ಎ.ಜೆ. ಆಸ್ಪತ್ರೆ ಆಸ್ಪತ್ರೆ:ರಾಜ್ಯದಲ್ಲೇ ಪ್ರಥಮ ಬೇರ್ಪಟ್ಟ ಕೈಗಳ ಯಶಸ್ವಿ ಮರುಜೋಡನೆ

12:29 PM, Friday, February 1st, 2013
Share
1 Star2 Stars3 Stars4 Stars5 Stars
(No Ratings Yet)
Loading...

AJ Hospitalಮಂಗಳೂರು : ನಗರದ ಎ.ಜೆ. ಆಸ್ಪತ್ರೆ ಆಸ್ಪತ್ರೆಯ ವೈದ್ಯರ ತಂಡ ವ್ಯಕ್ತಿಯೂಬ್ಬನ ಭುಜದಿಂದ ಸಂಪೂರ್ಣವಾಗಿ ಬೇರ್ಪಟ್ಟ ಎಡಗೈ ಮತ್ತು ಮೊಣಕೈ ಕೆಳಭಾಗದಿಂದ ತುಂಡಾದ ಬಲಗೈಯನ್ನು ಮೈಕ್ರೋವ್ಯಾಸ್ಕಾಲರ್ ಶಸ್ತ್ರ ಚಿಕಿತ್ಸೆಯ ಮೂಲಕ ಕೈಗಳನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ,ಈ ವಿಷಯ ತಿಳಿಸಿ, ರಾಜ್ಯದಲ್ಲೇ ಇದು ಪ್ರಥಮ ವೈದ್ಯಕೀಯ ಸಾಧನೆ ಎಂದು ಅವರು ಹೇಳಿದರು.

ಮೂಲ್ಕಿ ಹಳೆಯಂಗಡಿ ನಿವಾಸಿ ಶರಶ್ಚಂದ್ರ ಶೆಣೈ ಎಂಬವರು ಮುಲ್ಕಿ ರೈಲು ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಮೂವರ ತಂಡ ಹಲ್ಲೆ ನಡೆಸಿದ ಪರಿಣಾಮ ಅವರ ಎಡಗೈ ಭುಜದಿಂದ ಸಂಪೂರ್ಣ ಬೇರ್ಪಟ್ಟು ಕೆಳಗೆ ಬಿದ್ದಿತ್ತು. ಘಟನೆ 2012 ಸೆಪ್ಟೆಂಬರ್ 27ರಂದು ರಾತ್ರಿ 8 ಗಂಟೆಗೆ ನಡೆದಿತ್ತು. ಘಟನೆಯಿಂದ ತೀವ್ರ ರಕ್ತಸ್ರಾವ ಉಂಟಾಗಿದ್ದು ಪ್ರಾಣಾಪಾಯ ಸಂಭವವಿತ್ತು. ಗಾಯಾಳು ಶರಶ್ಚಂದ್ರ ಶೆಣೈ ಅಲ್ಲೇ ಸನಿಹವಿದ್ದ ಮನೆಯೊಂದಕ್ಕೆ ನೀರು ಕೇಳಲು ತೆರಳಿದಾಗ ವಿಷಯ ತಿಳಿದಿದ್ದು, ಕೂಡಲೇ ಗಾಯಾಳುವಿನ ಮನೆಗೆ ತಿಳಿಸಿದ ಪರಿಣಾಮ ಮರುದಿನ ಬೆಳಗ್ಗೆ 4 ಗಂಟೆ ವೇಳೆಗೆ ನಗರದ ಎ.ಜೆ. ಆಸ್ಪತ್ರೆಗೆ ಕರೆತರಲಾಯಿತು. ಅನಂತರ ಗಾಯಾಳುವಿನ ಸಹೋದರ ಘಟನಾ ಸ್ಥಳಕ್ಕೆ ಹೋಗಿ ತುಂಡಾದ ಎರಡೂ ಕೈಗಳನ್ನು ಹುಡುಕಿ ತಂದಿದ್ದರು.

ಎ.ಜೆ. ಆಸ್ಪತ್ರೆಯ ಪ್ಪಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ಕದಂ, ಡಾ. ಸನತ್ ಭಂಡಾರಿ, ಅರಿವಳಿಕೆ ತಜ್ಞರಾದ ಡಾ. ತ್ರಿವಿಕ್ರಮ್ ತಂತ್ರಿ, ಡಾ. ರಾಜೇಶ್ ಹುಕ್ಕೇರಿ ಮತ್ತು ಎಲುಬು ಮತ್ತು ಮೂಳೆ ಶಸ್ತ್ರ ಚಿಕಿತ್ಸಕರಾದ ಡಾ. ಶ್ರೀಧರ್ ಶೆಟ್ಟಿ ಇವರ ತಂಡ ಇದನ್ನು ಸವಾಲಾಗಿ ಸ್ವೀಕರಿಸಿ ಬೇರ್ಪಟ್ಟ ಕೈಗಳನ್ನು ಸತತ 8 ಗಂಟೆಗಳ ಮೈಕ್ರೋವ್ಯಾಸ್ಕುಲರ್ ಶಸ್ತ್ರ ಚಿಕಿತ್ಸೆ ಮೂಲಕ ಮರು ಜೋಡಿಸಲಾಯಿತು ಎಂದು ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ಲಾಸ್ಟಿಕ್‌ ಸರ್ಜರಿ ವಿಭಾಗ ಮುಖ್ಯಸ್ಥ ಡಾ. ದಿನೇಶ್‌ ಕದಂ, ಡಾ. ಸನತ್‌ ಭಂಡಾರಿ, ಶಿವಪ್ರಸಾದ್‌ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English