ಡಿ.ವೀರೇಂದ್ರ ಹೆಗ್ಗಡೆ ಯವರಿಂದ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು 150ನೇ ವರ್ಷದ ಸಂಭ್ರಮಾಚರಣೆ ಉದ್ಘಾಟನೆ

Thursday, February 6th, 2020
University college 150

ಮಂಗಳೂರು : ಮಂಗಳೂರು ನಗರದ ವಿಶ್ವವಿದ್ಯಾಲಯ ಕಾಲೇಜು 150ನೇ ವರ್ಷದ ಸಂಭ್ರಮಾಚರಣೆಯನ್ನು ಗುರುವಾರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ 150 ವರ್ಷ ಗಳ ಸ್ಮರಣ ಸಂಚಿಕೆ ‘ವಿಶ್ವ ಪಥ’ ಹಾಗೂ ಅಂಚೆ ಇಲಾಖೆ ವತಿಯಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೊ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಹಳೆ […]

ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ಕಾರ್ಯಕ್ರಮ       

Wednesday, February 5th, 2020
blood

ಮಂಗಳೂರು : ವೆನ್ಲಾಕ್  ಜಿಲ್ಲಾ ಆಸ್ಪತ್ರೆ ಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಬುಧವಾರ ರಕ್ತದಾನ ಸಪ್ತಾಹ ಉದ್ಘಾಟಿಸಿ ನಮ್ಮ ನಾಡಿನಲ್ಲಿ ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ನಮ್ಮ ಸಹೋದರ ಸಹೋದರಿಯರು ತುತ್ತಾಗುತ್ತಿದ್ದಾರೆ. ರಕ್ತ ಅವಶ್ಯಕತೆ ಹೆಚ್ಚಾಗಿದೆ. ಆದುದರಿಂದ ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಗಳಲ್ಲಿರುವ ರಕ್ತ ಸಂಗ್ರಹ ಕೇಂದ್ರ ಗಳಲ್ಲಿ ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ 05-02-2020 ರಿಂದ 11-02-2020 ಕಾರ್ಯಕ್ರಮದಲ್ಲಿ  ಹೆಚ್ಚಿನ […]

ವಿಜ್ಞಾನ ಮೇಳದಲ್ಲಿ ಜನಮನ ಗೆದ್ದ ಸೂಪರ್ ವಾಕರ್

Wednesday, February 5th, 2020
preetesh

ಮಂಗಳೂರು : ಜನವರಿ 29 ಮತ್ತು 30 ರ೦ದು ಪಿಲಿಕುಲ ಶಿವರಾಮ ಕಾರ೦ತ ವಿಜ್ಞಾನ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪಿಯರ್ ಅವಾರ್ಡ್ ವಿಜ್ಞಾನ ಮೇಳದಲ್ಲಿ ಹಳ್ಳಿ ಪ್ರತಿಭೆ ಮಾ| ಪ್ರೀತೆಶ್ ತಯಾರಿಸಿದ ವಾಕರ್ ಕಮ್ ಚೇರ್ ಮಾದರಿ ನೆರೆದಿರುವ ಎಲ್ಲರ ಗಮನ ಸೆಳೆಯಿತು. ಮಾತ್ರವಲ್ಲ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಯಿತು. ಇವನು ದ. ಕ. ಜಿ. ಪ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೂಹಾಕುವ ಕಲ್ಲು ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ತನ್ನ ಅಜ್ಜ ವಾಕರ್ ಹಿಡಿದು […]

ಶ್ರೀ ಕ್ಷೇತ್ರ ಕದ್ರಿಗೆ ಪಲಿಮಾರು ಮಠಾಧೀಶರ ಭೇಟಿ

Wednesday, January 22nd, 2020
palimaru

ಮಂಗಳೂರು : ಪರ್ಯಾಯ ಪೂರೈಸಿ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಇಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಂದರ್ಶನ ಗೈದರು. ಪೂಜ್ಯ ಸ್ವಾಮೀಜಿಯವರನ್ನು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಜೆ. ಶೆಟ್ಟಿಯವರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಈ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ಥಳೀಯ ಕಾರ್ಪೋರೇಟರ್‌ಗಳಾದ ಶ್ರೀಮತಿ ಶಕಿಲಾ ಕಾವ ಹಾಗೂ ಮನೋಹರ ಶೆಟ್ಟಿ, ಅಲ್ಲದೆ ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರಿಮತಿ ಜಯಮ್ಮ ಪಿ., […]

ವಾಯುಮಾಲೀನ್ಯ ತಗ್ಗಿಸುವ ಇಂಧನ ಸಂಸ್ಕರಣೆಗೆ ಒತ್ತು : ಡಾ.ಎಂ.ಎಂ.ಕುಟ್ಟಿ

Monday, January 20th, 2020
bengaluru

ಬೆಂಗಳೂರು : ಪರಿಸರ ಸಂರಕ್ಷಣೆ ಉದ್ದೇಶದಿಂದ ನಗರ ಪ್ರದೇಶ, ಕೈಗಾರಿಕೆಗಳಿಂದ ಉತ್ಪತಿಯಾಗುವ ತ್ಯಾಜ್ಯ, ಮಾಲೀನ್ಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಬಳಸಿ ಇಂಧನ ಉತ್ಪಾದನೆ ಮಾಡುವ ತಂತ್ರಜ್ಞಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ತಂತ್ರಜ್ಞಾನ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಡಾ. ಎಂ.ಎಂ. ಕುಟ್ಟಿ ಹೇಳಿದ್ದಾರೆ. ನಗರದ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಎಂ.ಆರ್.ಪಿ.ಎಲ್. ಸಹಯೋಗದಲ್ಲಿ ಆಯೋಜಿಸಲಾಗಿರುವ 24ನೇ ರಿಪೈನಿಂಗ್ ಅಂಡ್ ಪೆಟ್ರೋ ಕೆಮಿಕಲ್ ಟೆಕ್ನಾಲಜಿ ಕುರಿತ […]

ಮೈಸೂರು ಜಿಲ್ಲೆಗೆ ಶಾಸಕ ಸಾ.ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರಾಗಿದ್ದಾರೆ : ಜಿ. ಟಿ ದೇವೇಗೌಡ ಮಾರ್ಮಿಕ ನುಡಿ

Saturday, January 18th, 2020
G.T-Devegowda

ಮೈಸೂರು : ಮೈಸೂರು ಜಿಲ್ಲೆಗೆ ಶಾಸಕ ಸಾ.ರಾ ಮಹೇಶ್ ಅವರೇ ಜೆಡಿಎಸ್ ವರಿಷ್ಠರಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರು ಮಾರ್ಮಿಕವಾಗಿ ನುಡಿದರು. ಇಂದು ಮೈಸೂರು ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮೇಯರ್ ಆಯ್ಕೆಗೆ ಮತದಾನ ಮಾಡಲು ಮೈಸೂರು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣಕ್ಕೆ ಶಾಸಕ ಜಿ. ಟಿ ದೇವೇಗೌಡ ಆಗಮಿಸಿದರು. ಎಂಎಲ್ಸಿಗಳಾದ, ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್, ಕೆ.ಟಿ.ಶ್ರೀಕಂಠೇಗೌಡ, ಧರ್ಮಸೇನಾ ಸಹ ಪಾಲಿಕೆಗೆ ಆಗಮಿಸಿದರು. ಜಿಟಿ ದೇವೇಗೌಡರು ಬರುತ್ತಿದ್ದಂತೆ ಅವರನ್ನು ಪಾಲಿಕೆ ಸದಸ್ಯರು […]

ಪೆರುವಾಯಿ ನಾರಾಯಣ ಶೆಟ್ಟಿಯವರಿಗೆ ಆಸ್ರಣ್ಣ ಪ್ರಶಸ್ತಿ ಪ್ರದಾನ

Friday, January 17th, 2020
peruvayi

ಮಂಗಳೂರು : ಹಿರಿಯ ಯಕ್ಷಗಾನ ವೇಷಧಾರಿ ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ ಕದ್ರಿಯ ಆಸ್ರಣ್ಣ ಶಿಷ್ಯ ಬಳಗದವರು ಕಟೀಲು ಗೋಪಾಲ ಕೃಷ್ಣ ಆಸ್ರಣ್ಣ ಪ್ರಶಸ್ತಿ-2019 ನ್ನು ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿ ಕಟೀಲು ಮೇಳದ ವೇದಿಕೆಯಲ್ಲಿ ನೀಡಿ ಗೌರವಿಸಿದರು. ಪಡುಬಿದ್ರೆಯ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳ ಸೇವೆಯಾಡದಂದು ಕಟೀಲು ಲಕ್ಷೀನಾರಾಯಣ ಆಸ್ರಣ್ಣ ಅವರ ಉಪಸ್ಥಿತಿಯಲ್ಲಿ ಬಂಗಾರದ ಪದಕ ದೊಂದಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಎರ್ಮಾಳು ಉದಯ ಶೆಟ್ಟಿ,ಎರ್ಮಾಳು ಸತೀಶ ವಿಠಲ ಶೆಟ್ಟಿ, ಐಕಳ ವಿಶ್ವನಾಥ ಶೆಟ್ಟಿ […]

ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಮಾತ್ರ ಅಲ್ಲ ನನ್ನ ಕೊಲೆಗೂ ಸ್ಕೇಚ್ ಹಾಕಲಾಗಿದೆ : ಯು.ಟಿ ಖಾದರ್

Friday, January 17th, 2020
UT-Khader

ಮಂಗಳೂರು : ಎಸ್‌ಡಿಪಿಐ ಕಾರ್ಯಕರ್ತರಿಂದ ಚಿಂತಕ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ಪ್ರಕರಣಕ್ಕೆ ಕುರಿತಂತೆ ಮಾಜಿ ಸಚಿವ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು ನನ್ನ ಮೇಲೆ ಕೂಡಾ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿಯನ್ನ ಪೊಲೀಸ್ ಇಲಾಖೆ ನೀಡಿತ್ತು, ಅಲ್ಲದೆ ನನಗೆ ಭಧ್ರತೆ ಕೊಡುವ ಬಗ್ಗೆ ಹೇಳಿದ್ದರು. ಸಮಾಜದ್ರೋಹಿ ಶಕ್ತಿಗಳನ್ನು ಯಾರೂ ಕೂಡಾ ಬೆಂಬಲಿಸಲ್ಲ. ಕಾನೂನು ಎಲ್ಲರಿಗೂ ಒಂದೇ, ಪ್ರತಿಯೊಬ್ಬರ ಜೀವ ಮೌಲ್ಯಯುತ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಜನರು […]

ಟೀಂ ಇಂಡಿಯಾ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ವಿಧಿವಶ

Thursday, January 16th, 2020
charulatha

ನವದೆಹಲಿ : 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ಪುರುಷರ ಕ್ರಿಕೆಟ್ ವಿಶ್ವಕಪ್ ವೇಳೆ ಸಾಕಷ್ಟು ಸುದ್ದಿ ಮಾಡಿದ್ದ ಟೀಂ ಇಂಡಿಯಾ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ವಿಧಿವಶರಾಗಿದ್ದಾರೆ. 87 ವರ್ಷದ ಚಾರುಲತಾ ಪಟೇಲ್ ಅವರು ವಿಶ್ವಕಪ್ ಪಂದ್ಯದ ವೇಳೆ ಭಾರಿ ಜನಪ್ರೀಯತೆ ಪಡೆದಿದ್ದ ಸೂಪರ್ ಫ್ಯಾನ್ ಅಜ್ಜಿ ಜನವರಿ 13ರಂದು ಮೃತರಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ. ವಿಶ್ವಕಪ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ ಅಜ್ಜಿ […]

ಜನವರಿ 16 ರಂದು ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯ ದಲ್ಲಿ ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕ

Tuesday, January 14th, 2020
nanya

ಮಂಗಳೂರು : ಶ್ರೀ ಅಷ್ಟ ಪವಿತ್ರ ನಾಗ ಮಂಡಲ ಪುಣ್ಯೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ನಾಣ್ಯ ಇಲ್ಲಿ ಜನವರಿ 16 ರಂದು ಬೆಳಿಗ್ಗೆ 6  ರಿಂದ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ವೃದ್ಧಿ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವ ನಡೆಯಲಿದೆ. ರಾತ್ರಿ 9.30 ನಾಗಬನದಲ್ಲಿ ಹಾಲಿಟ್ಟು ಬಳಿಕ ರಾತ್ರಿ 11.30 ರಿಂದ ನಾಗಪಾತ್ರಿಗಳಾದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮತ್ತು ಮುದ್ದೂರು ಶ್ರೀ ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗದವರಿಂದ ಅಷ್ಟ ಪವಿತ್ರ ನಾಗಮಂಡಲ ಪುಣ್ಯೋತ್ಸವ ನಡೆಯಲಿದೆ. ಜನವರಿ 17 ರಂದು ಸಂಜೆ 7 […]