ಬೆಂಗಳೂರು : ಮೈಸೂರು, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿರುವ ಜಯದೇವ ಸಂಸ್ಥೆಯ ಕೇಂದ್ರಗಳಿಂದ ಹೃದಯ ಸಂಬಂಧಿ ದತ್ತಾಂಶವನ್ನು ತನಿಖೆಯು ಪರಿಶೀಲಿಸಿದೆ. ಇದರಲ್ಲಿ ಕಳೆದ ಆರು ತಿಂಗಳುಗಳಲ್ಲಿ ಹೃದಯ ಸಂಬಂಧಿತ ಸಾವಿನಲ್ಲಿ ಯಾವುದೇ ಹೆಚ್ಚಳವನ್ನು ತೋರಿಸಿಲ್ಲ. ಆದಾಗ್ಯೂ, ಮೃತರಲ್ಲಿ ಸುಮಾರು ಶೇ. 30 ರಷ್ಟು ಮಂದಿ ಆಟೋ ಮತ್ತು ಕ್ಯಾಬ್ ಚಾಲಕರು ಆಗಿದ್ದಾರೆ. ಅವರಲ್ಲಿ ಹೆಚ್ಚಿನವರು ಹಾಸನದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದಾರೆ. ಜೀವನಶೈಲಿ ಮತ್ತುಉದ್ಯೋಗದ ಒತ್ತಡದಿಂದ ಅವರು ಸಾವನ್ನಪ್ಪಿದ್ದಾರೆ. ಚಾಲನೆ ಮಾಡುವಾಗ ಹೆಚ್ಚು ಗಂಟೆಗಳ ಕಾಲ ಕುಳಿತುಕೊಳ್ಳುವುದು, ಅನಿಯಮಿತ ಆಹಾರ ಪದ್ಧತಿ, ಧೂಮಪಾನ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ ಮತ್ತು ಕಳಪೆ ನಿದ್ರೆ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ಅರೋಗ್ಯ ಸಚಿವರು ತಿಳಿಸಿದರು.
ಆಟೋ ಮತ್ತು ಕ್ಯಾಬ್ ಚಾಲಕರಿಗೆ ನಿಯಮಿತ ಆರೋಗ್ಯ ತಪಾಸಣೆಯನ್ನು ಪರಿಚಯಿಸಲು ಸರ್ಕಾರ ಶಿಫಾರಸು ಮಾಡಿದೆ. ವಾರ್ಷಿಕ ಅಥವಾ ದ್ವೈ-ವಾರ್ಷಿಕ ಆರೋಗ್ಯ ತಪಾಸಣೆ ಕಾರ್ಯಕ್ರಮ ಮಾಡಬೇಕು ಜಾಗೃತಿ ಮೂಡಿಸಬೇಕು ಮತ್ತು ಅವರಿಗೆ ಸಮಯೋಚಿತ ಆರೈಕೆ ತಪಾಸಣೆಗೆ ನೆರವಾಗಬೇಕು. ಒಂದು ಜೀವವನ್ನು ಕಳೆದುಕೊಳ್ಳುವುದನ್ನು ತಡೆಯುವುದು ದೊಡ್ಡ ಸಾಧನೆಯಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

1 Comment
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು
Basavaraj
July 11, 2025 at 12:51 am
ಡ್ರೈವರ್ಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುದು ಮುಖ್ಯ