ಮಂಗಳೂರು : “ತುಳುನಾಡಿನ ದೈವಾರಾಧನೆ ಸಂಪ್ರದಾಯದ ಪ್ರಮುಖ ದೈವಗಳಲ್ಲಿ ಒಂದಾದ ಕೊರಗಜ್ಜನ ಅದ್ಭುತ ಕಥೆಯ ಕೊರಗಜ್ಜ ಚಲನ ಚಿತ್ರವನ್ನು ಸುಧೀರ್ ಅತ್ತಾವರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ .
“ಕೊರಗಜ್ಜನ ಸುತ್ತ ಸಾಕಷ್ಟು ಕಥೆಗಳಿವೆ. ಹಾಗಾಗಿ ನಾನು ಕೆಲ ಸಾಹಿತ್ಯಗಳನ್ನು ಅಧ್ಯಯನ ಮಾಡಿದ್ದೇನೆ. ಬುಡಕಟ್ಟು ಜನರು ಸೇರಿದಂತೆ ಅನೇಕ ತಜ್ಞರನ್ನು ಸಂದರ್ಶಿಸಿದ್ದೇನೆ ಎಂದು ಅತ್ತಾವರ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಬಾಲಿವುಡ್ ನಟ ಕಬೀರ್ ಬೇಡಿ ಅವರು ಉದ್ಯಾವರ ಅರಸರ ಪಾತ್ರ ನಿಭಾಯಿಸಿದ್ದಾರೆ. ಅವರು ಈ ಸಿನಿಮಾದ ವಸ್ತ್ರವಿನ್ಯಾಸವನ್ನು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ.ಎಸ್. ಸತ್ಯು ಅವರು ತಮ್ಮ 96ನೇ ವಯಸ್ಸಿನಲ್ಲಿ ‘ಕೊರಗಜ್ಜ’ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.
‘ಕೊರಗಜ್ಜ’ ಚಿತ್ರವನ್ನು ತ್ರಿವಿಕ್ರಮ ಸಪಲ್ಯ ನಿರ್ಮಿಸಿದ್ದಾರೆ. ಗೋಪಿ ಸುಂದರ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಈ ಸಿನಿಮಾಗೆ ಶ್ರೇಯಾ ಘೋಷಾಲ್, ಶಂಕರ್ ಮಹದೇವನ್, ಸುನಿಧಿ ಚೌಹಾನ್, ಜಾವೆದ್ ಆಲಿ, ಸ್ವರೂಪ್ ಖಾನ್, ಶರೋನ್ ಪ್ರಭಾಕರ್, ಅರ್ಮನ್ ಮಲಿಕ್ ಜೊತೆಗೆ ದಕ್ಷಿಣ ಭಾರತದ ಪ್ರತಿಭೆಗಳಾದ ರಮೇಶ್ ಚಂದ್ರ, ಸನ್ನಿದಾನಂದನಮ್, ಅನಿಲ ರಾಜಿವ್, ವಿಜೇಶ್ ಗೋಪಾಲ್, ಪ್ರತಿಮ ಭಟ್, ಕಾಂಜನ ಮೊದಲಾದವರು ಹಾಡಿದ್ದಾರೆ. ಚಿತ್ರಕ್ಕೆ ಮನೋಜ್ ಪಿಳ್ಳೈ ಮತ್ತು ಪವನ್ ಛಾಯಾಗ್ರಹಣ, ವಿದ್ಯಾಧರ್ ಶೆಟ್ಟಿ ಮತ್ತು ಜಿತ್ ಜೋಶ್ ಸಂಕಲನ ಇದೆ.
ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಲಬದಿಯಲ್ಲಿ ಉದ್ಯಾವರ ಅರಸರ ಸಾನಿಧ್ಯವಿರುವ ಬಹಳ ದೊಡ್ಡ ದೈವಸ್ಥಾನವಿದೆ. ‘ಕೊರಗಜ್ಜ’ ಸಿನಿಮಾದಲ್ಲಿ ಹಿರಿಯ ನಟಿ ಭವ್ಯರವರು ಉದ್ಯಾವರ ಅರಸರನ್ನು ಎದುರುಹಾಕಿಕೊಳ್ಳುವ ಪಂಜಂದಾಯಿ ಎನ್ನುವ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದು, ಇದು ಚಿತ್ರದ ಹೈಲೈಟ್ಗಳಲ್ಲಿ ಒಂದು.
ನಿರ್ದೇಶಕರ ಸ್ರಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15ಕೋಟಿ ಬಜೆಟ್ ನ ಈ ಸಿನೆಮಾ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ಡಿಸೆಂಬರ್ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
