ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ಮೂರನೇ ದಿನವಾದ ಆ.1 ರಂದು 11:30ಗಂಟೆಗೆ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಆಗಮಿಸಿ ಶವಗಳಶೋಧ ಕಾರ್ಯ ಕಾರ್ಯ ಪ್ರಾರಂಭಿಸಿದೆ. ಈಗಾಗಲೇ ನಿನ್ನೆಯವರೆಗೆ 6 ಸ್ಥಳಗಳಲ್ಲಿ ಉತ್ಘನನ ಮಾಡಿದ್ದು. ಇಂದು ಏಳನೆ ಸ್ಥಳದಲ್ಲಿ ಉತ್ಘನನ ಮಾಡಿದೆ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಶುಕ್ರವಾರ ಸಂಜೆ ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಆಗಮಿಸಿ 1995 ರಿಂದ 2014ರ ವರೆಗಿನ ಯುಡಿಆರ್ (ಅಸಹಜ ಸಾವು) ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಾಕ್ಷಿ ದೂರುದಾರ ಗುರುತಿಸಿದ ಏಳನೆಯ ಸ್ಥಳದಲ್ಲಿ ಯಾವುದೇ ಕಳೇಬರಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ನದಿಬದಿಯಲ್ಲಿಯೇ ಇದ್ದ ಏಳನೇ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆ ಎಸ್.ಐ.ಟಿ ತಂಡ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ಆರಂಭಿಸಿದ್ದು, ಅಗತ್ಯ ಬಂದರೆ ಉಪಯೋಗಿಸಲು ಹಿಟಾಚಿಯನ್ನು ಇಟ್ಟುಕೊಂಡಿದ್ದಾರೆ. ಆದರೆ ಅಗೆಯುವ ಸಂದರ್ಭದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಎಂಟನೇ ಸ್ಥಳದ ಅಗೆತಕ್ಕೆ ಸಿದ್ಧತೆ ನಡೆಯುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









