ಮಂಗಳೂರು : ಸುಳ್ಯ ತಾಲೂಕಿನ ಕಲ್ಲುಗುಂಡಿ ಎಂಬಲ್ಲಿ ಪ್ರವಾಸಿ ಕಾರಿಗೆ ಡಿಕ್ಕಿ ಹೊಡೆಸಿ ಅದರಲಿದ್ದ ಪ್ರಯಾಣಿಕರ ಚಿನ್ನಾಭರಣವನ್ನು ದರೋಡೆ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಬೆಂಗಳೂರು ವಿದ್ಯಾರಣ್ಯಪುರದ ತಿಂಡ್ಲು ನಿವಾಸಿಗಳಾದ ಮಂಜುನಾಥ (೨೪), ಚಂದ್ರಶೇಖರ (೨೫), ಮತ್ತು ಶ್ರೀನಿವಾಸ (೨೧), ಬಂಧಿಸಲ್ಪಟ್ಟಿದ್ದು ಇನ್ನೊಬ್ಬ ಆರೋಪಿ ರಮೇಶ್ (೨೭), ತಲೆಮರೆಸಿಕೊಂಡಿದ್ದಾನೆ.
ಬೆಂಗಳೂರಿನವರಾದ ಸೋಮವಾರಪೇಟೆಯ ಹೊಸೂರು ಮಾದಾಪುರದ ನಾಗರಾಜ ಎಂಬವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಬೆಂಗಳೂರಿನಿಂದ ಕಾರನ್ನು ಬಾಡಿಗೆಗೆ ಮಾಡಿಕೊಂಡು ಧರ್ಮಸ್ಥಳ, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ತೆರಳಿದ್ದರು. ಈ ವೇಳೆಜನವರಿ 27ರಂದು ಅವರು ಸುಳ್ಯ ಮಾರ್ಗವಾಗಿ ಸೋಮವಾರ ಪೇಟೆಗೆ ಹೊರಟಿದ್ದರು. ಈ ನಡುವೆ ಕಲ್ಲುಗುಂಡಿ ಸಮೀಪದ ಕಡಪಾಲ ಎಂಬಲ್ಲಿ ಹಿಂದಿನಿಂದ ಬಂದ ಇನ್ನೊಂದು ಟೂರಿಸ್ಟ್ ಕಾರಿನಿಂದ ಡಿಕ್ಕಿ ಹೊಡೆಸಿ ದರೋಡೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು. ನಾಗರಾಜ್ ಸುಳ್ಯಕ್ಕೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೆತ್ತಿಕೊಂಡ ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್ ಕಾರಿನ ಚಾಲಕ ಮಂಜುನಾಥ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಿಷಯ ಬಹಿರಂಗಗೊಂಡಿದೆ. ಸುಬ್ರಹ್ಮಣ್ಯ ಬಳಿ ಮತ್ತೊಂದು ದರೋಡೆಗೆ ಸಂಚು ಹಾಕುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ.
Click this button or press Ctrl+G to toggle between Kannada and English