ಎಂಡೋ ನಿಧಿಗಾಗಿ ಸೈಕಲ್ ಹತ್ತಿದ ಪ್ರೊಫೆಸರ್

12:48 PM, Saturday, December 29th, 2012
Share
1 Star2 Stars3 Stars4 Stars5 Stars
(No Ratings Yet)
Loading...

Endo Sulfan Victimsಮಂಗಳೂರು: ಬಿಜಾಪುರ ಜಿಲ್ಲೆಯ ಇಂಡೀ ತಾಲೂಕಿನ ಶಿರ್ಷಾಕ್ ಸಾಲುಟಿಗಿಯ ಪಂಡಿತ್ ರಾವ್ ಕರಾವಳಿ ಜಿಲ್ಲೆಯ ಎಂಡೋಪೀಡಿತರ ನಿಧಿಗಾಗಿ ಇಂದಿನಿಂದ ಎರಡು ದಿನ ಮಂಗಳೂರಿನ ಸುತ್ತ ಮುತ್ತ ಸೈಕಲ್ ಜಾಥ ಮಾಡಲಿದ್ದಾರೆ.

ಇಂದು ಬೆಳಗ್ಗೆ ಜಿಲ್ಲಾಧಿಕಾರಿಯವರಿಗೆ 10,000 ರೂಪಾಯಿ ಚೆಕ್ ನೀಡಿದ ಪಂಡಿತ್ ರಾವ್, ಇನ್ನುಳಿದ 5,000 ರೂಪಾಯಿ ಚೆಕ್ಕನ್ನು ಟಿವಿ 9 ಎಂಡೋ ಸಹಾಯ ನಿಧಿಗೆ ನೀಡಲಿದ್ದಾರೆ.

Endo Sulfan Victimsಛಂಡೀಗಡ್ ನ ಸರಕಾರಿ ಕಾಲೇಜಿನಲ್ಲಿ ಅಸಿಸ್ಟೆಂಡ್ ಪ್ರೊಫೆಸರ್ ಆಗಿ ಕೆಲಸನಿರ್ವಹಿಸುತ್ತಿರುವ ರಾವ್ ಪಂಜಾಬಿ ಭಾಷೆಯಲ್ಲಿ ಬರೆದ ಪುಸ್ತಕಗಳನ್ನು ಮಾರಿ ಸುಮಾರು 18 ಸಾವಿರ ಸಂಗ್ರಹಿಸಿದ್ದಾರೆ. ಬಂದ ಹಣವನ್ನು ಎಂಡೋ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.

ಎಂಡೋ ನಿಧಿಗೆ ಕೇವಲ ಸರಕಾರ ಮಾತ್ರ ಸಹಾಯ ನೀಡುತ್ತಿದೆ. ನಮ್ಮ ಕರ್ನಾಟಕದ ಜನತೆ ಅದಕ್ಕಾಗಿ ಯಾರು ಮುಂದೆ ಬರುತ್ತಿಲ್ಲ ಜನರು ಇಂತಹ ಕಷ್ಟಗಳನ್ನು ಅರಿತು ಸಹಾಯ ಮಾಡಿದರೆ ಸಂತ್ರಸ್ತ ಕುಟುಂಬಗಳಿಗೆ ತುಂಬಾ ಅನುಕೂಲವಾಗಬಹುದು ಎಂದು ಮೆಗಾ ಮೀಡಿಯಾ ನ್ಯೂಸ್ ನ ಜೊತೆ ಮಾತನಾಡುತ್ತ ಹೇಳಿದರು.

ಗಡಿ ಜಿಲ್ಲೆಗಳಲ್ಲಿ ಎಂಡೋ ಪೀಡಿತರ ಅಳಲನ್ನು ವೆಬ್ ಸೈಟ್ ಗಳ ಮೂಲಕ ಅರಿತು ಈ ಸೇವೆಗೆ ಮುಂದಾಗಿದ್ದೇನೆ ಎಂದರು. ನಾಳೆ ಮಂಗಳೂರಿನ ಸೈಕಲ್ ಜಾಥವನ್ನು ಮುಗುಸಿ ಕೊಕ್ಕಡಕ್ಕೆ ತೆರಳಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English