ಮಂಗಳಮುಖಿಯರೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದ ಶಿಕ್ಷಣ ತಜ್ಞ ಮತ್ತು ಸಮಾಜ ಸೇವಕ  ಡಾ ವಿನಯ್

Sunday, August 22nd, 2021
hubli

ಹುಬ್ಬಳ್ಳಿ : ಪ್ರಖ್ಯಾತ ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕ ಡಾ.ವಿನಯ್ ಅವರು ಮಂಗಳಮುಖಿಯರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸುವ ಮೂಲಕ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿಕೊಂಡರು. ಡಾ ವಿನಯ್ ಗೆ ರಾಖಿ ಕಟ್ಟಿದ ಮಂಗಳಮುಖಿಯರು ಅವರ ಈ ವಿಶಿಷ್ಟ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುವದರ ಜೊತೆಗೆ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. ನಂತರ ಮಾತನಾಡಿದ ಡಾ. ವಿನಯ್, “ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯ ನಡುವಿನ ಸುಂದರ ಸಂಬಂಧವಾಗಿದೆ. ಸಮಾಜದಲ್ಲಿ ಆಗಾಗ್ಗೆ ತಪ್ಪಾಗಿ ಗ್ರಹಿಸಲ್ಪಟ್ಟ ಮಂಗಳಮುಖಿಗಳೊಂದಿಗೆ […]

ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ, ಪೊಲೀಸರಿಗೆ ದೂರು

Wednesday, July 28th, 2021
Transgender

ಮಂಗಳೂರು: ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಮಂಗಳೂರು ಮೂಲದ ಮಂಗಳಮುಖಿಯರು ಮತ್ತು ಹೊರಜಿಲ್ಲೆಗಳಿಂದ ಮಂಗಳೂರಿಗೆ ಬಂದವರ ನಡುವೆ ಹೊಡೆದಾಟ ನಡೆದಿದೆ. ಪಣಂಬೂರು ಠಾಣೆಯಲ್ಲಿ ಎರಡು ತಂಡಗಳಿಂದ ದೂರು, ಪ್ರತಿದೂರು ದಾಖಲಾಗಿದೆ. ನಗರದ ಬೈಕಂಪಾಡಿಯ ರೈಲ್ವೆ ಗೇಟ್ ಸಮೀಪ ಎರಡು ಗುಂಪಿನ ನಡುವೆ ಘರ್ಷಣೆ ನಡೆದು ಒಂದು ಗುಂಪು ಪಣಂಬೂರು ಠಾಣೆಯಲ್ಲಿ ದೂರು ನೀಡಿತ್ತು. ಇದೀಗ ಮತ್ತೊಂದು ಗುಂಪಿನವರು ಸಹ ದೂರು ನೀಡಿದ್ದಾರೆ. ಮಂಗಳೂರು ಮೂಲದ ಮಂಗಳಮುಖಿಯರು ಹೊರಜಿಲ್ಲೆಯಿಂದ ಬಂದಿರುವ ಮಂಗಳಮುಖಿಯರಿಗೆ ನಗರದಿಂದ ತೆರಳಬೇಕು ಎಂದು […]

ಮುಂಬೈನಲ್ಲಿ‌ ಹಲ್ಲೆ ಖಂಡಿಸಿ ಮಂಗಳಮುಖಿಯರಿಂದ ಪ್ರತಿಭಟನೆ

Monday, October 29th, 2018
Transgendar-1

ಮಂಗಳೂರು: ಮುಂಬೈನಲ್ಲಿ‌ ಮಂಗಳಮುಖಿಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳಮುಖಿಯರಿಂದ ಪ್ರತಿಭಟನೆ ನಡೆಯಿತು. ಮಂಗಳಮುಖಿಯರು ನ್ಯಾಯ ಬೇಕು, ಅಮಾಯಕ ಮಂಗಳಮುಖಿಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಎಂದು ಘೋಷಣೆ ಕೂಗಿದರು‌.ನಂತರ ಮಂಗಳಮುಖಿಯರು ಮಾತನಾಡಿ, ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಇದುವರೆಗೂ ನಾವು ಯಾರಲ್ಲೂ ಹೇಳಿಲ್ಲ. ಆದರೆ ಜನರು ಹಲ್ಲೆ ನಡೆಸುವ ಮಂಚೆ ಯೋಚಿಸಬೇಕು. ಅದು ಯಾವ ಕಾರಣಕ್ಕೆ ಆಗುತ್ತೆ. ಅಲ್ಲಿ ಏನು ತಪ್ಪು […]

ಯುವಕರ ಮಂಗಳಮುಖಿ ವೇಷ: ಕದ್ರಿ ಪಾರ್ಕ್ ನಲ್ಲಿ ನಕಲಿ ಬಣ್ಣ ಬಯಲು ಮಾಡಿದ ಕಾರ್ಯಕರ್ತ ಸೌರಾಜ್

Friday, October 5th, 2018
acttivist

ಮಂಗಳೂರು: ಮಂಗಳಮುಖಿಯರ ಮೇಲಿನ ಅನುಕಂಪದಿಂದ ಮಂಗಳಮುಖಿಯರು ಬಳಿ ಬಂದಾಗ ಸಾರ್ವಜನಿಕರು ಅವರಿಗೆ ಹಣವನ್ನು ನೀಡುವುದು ಸಾಮಾನ್ಯ. ಇದನ್ನು ದುರುಪಯೋಗ ಪಡಿಸಿಕೊಂಡು ಕೆಲವು ಯುವಕರು ಮಂಗಳಮುಖಿ ವೇಷ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸೌರಾಜ್ ಮಂಗಳೂರು ಬಯಲಿಗೆಳೆದಿದ್ದಾರೆ. ಮಂಗಳೂರಿನ ಕದ್ರಿ ಪಾರ್ಕ್ ಗೆ ಬರುವ ಪ್ರೇಮಿಗಳಿಗೆ, ಸಾರ್ವಜನಿಕರಿಗೆ ಹಣಕ್ಕಾಗಿ ಪೀಡುಸುತ್ತಿದ್ದ ನಕಲಿ ಮಂಗಳಮುಖಿಯರನ್ನು ಸೌರಾಜ್ ಗುರುವಾರ ಫೇಸ್‌ಬುಕ್‌ ಲೈವ್ ಮಾಡುತ್ತಲೇ ಬಯಲಿಗೆಳೆದಿದ್ದಾರೆ. ಹೊರರಾಜ್ಯದಿಂದ ಬಂದ ಯುವಕರು ಮಂಗಳಮುಖಿಯರ ವೇಷ ಧರಿಸಿ ಕದ್ರಿ ಪಾರ್ಕ್ ನಲ್ಲಿ […]

ಮಂಗಳಮುಖಿವರಿಗೂ ಎಲ್ಲರಂತೆ ಸಮಾನರಾಗಿ ಬದುಕುವ ಹಕ್ಕಿದೆ: ಆರ್ ಜೆ ಕಾಜಲ್

Wednesday, September 5th, 2018
rj-kajal

ಮೂಡಬಿದಿರೆ: ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಸಮಾನರಾಗಿ ಬದುಕುವ ಹಕ್ಕನ್ನು ನೀಡಿದೆ. ಅದರಂತೆ ಮಂಗಳಮುಖಿವರಿಗೂ ಎಲ್ಲರಂತೆ ಸಮಾನರಾಗಿ ಬದುಕುವ ಹಕ್ಕಿದೆ ಎಂದು ರೇಡಿಯೋ ಜಾಕಿ ಕಾಜಲ್ ತಿಳಿಸಿದರು. ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಡುತ್ತಿದ್ದರು. ಇಂದು ಮಂಗಳಮುಖಿಯರು ತಮ್ಮನ್ನು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕು ನಡೆಸುತ್ತಿದ್ದರೂ ಸಮಾಜ ಅವರನ್ನು ನೋಡುವ ದೃಷ್ಠಿ ಬದಲಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಜಾತಿ, ಭಾಷೆ, ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಿರುವ ಜನರ ನಡುವೆ […]

ಮಂಗಳಮುಖಿಯರನ್ನು ಸಮಾಜದಲ್ಲಿ ಗೌರವಿಸುವ ಗುಣ ಬೆಳೆಸಿಕೊಳ್ಳೋಣ : ಡಿಸಿಪಿ ಉಮಾ ಪ್ರಶಾಂತ್

Wednesday, March 14th, 2018
transgender

ಮಂಗಳೂರು: ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲರಂತೆ ಗೌರವಿಸುವ ಗುಣವನ್ನು ಸಮಾಜದ ಪ್ರತಿಯೊಬ್ಬರು ಬೆಳೆಸಿಕೊಳ್ಳುವುದರೊಂದಿಗೆ ಅವರೂ ಕೂಡ ಸಮಾಜದಲ್ಲಿ ಬದುಕಲು ಅರ್ಹರು ಎಂಬ ಸತ್ಯವನ್ನು ಸಮಾಜ ಅರಿತುಕೊಳ್ಳಬೇಕಾಗಿದೆ ಎಂದು ಮಂಗಳೂರು ಡಿಸಿಪಿ ಉಮಾಪ್ರಶಾಂತ್ ಅಭಿಪ್ರಾಯ ಪಟ್ಟರು. ಅವರು ಸೋಮವಾರ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮತ್ತು ಬೆಸೆಂಟ್ ಕಾಲೇಜಿನ ಸಮಾಜ ಶಾಸ್ತ್ರ ಮತ್ತು ಇಂಗ್ಲೀಷ್ ವಿಭಾಗ ಜಂಟಿಯಾಗಿ ಆಯೋಜಿಸಿದ ಮಂಗಳಮುಖಿಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಂಗಳಮುಖಿಯರನ್ನು ಸಮಾಜ ವಕ್ರದಷ್ಟಿಯಿಂದ ಕಾಣುತ್ತಿದ್ದ ಕಾಲ ಪರಿವರ್ತನಾ ಟ್ರಸ್ಟ್ ಆರಂಭದಿಂದ ಬದಲಾಗುತ್ತಿದೆ. ಅವರು […]

ಮಂಗಳಮುಖಿಯರ ಅಭಿವೃದ್ದಿಗಾಗಿ ಸರಕಾರ ಬದ್ದ ; ಶಾಸಕ ಜೆ.ಆರ್.ಲೋಬೊ

Saturday, December 2nd, 2017
Mangala Mukhi

ಮಂಗಳೂರು: ಮಂಗಳಮುಖಿಯರ ಅಭಿವೃದ್ದಿಗಾಗಿ ಸರಕಾರ ಸಂಪೂರ್ಣ ಬದ್ಧವಾಗಿದ್ದು, ಅವರಿಗಾಗಿ ಸರಕಾರದಿಂದ ಕೊಡಮಾಡುವ ವಿವಿಧ ಯೋಜನೆಗಳನ್ನು ತಲುಪಿಸಲು ಸದಾಬದ್ದವಾಗಿರುವುದಾಗಿ ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೊ ಹೇಳಿದರು. ಅವರು ಶನಿವಾರ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮತ್ತು ಸಮಾಜ ಕಾರ್ಯವಿಭಾಗ ಸ್ಕೂಲ್ ಆಫ್ ರೋಶನಿ ನಿಲಯ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ  ಪ್ರಥಮ ಬಾರಿಗೆ ಆಯೋಜಿಸಿದ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಂಗಳಮುಖಿಯರೊಂದಿಗೆ ಕ್ರಿಸ್ಮಸ್ ಸಂಭ್ರಮವನ್ನು ಹಂಚಿಕೊಳ್ಳುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ ಟ್ರಸ್ಟಿಗೆ ಅಭಿನಂದಿಸಿದ ಲೋಬೊ […]