ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ರಾಜ್ಯೋತ್ಸವ

Friday, November 1st, 2019
Dehali-karnataka-sanga

ನವದೆಹಲಿ : 64 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1ರಂದು ಬೆಳಿಗ್ಗೆ ದೆಹಲಿ ಕರ್ನಾಟಕ ಸಂಘದಿಂದ ಕನ್ನಡ ಭುವನೇಶ್ವರಿಗೆ ಪೂಜೆ ಮತ್ತು ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಡಾ.ವೆಂಕಟಾಚಲ ಹೆಗಡೆ, ಉಪಾಧ್ಯಕ್ಷೆ ಜಮುನಾ ಸಿ.ಮಠದ, ಕಾರ್ಯದರ್ಶಿ ಸಿ.ಎಂ.ನಾಗರಾಜ, ಜಂಟೀ ಕಾರ್ಯದರ್ಶಿ ರಾಧಾಕೃಷ್ಣ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾ.ಎಂ.ಎಸ್.ಶಶಿಕುಮಾರ್, ಸವಿತಾ ನೆಲ್ಲಿ, ಸುಮಿತಾ ಮುರಗೋಡ ಹಾಗೂ ಇನ್ನೂ ಅನೇಕ ಕನ್ನಡಿಗರು ಪಾಲ್ಗೊಂಡಿದ್ದರು. ರಾಜ್ಯೋತ್ಸವ ಸಂಭ್ರಮವನ್ನು ನವೆಂಬರ್ ತಿಂಗಳ ಪ್ರತೀ ಭಾನುವಾರದಂದು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು.  

ಕನ್ನಡವೇ ನಿತ್ಯ, ಕನ್ನಡವೇ ಸತ್ಯ, ಮತ್ಯೇಕೆ ಕನ್ನಡಿಗರೇ ನಿಮಗೆ ಆಂಗ್ಲದ ದಾಸ್ಯ?

Friday, November 1st, 2019
Kannada-Rajyotsava

ಮಂಗಳೂರು : ಇಂದು ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡುವುದು, ಓದುವುದು, ಚಲನಚಿತ್ರ ನೋಡುವುದು ಮತ್ತು ಆಂಗ್ಲ ಸಂಸ್ಕೃತಿಗನುಸಾರ ವರ್ತಿಸುವುದು ಇವುಗಳು ಅಲ್ಲಲ್ಲಿ ಮೊಳಕೆಯೊಡೆಯುತ್ತಿದೆ. ನನ್ನ ಮಗ ಅಥವಾ ಮಗಳು ಆಂಗ್ಲದಲ್ಲಿ ನಿರರ್ಗಳವಾಗಿ ಮಾತನಾಡಬೇಕು, ನಾಲ್ಕು ಜನರ ಮುಂದೆ ಎದ್ದು ಕಾಣಬೇಕು, ಎಂಬ ಕಲ್ಪನೆಗಳನ್ನು ಇಟ್ಟುಕೊಂಡು ಆಂಗ್ಲ ಮಾಧ್ಯಮದ ವೈಭವೋಪೇತ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಕಲಿಸುವುದರಲ್ಲಿ ಶ್ರೇಷ್ಠವೆಂದು ತಿಳಿಯುತ್ತಿದ್ದಾರೆ. ಎಲ್ಲೆಡೆ ಆಂಗ್ಲ ಮಾಧ್ಯಮದಿಂದ ಪಾಶ್ಚಾತ್ಯದ ಭೂಮಿಯ ವೈಭವೋಪೇತ ಶಾಲೆಗಳ ರೆಂಬೆಟೊಂಗೆ ಹಬ್ಬಿದೆ. ಇಂದಿನ ಸ್ಪರ್ಧಾತ್ಮಕ […]

ಕನ್ನಡದಲ್ಲೇ ರಾಜ್ಯೋತ್ಸವದ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

Friday, November 1st, 2019
Narendra-Modi

ನವದೆಹಲಿ : ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಕೋರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹಿಮ್ಮಡಿಗೊಳಿಸಿದ್ದಾರೆ. ಇಂದು ರಾಜ್ಯದಲ್ಲೆಡೆ 64ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ, ರಾಷ್ಟ್ರದ ಬೆಳವಣಿಗೆಗೆ ಕರ್ನಾಟಕ ನೀಡಿದ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿವಸವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ವಿಶಾಲ ಹೃದಯವಂತಿಕೆ ಹಾಗೂ ಕನ್ನಡ ನಾಡಿನ ಸೌಂದರ್ಯ ಹೆಸರುವಾಸಿಯಾದದ್ದು. ಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಶುಭಕೋರಿದ್ದಾರೆ. ಕನ್ನಡದಲ್ಲೇ […]

ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಬಾಲಕ

Saturday, October 26th, 2019
kolave-baavi

ಚೆನ್ನೈ : 2 ವರ್ಷದ ಬಾಲಕನೊಬ್ಬ ಕೊಳವೆಬಾವಿಗೆ ಬಿದ್ದಿರುವ ಘಟನೆ ತಮಿಳುನಾಡಿನ ತಿರಚ್ಚಿ ಜಿಲ್ಲೆಯ ನಡುಕಟ್ಟುಪಟ್ಟಿಯಲ್ಲಿ ನಡೆದಿದೆ. ಬಾಲಕನನ್ನು ಸುಜಿತ್ ವಿಲ್ಸನ್ ಎಂದು ಗುರುತಿಸಲಾಗಿದೆ. ಈತ 25 ಅಡಿ ಆಳಕ್ಕೆ ಬಿದ್ದಿದ್ದಾನೆ. ಶುಕ್ರವಾರ ಸಂಜೆ 5.30ರ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದಾಗ 7 ವರ್ಷದ ಹಿಂದೆ ತೆರೆದಿದ್ದ ಬೋರ್‍ವೆಲ್‍ಗೆ ಸುಜಿತ್ ವಿಲ್ಸನ್ ಬಿದ್ದಿದ್ದಾನೆ. ಬಾಲಕ ಕೊಳವೆ ಬಾವಿಗೆ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಕ್ಷಣಾ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿದೆ. ವೈದ್ಯರ ತಂಡ […]

ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ಇವರಿಂದ ಮಂದಾರ ಸಂತ್ರಸ್ತರಿಗೆ 4ಲಕ್ಷ ರೂ. ಚೆಕ್ ವಿತರಣೆ

Friday, October 25th, 2019
pacchanady

ಮಂಗಳೂರು :ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ಮಂಗಳೂರು ಇವರಿಂದ ಮಂದಾರದ ಸಂತ್ರಸ್ತರಿಗೆ ಒಟ್ಟು ಮೊತ್ತ 4,00,000 ರೂಪಾಯಿ ಚೆಕ್ ವಿತರಿಸಿದರು. ಆಗಸ್ಟ್ ತಿಂಗಳಿನಲ್ಲಿ ಸುರಿದ ಬಾರೀ ಮಳೆಗೆ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯರಾಶಿಯು ಕುಡುಪು ಸಮೀಪದ ಮಂದಾರ ಪ್ರದೇಶಕ್ಕೆಪ್ರವಾಹ  ರೀತಿಯಲ್ಲಿ ಹರಿದಿತ್ತು. ಆಗ ಮಂದಾರ ಪ್ರದೇಶ ವ್ಯಾಪಿಯಲ್ಲಿ ಹರಡಿದ ವಸ್ತು ಸ್ಥಿತಿಯನ್ನು ಗಮನಿಸಿ ತಕ್ಷಣವೇನಾವು ಸಾಮಾಜಿಕವಾದ ಬದ್ಧತೆಯಿಂದ ಸಂಸ್ಥೆಯ ಉಪನ್ಯಾಸಕರನ್ನು ಸ್ಥಳಕ್ಕೆಕಳುಹಿಸಿ ಗ್ರಾಮಸ್ಥರನ್ನು ಭೇಟಿ ಮಾಡಿ ಆತ್ಮಸ್ಥೈರ್ಯವನ್ನು ತುಂಬಿದ್ದೆವು.ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಕೈಲಾಗುವ […]

ಮಂಗಳೂರಿನ ಲಕ್ಷ್ಮೀ ಪ್ಯಾನ್ಸಿ ಸೆಂಟರ್‌ನಲ್ಲಿ ದೀಪಾವಳಿಗೆ ಬಂದಿದೆ ಆಕರ್ಷಕ ಗೂಡುದೀಪಗಳು

Wednesday, October 23rd, 2019
gudu-deepa

ಮಂಗಳೂರು : ದೀಪಾವಳಿ ಎಂದರೆ ಬೆಳಕಿನ ಹಬ್ಬ, ಜೊತೆಗೆ ಸಾಂಪ್ರದಾಯಿಕ  ಬೆಳಕಿನ ದೀಪಗಳಿಂದ ಮನೆಯನ್ನು ಅಂಗಡಿಗಳನ್ನು ಶೃಂಗರಿಸುವ ಹಬ್ಬ. ಒಂದು ಕಡೆ ಪಟಾಕಿಗಳ ಗೌಜಿಯಾದರೆ, ಮನೆಯೋಳಗೆ ಸಿಹಿ ಸವಿಯುವ ಸಂಭ್ರಮ. ಈ ಬಾರಿ ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು ದೀಪಗಳು ನಾನಾ ಅಕಾರದಲ್ಲಿ ಗ್ರಾಹಕರನ್ನು […]

ಪಟಾಕಿ ತಯಾರಿಸುತ್ತಿದ್ದ ಮನೆಗೆ ಬೆಂಕಿ : ಇಬ್ಬರು ಮೃತ್ಯು

Saturday, October 19th, 2019
pataki

ಗುನಾ : ಪಟಾಕಿ ತಯಾರಿಸುತ್ತಿದ್ದ ಮನೆಗೆ ಬೆಂಕಿ ತಗುಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮೀರ್ (18) ಮತ್ತು ರುಷ್ಕರ್ (26) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.  

ಸುಳ್ಯ : ಸ್ನಾನ ಮಾಡಲು ಹೊಳೆಗೆ ಇಳಿದ ವಿದ್ಯಾರ್ಥಿ ಮೃತ್ಯು

Monday, October 14th, 2019
yashwith

ಸುಳ್ಯ : ಇಲ್ಲಿನ ಉಬರಡ್ಕದ ಹೊಳೆಯಲ್ಲಿ ಸ್ನಾನ ಮಾಡಲೆಂದು ತೆರಳಿದ್ದ ವಿದ್ಯಾರ್ಥಿಯೋರ್ವ ನೀರು ಪಾಲಾದ ದುರಂತ ಘಟನೆ ಸಂಭವಿಸಿದೆ. ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯಶ್ವಿತ್ (15) ಮೃತ ದುರ್ದೈವಿ. ವಿದ್ಯಾರ್ಥಿ ಯಶ್ವಿತ್ ಸೇರಿದಂತೆ ಮೂವರು ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಕಿರಣ್ ಎಂಬಾತ ನೀರಲ್ಲಿ ಮುಳುಗುತಿದ್ದ ಸಂದರ್ಭ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಆತನನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ಆದರೆ ಈ ವೇಳೆ ಯಶ್ವಿತ್ ನೀರಿನ ಆಳಕ್ಕೆ ಬಿದ್ದ‌ ಎನ್ನಲಾಗಿದೆ. ಪೊಲೀಸರ […]

ಬಳ್ಳಾರಿ : ದನ ಹುಡುಕಲು ಹೋದ ರೈತನ ಮೇಲೆ ಕರಡಿ ದಾಳಿ; ಗಂಭೀರ ಗಾಯ

Wednesday, October 9th, 2019
siddapura

ಬಳ್ಳಾರಿ : ಹೊಲದಲ್ಲಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ, ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಸಣ್ಣ ಮಲ್ಲಯ್ಯ ಎಂಬ ರೈತನ ಮೇಲೆ ಕರಡಿಯು ದಾಳಿ ನಡೆಸಿದ್ದು, ತಲೆ ಹಾಗೂ ಕೈ ಕಾಲುಗಳ ಮೇಲೆ ಗಂಭೀರ ಗಾಯಗಳಾಗಿವೆ. ದನಗಳನ್ನು ಹುಡುಕಲು ಹೋದಾಗ ಈ ಘಟನೆ ಸಂಭವಿಸಿದೆ. ಇನ್ನು ಸಣ್ಣ ಮಲ್ಲಯ್ಯನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಕೆ ಕಾಣುತ್ತಿದ್ದಾನೆ.  

ಮೈಸೂರು ದಸರಾ : ಇಂದು ಸುಪ್ರಸಿದ್ದ ಜಂಬೂ ಸವಾರಿ

Tuesday, October 8th, 2019
jambu-savari

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಅಂತಿಮ ಹಂತಕ್ಕೆ ತಲುಪಿದೆ. ವಿಜಯ ದಶಮಿಯ ದಿನವಾದ ಇಂದು ಸುಪ್ರಸಿದ್ದ ಜಂಬೂ ಸವಾರಿ ನಡೆಯಲಿದ್ದು, ಅರ್ಜುನನ ಮೇಲೆರಿ ಬರುವ ಚಾಮುಂಡೇಶ್ವರಿಯ ಕಾಣಲು ಲಕ್ಷಾಂತರ ಜನ ಕಾತರದಿಂದ್ದಾರೆ. ಇಂದು ಮಧ್ಯಾಹ್ನ 2.15ರಿಂದ 2.58ರವರೆಗೆ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆಯ ಮೂಲಕ ವಿಜಯ ದಶಮಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಸಂಜೆ 4.31 ರಿಂದ 4.57ರೊಳಗೆ ಸಲುವ ಶುಭ ಕುಂಭ ಲಗ್ನದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚಾಮುಂಡೇಶ್ವರಿ […]