ಉಡುಪಿ : ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಹಾಗೂ ಪ್ರಸ್ತುತ ಉಡುಪಿ ತಾಲೂಕಿನ 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆಯಲ್ಲಿ ವಾಸವಿದ್ದ ನೀಲಗಂಗಾ ಕುರಿ (18) ಎಂಬ ಯುವತಿ ನಾಪತ್ತೆಯಾಗಿದ್ದಾರೆ. ಈ ಯುವತಿ ಅಕ್ಟೋಬರ್ 25ರಂದು ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಇಲ್ಲಿಯವರೆಗೆ ವಾಪಾಸು ಬಂದಿಲ್ಲ.
ಗುರುತಿನ ಲಕ್ಷಣಗಳು
ಯುವತಿಯು ಸುಮಾರು 5 ಅಡಿ 3 ಇಂಚು ಎತ್ತರ ಇದ್ದು, ಸದೃಢ ಶರೀರ ಮತ್ತು ಗೋಧಿ ಮೈಬಣ್ಣವನ್ನು ಹೊಂದಿದ್ದಾರೆ. ಅವರು ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಯುವತಿ ಬಗ್ಗೆ ಮಾಹಿತಿ ಇರುವವರು ಕೂಡಲೇ ಪೊಲೀಸರಿಗೆ ತಿಳಿಸುವಂತೆ ಕೋರಲಾಗಿದೆ.
ಸಂಪರ್ಕ ಮಾಹಿತಿ
ನೀಲಗಂಗಾ ಕುರಿ ಅವರ ಕುರಿತು ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಹಕರಿಸುವಂತೆ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆ ನೀಡಿದ್ದಾರೆ:
ಉಡುಪಿ ನಗರ ಪೊಲೀಸ್ ಠಾಣೆ: 0820-2520444
ಉಡುಪಿ ಕಂಟ್ರೋಲ್ ರೂಂ: 0820-2526444
ಪೊಲೀಸ್ ನಿರೀಕ್ಷಕರು ಮೊ.ನಂ: 9480805408
ಉಪ ನಿರೀಕ್ಷಕರು ಮೊ.ನಂ: 9080805445
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









