ನಾಲ್ಕೂವರೆ ತಿಂಗಳ ಮಗುವನ್ನು ಸಾಯಿಸಿ, ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ

Saturday, December 2nd, 2023
Baby-death

ಮಂಗಳೂರು : ನಗರದ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ನ ಫ್ಲಾಟ್ ನಂಬರ್ 507 ರಲ್ಲಿ ತಾಯಿಯೊಬ್ಬಳು ನಾಲ್ಕೂವರೆ ತಿಂಗಳ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಖತಿಜಾತುಲ್ ಕುಬ್ರ ರವರ ಮಗಳು ಫಾತಿಮಾ ರುಕಿಯಾ (23) ಎಂದು ಗುರುತಿಸಲಾಗಿದೆ. ಫಾತಿಮಾ ರುಕಿಯಾ ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರನ್ನು ವಿವಾಹವಾಗಿದ್ದು ನಾಲ್ಕು ತಿಂಗಳ ಹಿಂದೆ ಗಂಡು ಮಗುವಾಗಿದ್ದು ಬಳಿಕ ತನ್ನ ತಾಯಿ ಬಳಿ […]

ಅಂಗಡಿಗೆ ತಿಂಡಿ ಖರೀದಿಸಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಗೆ 6ವರ್ಷಗಳ ಶಿಕ್ಷೆ

Tuesday, November 28th, 2023
ಅಂಗಡಿಗೆ ತಿಂಡಿ ಖರೀದಿಸಲು ಬಂದಿದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿಗೆ 6ವರ್ಷಗಳ ಶಿಕ್ಷೆ

ಮಂಗಳೂರು : ಅಂಗಡಿಗೆ ತಿಂಡಿ ಖರೀದಿಸಲು ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದಲ್ಲಿ ವಿಜಯ್ ಪ್ರವೀಣ್ ಕುಟಿನ್ಹಾ (29) ಎಂಬಾತ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ನ್ಯಾಯಾಧೀಶೆ ಮಂಜುಳಾ ಇಟ್ಟಿ 6ವರ್ಷಗಳ ಕಾಲ ಶಿಕ್ಷೆ ವಿಧಿಸಿ ಈ ತೀರ್ಪು ನೀಡಿದ್ದಾರೆ. 2022ರ ಎ.20ರಂದು ಸಂಜೆ ಬಾಲಕಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಅಂಗಡಿಯೊಂದಕ್ಕೆ ತಿಂಡಿ ಖರೀದಿಸಲು ತೆರಳಿದ್ದಾಳೆ ಎನ್ನಲಾಗಿದೆ. ಆಗ […]

ಪಕ್ಕದ ಮನೆಯ ಹುಡುಗಿಯ ಜೊತೆ ಪರಾರಿಯಾದ ಹುಡುಗ, ಪ್ರೇಮ ಶಂಕೆ

Monday, November 27th, 2023
Rasma Sinan

ಬಂಟ್ವಾಳ : ಅಕ್ಕಪಕ್ಕದ ಮನೆಯ ಹುಡುಗ ಮತ್ತು ಹುಡುಗಿ ಇಬ್ಬರು ಒಂದೇ ದಿನ ನಾಪತ್ತೆಯಾದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಎಂಬಲ್ಲಿ ನಡೆದಿದೆ. ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾದವರು. ಅಕ್ಕಪಕ್ಕದ ಮನೆಯ ಹುಡುಗಿ ಮತ್ತು ಹುಡುಗನ ನಡುವೆ ಪ್ರೀತಿ ಪ್ರೇಮದ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಇವರಿಬ್ಬರು ಸಲುಗೆಯಿಂದ ಇದ್ದುದಲ್ಲದೆ, ಪರಿಚಯಸ್ಥರಾಗಿದ್ದಾರೆ. ಹಾಗಾಗಿ ಇವರಿಬ್ಬರು […]

ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ

Monday, November 27th, 2023
kodi habba

ಕುಂದಾಪುರ : ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಧ್ವಜಪುರ (ಕೋಟೇಶ್ವರ)ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಕೊಡಿ ಹಬ್ಬ-ರಥೋತ್ಸವ ನ.27 ಸೋಮವಾರ ವಿಜೃಂಭಣೆಯಿಂದ ನಡೆಯಿತು. ಕರಾವಳಿಯ ಪ್ರಥಮ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದಿರುವ ಕೋಟೇಶ್ವರ ರಥೋತ್ಸವದ ಅಂಗವಾಗಿ ನ.20ರಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಸೋಮವಾರ ದಿವಾಗಂಟೆ 11-31ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ನಡೆಯಿತು. ಕೋಟೇಶ್ವರ ರಥೋತ್ಸವದ ಸಂದರ್ಭದಲ್ಲಿ ಗರುಡ ಪ್ರದಕ್ಷಣೆ ಸಹಜ ಪ್ರಕ್ರಿಯೆ. ಎಷ್ಟೋ ಜನ ಭಕ್ತರು ಗರುಡ […]

ಕೊಟ್ಟಾರ ಚೌಕಿ ಸರ್ಕಲ್ ಗೆ ಕ್ಯಾಪ್ಟನ್ ಪ್ರಾಂಜಲ್ ಹೆಸರು : ಡಾ.ಭರತ್ ಶೆಟ್ಟಿ ವೈ

Monday, November 27th, 2023
pranjal

ಮಂಗಳೂರು : ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್ ಗೆ ಹೆಸರು ಇಡಲಾಗುದು ಎಂದು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.ಇದರ ಜತೆಗೆ ಮಂಗಳೂರಿನಲ್ಲಿ ಕಲಿತು ,ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ.ಪ್ರಾಂಜಲ್ ಹೆಸರಿಡುವುದು ಸೂಕ್ತವಾಗಿದೆ .ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ […]

ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ, ಇಬ್ಬರು ಆರೋಪಿಗಳ ಸೆರೆ

Thursday, November 23rd, 2023
ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ, ಇಬ್ಬರು ಆರೋಪಿಗಳ ಸೆರೆ

ಬಂಟ್ವಾಳ: ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಬಂಟ್ವಾಳ ಅರಣ್ಯ ಇಲಾಖೆಯವರು ಆರೋಪಿಗಳ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಸಮೇತ ಮೌಲ್ಯ ಒಟ್ಟು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನ ಬೈಲು ಹಾಗೂ ಉಳ್ಳಾಲ ತಾಲೂಕು ಸಜಿಪ ಪಡು ಗ್ರಾಮದ ಕೋಟೆಕನಿ ಎಂಬಲ್ಲಿ ಅಕ್ರಮವಾಗಿ ವಿವಿಧ ಜಾತಿಯ ದಿಮ್ಮಿಗಳನ್ನು […]

ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು, ಡಿ.14ರ ಮೊದಲು ಅಪ್ಡೇಟ್ ಮಾಡವುದು ಕಡ್ಡಾಯ

Thursday, November 23rd, 2023
adhar-card

ಮಂಗಳೂರು: ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿಕೊಂಡವರು ಇದೀಗ ಡಿ.14ರ ಮೊದಲು ಅಪ್ಡೇಟ್ ಮಾಡಬೇಕಾಗಿರುವುದು ಕಡ್ಡಾಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮೂಲಗಳು ತಿಳಿಸಿವೆ. 2011ರಿಂದ 2015ರೊಳಗೆ ಆಧಾರ್ ಕಾರ್ಡ್ ಮಾಡಿಸಿಕೊಂಡು ಒಮ್ಮೆಯೂ ಅಪ್ಡೇಟ್ ಮಾಡದವರಿಗೆ ಇದೀಗ ಅಪ್ಡೇಟ್ ಮಾಡುವಂತೆ ಸಂದೇಶ ರವಾನೆಯಾಗುತ್ತಿದೆ. ಅವರು ಸಮೀಪದ ಆಧಾರ ಕೇಂದ್ರದಲ್ಲಿ ಹೋಗಿ ತಮ್ಮ ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಬೇಕಾಗಿದೆ ಆರಂಭದಲ್ಲಿ ಆಧಾರ್ ಮಾಡಿಸುವಾಗ ಇದ್ದ ವಿಳಾಸ ಆ ಬಳಿಕ ಬದಲಾವಣೆಯಾಗಿರುತ್ತದೆ. ಕೆಲವರ ವಿಳಾಸ ಸರಿಯಾಗಿರುವುದಿಲ್ಲ. ಹೀಗಾಗಿ ಅಪ್ಡೇಟ್ […]

ಕೈರಂಗಳ ಶಾಲೆಯ ನಿವೃತ್ತ ಅಧ್ಯಾಪಕ ಕೆ.ಯೆನ್. ಹೊಳ್ಳ ನಿಧನ

Tuesday, November 21st, 2023
KN-Holla

ಮಂಗಳೂರು : ಕೈರಂಗಳ ಶಾಲೆಯ ನಿವೃತ್ತ ಅಧ್ಯಾಪಕ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಗೌರವಾಧ್ಯಕ್ಷ , ಸಂಘಟಕ, ಕಲಾವಿದ, ವೈದ್ಯ, ಕೈರಂಗಳ ನಾರಾಯಣ ಹೊಳ್ಳ ಅವರು ಇಂದು ವಿಧಿವಶರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಕೋಳ್ಯೂರಿನವರಾದ ಇವರು (ಕೆ. ಯೆನ್. ಹೊಳ್ಳ ) ಕೈರಂಗಳ ನಾರಾಯಣ ಹೊಳ್ಳ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಕೈರಂಗಳ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ನಾರಾಯಣ ಹೊಳ್ಳರು, ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಖಾಸಗಿಯಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಇನ್ನು ಯಕ್ಷಗಾನದ ವೇಷಭೂಷಣಗಳ ನಿರ್ವಹಣೆ, ಹವ್ಯಾಸಿ ಕಲಾವಿದರಿಗೆ ಬಣ್ಣ […]

ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! – ವಿಡಿಯೋ

Sunday, November 19th, 2023
ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! - ವಿಡಿಯೋ

ಮಂಗಳೂರು : ತುಳುನಾಡು ದೈವ ದೇವರುಗಳ ಆರಾಧನೆಗೆ ಹಿಂದಿನಿಂದಲೂ ಪ್ರಾಧಾನ್ಯತೆಯನ್ನು ಪಡೆದಿದೆ. ತುಳುನಾಡಿನಲ್ಲಿ ಸಾವಿರಕ್ಕಿಂತಲೂ ಹೆಚ್ಚು ದೈವಗಳನ್ನು ಅರಾಧಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಮಂಗಳೂರಿನಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದ ಮೂಡು ಮನೆಗುತ್ತು ಪಚ್ಚನಾಡಿಯಲ್ಲಿ ಅಂತದೊಂದು ಕ್ಷೇತ್ರವಿದೆ. ಇಲ್ಲಿ ಹತ್ತು ವರ್ಷ ಹಿಂದೆ ದೈವವೊಂದು ರಾತ್ರಿವೇಳೆ ಕಾಯರ್ ಮರದಲ್ಲಿ ಮಾಯದ ಶಕ್ತಿಯ ರೂಪದಲ್ಲಿ ಸತೀಶ್ ಪೂಜಾರಿಯವರಿಗೆ ಕಾಣಿಸಿಕೊಂಡು ತನಗೆ ಆಶ್ರಯಯ ನೀಡುವಂತೆ ಸೂಚಿಸಿದಂತೆ ಭಾಸವಾಗುತ್ತದೆ. ಅದರಂತೆ ಪಂಡಿತರ ಪ್ರಶ್ನಾ ಚಿಂತನೆಯ ಮೂಲಕ ಪಚ್ಚನಾಡಿ ಮೂಡು ಮನೆ ಎಂಬಲ್ಲಿ […]

ಪತ್ನಿ ಜೊತೆ ಮಲಗಿದ್ದ ವ್ಯಕ್ತಿ ನಾಪತ್ತೆ, ಮನೆಯವರಲ್ಲಿ ಆತಂಕ

Sunday, November 19th, 2023
Roshan

ಮಂಜೇಶ್ವರ : ರಾತ್ರಿ ವೇಳೆ ಪತ್ನಿ ಜೊತೆ ಮಲಗಿದ್ದ ವ್ಯಕ್ತಿಯೊಬ್ಬರು ಶನಿವಾರ ಮಧ್ಯರಾತ್ರಿ ವೇಳೆ ನಾಪತ್ತೆಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿರುವ ಅಮನ್ ಕಾಟೇಜ್ ಬಳಿಯ ನಿವಾಸಿಯಾಗಿರುವ ದಿ. ಫೆಲಿಕ್ಸ್ ಮೊಂತೆರೋ – ಅಪೋಲಿನ್ ಲೋಬೋ ದಂಪತಿಯ ಪುತ್ರ ರೋಷನ್ ಮೊಂತೆರೋ (42) ನಾಪತ್ತೆಯಾದ ವ್ಯಕ್ತಿ. ಶನಿವಾರ ರಾತ್ರಿ ಊಟ ಮಾಡಿ ಪತ್ನಿ ರೇಖಾ ಮೊಂತೆರೋ ಜೊತೆ ಮಲಗಿದ್ದ ರೋಷನ್, ಮಧ್ಯರಾತ್ರಿ 2.30 ವೇಳೆ ರೇಖಾರಿಗೆ ಎಚ್ಚರವಾದಾಗ ನಾಪತ್ತೆಯಾಗಿದ್ದರು. ಪರಿಸರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. […]