ಮಂಗಳೂರು : ಜನವರಿ 29 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ವೃತ್ತದಿಂದ ಪ್ರಾರಂಭಗೊಂಡು ಉಡುಪಿ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ‘ಕಾಂಗ್ರೆಸ್ ನಡಿಗೆ- ಸಾಮರಸ್ಯದ ಕಡೆಗೆ’ ಪಾದಯಾತ್ರೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 9ಕ್ಕೆ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ಆರಂಭವಾಗುವ ಪಾದಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ.
ಈ ಪಾದಯಾತ್ರೆಯಲ್ಲಿ ಎಂ. ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್, ಸಿದ್ಧರಾಮಯ್ಯ, ಬಿ. ಜನಾರ್ದನ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ, ರೆಹಮಾನ್‌ಖಾನ್, ಕೆ. ಎಚ್. ಮುನಿಯಪ್ಪ, ಕೇಂದ್ರ-ರಾಜ್ಯಗಳ ಹಾಲಿ- ಮಾಜಿ ಸಚಿವರು, ಶಾಸಕರು, ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಜನವರಿ 29 ಬೆಳಗ್ಗೆ 9ಕ್ಕೆ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ವೃತ್ತದಿಂದ ಆರಂಭಗೊಂಡು ಬಳಿಕ 11 ಗಂಟೆಯ ವೇಳೆಗೆ ತೊಕ್ಕೊಟ್ಟುವಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಆ ನಂತರ 12.30ರಿಂದ ಕಲ್ಲಾಪು, ಜಪ್ಪಿನಮೊಗರು, ಪಂಪ್‌ವೆಲ್, ಕೆಪಿಟಿ ಜಂಕ್ಷನ್, ಸಂಜೆ ಕೊಟ್ಟಾರ ಜಂಕ್ಷನ್‌ನಲ್ಲಿ ಸಾರ್ವಜನಿಕ ಸಭೆ. ಜನವರಿ 30 ರ ಬೆಳಗ್ಗೆ 9ಕ್ಕೆ ಕೂಳೂರಿನಿಂದ ಆರಂಭಗೊಂಡು ಪಣಂಬೂರು, ಹೊಸಬೆಟ್ಟು ಮೂಲಕ ಸಾಗಿ 11ಕ್ಕೆ ಸುರತ್ಕಲ್‌ನಲ್ಲಿ ಸಾರ್ವಜನಿಕ ಸಭೆ. ಹಳೆಯಂಗಡಿ, ಸಂಜೆ ಮೂಲ್ಕಿಯಲ್ಲಿ ಸಾರ್ವಜನಿಕ ಸಭೆ.
ಜನವರಿ 31 ರ ಬೆಳಗ್ಗೆ 9ಕ್ಕೆ ಮೂಲ್ಕಿಯಿಂದ ಆರಂಭ, ಪಡುಬಿದ್ರಿ, ಉಚ್ಚಿಲ, ಎರ್ಮಾಳ್, ಸಂಜೆ ಕಾಪುವಿನಲ್ಲಿ ಸಾರ್ವಜನಿಕ ಸಭೆ, ಪಾಂಗಾಳ- ಫೆಬ್ರವರಿ 1ರಂದು ಬೆಳಗ್ಗೆ 9ಕ್ಕೆ ಪಾಂಗಾಳದಿಂದ ಆರಂಭಗೊಂಡು ಕಟಪಾಡಿ, ಕಿನ್ನಿಮೂಲ್ಕಿ, ಮಲ್ಪೆ ಜಂಕ್ಷನ್, ಸಂಜೆ 4ಕ್ಕೆ ಮಲ್ಪೆಯಲ್ಲಿ ಸಮಾರೋಪ ಸಭೆ.
Click this button or press Ctrl+G to toggle between Kannada and English