ಮಂಗಳೂರು : ಪುತ್ತೂರು ಮದುವೆಯಾಗುದಾಗಿ ನಂಬಿಸಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ನಿವಾಸ್ ರಾವ್ ಅವರಿಗೆ ಪುತ್ತೂರು ಬಿಜೆಪಿ ಮಂಡಳ ಅಧ್ಯಕ್ಷರು ನೋಟಿಸ್ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯೆ ನೀಡಿದ್ದಾರೆ.
ಯುವತಿಯನ್ನು ಮದುವೆ ಮಾಡಿಸುತ್ತೇನೆ ಎಂದು ಜಗನ್ನಿವಾಸ್ ರಾವ್ ಹೇಳಿದ್ದರು . ಇದೀಗಾ ಮದುವೆ ಆಗದೆ ವಂಚನೆ ಮಾಡಿದ್ದು ಸರಿಯಲ್ಲ. ಭರವಸೆ ನೀಡಿದಂತೆ ನಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಘಟನೆ ನಡೆದ ಬಳಿಕ ಸುಮ್ಮನಿದ್ದ ಬಿಜೆಪಿ ಎಂದು ಆರೋಪ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಈ ವಿಚಾರದಲ್ಲಿ ಅದು ಕುಟುಂಬದ ವಿಚಾರವಾಗಿದೆ. ಸಾರ್ವಜನಿಕವಾಗಿ ಹೇಳುವ ಅವಶ್ಯಕತೆ ಇಲ್ಲ. ಒಂದು ಕುಟುಂಬ, ಹೆಣ್ಣು ಮಗುವಿನ ಜೀವನದ ಪ್ರಶ್ನೆ, ಮತ್ತು ಆಕೆಗೆ ಗಂಡ ಬೇಕು. ಇದರಲ್ಲಿ ರಾಜಕೀಯ ಸರಿಯಲ್ಲ ಸಾರ್ವಜನಿಕವಾಗಿ ಮಾಡುವ ವಿಚಾರವು ಅಲ್ಲ.
ಈಗಾಲೆ ಪಕ್ಷದ ಮಂಡಳದಿಂದ ನೋಟಿಸ್ ನೀಡಲಾಗಿದೆ. ಇದಕ್ಕೆ ಉತ್ತರ ಪಡೆಯಲಿದ್ದೇವೆ ಯುವತಿಗೆ ನ್ಯಾಯ ಕೊಡಸಬೇಕು. ಇದಕ್ಕೆ ತಪ್ಪಿದರೆ ಅವರ ವಿರುದ್ದ ಶಿಸ್ತು ಕ್ರಮ ತೆಗೆದು ಕೊಳ್ಳಲಾಗುವುದು ಎಂದಿದ್ದಾರೆ.

ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು