಳೂರು : ಕಪಿತಾನಿಯೊ ಬಳಿ ಸೈಮನ್‌ ಲೇನ್‌ನಲ್ಲಿ ಶನಿವಾರ ಒಳ ಚರಂಡಿ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದ ವೇಳೆ ನೀರಿನ ಕೊಳವೆ ಒಡೆದ ಪರಿಣಾಮ, ಕಾರ್ಮಿಕ ನೀರಿನಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ವ್ಯಕ್ತಿ ಆಂಧ್ರಪ್ರದೇಶ ಮೂಲದ ಕಾರ್ಮಿಕ ರಾಜು(25). ಸೈಮನ್ ಲೇನ್ ಗೆ ಕುಡ್ಸೆಂಪ್ ಯೋಜನೆಯಡಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕಳೆದ ಕೆಲವು ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಸುಮಾರು 10 ಮಂದಿ ಕಾರ್ಮಿಕರು ಈ ಕಾರ್ಯಕ್ಕೆ ಕೊಳವೆ ಹಾಯಿಸಲು ಹೊಂಡ ತೆಗೆಯುವ ಕಾರ್ಯ ನಿರ್ವಹಿಸುತ್ತಿದ್ದರು.

ಕಾರ್ಮಿಕರು ಕೆಲಸ ನಿರ್ವಹಿಸುವ ಜಾಗದಲ್ಲೇ ನೀರಿನ ಕೊಳವೆ ಹಾದು ಹೋಗಿದ್ದು ಜೆಸಿಬಿ ಮೂಲಕ ಮಣ್ಣು ಅಗೆಯುತ್ತಿದ್ದ ವೇಳೆ ನೀರಿನ ಪೈಪ್‌ಲೈನ್‌ಗೆ ಜೆಸಿಬಿ ವಾಹನವು ತಾಗಿ ಆ ಕೊಳವೆ ಒಡೆದ ಪರಿಣಾಮ ಅದರಲ್ಲಿದ್ದ ನೀರು ರಭಸವಾಗಿ ಹರಿದು ಅಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ನೀರಿನಲ್ಲಿ ಕೊಚ್ಚಿ ಹೋದರು. ಕಾರ್ಮಿಕರಾದ ಭಾಸ್ಕರ, ರಮೇಶ ಮತ್ತು ವೆಂಕಟೇಶ ಅವರು ಪ್ರಯತ್ನ ಪಟ್ಟು ನೀರಿನಿಂದ ಮೇಲೆ ಬಂದು ಪಾರಾದರೆ, ಮೃತ ರಾಜು ನೀರಿನಿಂದ ಮೇಲೆ ಬರಲಾಗದೆ ಕೆಸರಿನಲ್ಲಿ ಮುಳುಗಿ, ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟನು.

ಈ ಘಟನೆಯ ಬಗ್ಗೆ ಸೈಟ್‌ ಎಂಜಿನಿಯರ್‌ ರಘುನಾಥ ಶೆಟ್ಟಿ, ಮೆನೇಜರ್‌ ಬಾಲಸುಬ್ರಹ್ಮಣ್ಯಂ ಮತ್ತು ಜೆಸಿಬಿ ಚಾಲಕ ಸಮೀಮ್‌ ಅವರ ಮೇಲೆ ದುಡುಕು ಹಾಗೂ ನಿರ್ಲಕ್ಷತನದಿಂದ ಕೆಲಸ ಮಾಡಿದ ಆರೋಪದ ಮೇಲೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಮತ್ತು ಕಾರ್ಮಿಕ ರಾಜು ಅವರು ಕುಟುಂಬಕ್ಕೆ ಗುತ್ತಿಗೆದಾರ ಸಂಸ್ಥೆ ಶ್ರೀರಾಮ್‌ ಇಪಿಸಿ ಲಿ. ಪರಿಹಾರ ಒದಗಿಸಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English