ಸುರತ್ಕಲ್ : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಬಸ್ಸಿಗೆ ಲಾರಿ ಢಿಕ್ಕಿ; ಇಬ್ಬರು ಮಕ್ಕಳಿಗೆ ಗಾಯ

Wednesday, August 21st, 2019
Mini-bus

ಸುರತ್ಕಲ್ : ಇಲ್ಲಿನ ಹೊಸಬೆಟ್ಟು ತಿರುವಿನಲ್ಲಿ ಇಂದು ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಬಸ್ ಒಂದಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಶಾಲಾ ಮಕ್ಕಳನ್ನು ಕರೆತರಲು ತೆರಳುತ್ತಿದ್ದ ಮಿನಿ ಬಸ್ ಹೊಸಬೆಟ್ಟು ಬಳಿ ಮುಖ್ಯ ರಸ್ತೆಯಿಂದ ಒಳರಸ್ತೆಗೆ ತಿರುಗುವ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿ ನೇರವಾಗಿ ಮಿನಿ ಬಸ್ಸಿನ ಎಡಬದಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ಸಂದರ್ಭದಲ್ಲಿ ಬಸ್ಸಿನಲ್ಲಿ ಕೇವಲ ಇಬ್ಬರೇ ಮಕ್ಕಳಿದ್ದ ಕಾರಣ ಅದೃಷ್ಟವಶಾತ್ ಸಂಭಾವ್ಯ […]

ಪುತ್ತೂರು: 700 ಕೆಜಿ ಗೋಮಾಂಸ ಅಕ್ರಮ ಸಾಗಣೆ – ಮೂವರನ್ನು ಬಂಧಿಸಲಾಗಿದೆ

Friday, August 16th, 2019
go-mamsa

ಪುತ್ತೂರು : ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿದ್ದ ಕಾರನ್ನು ಬೆನ್ನಟ್ಟಿ ವಶಕ್ಕೆ ಪಡೆದಿರುವ ಪುತ್ತೂರು ನಗರ ಠಾಣೆಯ ಪೊಲೀಸರು, ಸುಮಾರು 700 ಕಿ. ಗ್ರಾಂ. ಮಾಂಸ ಸಹಿತ ಮೂವರನ್ನು ಬಂಧಿಸಿದ್ದಾರೆ. ಕುದ್ರೋಳಿ ಕರ್ಬಲ ರಸ್ತೆಯ ಮುನಿರಾ ಮಂಜಿಲ್‌ ನಿವಾಸಿ ಮುಸ್ತಾಕ್‌ (50), ಕಲ್ಲಡ್ಕ ಗೋಳ್ತ ಮಜಲು ನಿವಾಸಿ ತೌಫೀಕ್‌ (26) ಹಾಗೂ ಕಲ್ಲಡ್ಕ -ವಿಟ್ಲ ರಸ್ತೆ ನಿವಾಸಿ ಮಹಮ್ಮದ್‌ ಕಬೀರ್‌ (40) ಬಂಧಿತರು. ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಮಹೇಂದ್ರ ಝೈಲೋ ಕಾರಿನಲ್ಲಿ […]

ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾನೂನಿಗೆ ಅಡ್ಡಿ ಮಾಡಬೇಡಿ ಅಧಿಕಾರಿಗಳಿಗೆ ಮುಖ್ಯಮಂತ್ರಿಸೂಚನೆ

Monday, August 12th, 2019
Yedyurappa Dharmasthala

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಹಾನಿ ವೀಕ್ಷಣೆ ಮಾಡಿದ ಬಳಿಕ ಧರ್ಮಸ್ಥಳದಲ್ಲಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಮನೆ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಮನೆ ಕಳೆದುಕೊಂಡವರಿಗೆ‌ 1 ಲಕ್ಷ, ಮತ್ತು ಮನೆ ಕಟ್ಟುವ ಇನ್ನೂ ಏಳೆಂಟು ತಿಂಗಳ ತನಕ ಪ್ರತಿ ತಿಂಗಳಿಗೆ 5 ಸಾವಿರ ಬಾಡಿಗೆ ಮತ್ತು ತಕ್ಷಣದ ಪರಿಹಾರ 10 ಸಾವಿರ ಇವತ್ತೆ ನೀಡುವಂತೆ ಘೋಷಿಸಿದ್ದೇನೆ. ಇದನ್ನು ಸಂತ್ರಸ್ತರಿಗೆ ನೀಡುವಲ್ಲಿ […]

ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ದರೋಡೆ ; ಇಬ್ಬರು ಆರೋಪಿಗಳ ಬಂಧನ

Monday, August 12th, 2019
Bengre-accused

ಮಂಗಳೂರು: ನಗರದ ಹೊರವಲಯದ ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಸಬ ಬೆಂಗ್ರೆ ತೌಹೀದ್ ಮಂಜಿಲ್ ನಿವಾಸಿ ಸರ್ಫರಾಜ್ (28) ಹಾಗೂ ಕಸಬ ಬೆಂಗ್ರೆಯ ಸೈಯದ್ ಅಫ್ರಿದ್ ಯಾನೆ ಕುಡಿಯ ಅಪ್ಪಿ (21) ಬಂಧಿತರು ಆರೋಪಿಗಳು. ಆಗಸ್ಟ್ 6 ರಂದು ಆರೋಪಿಗಳು ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. […]

ಮಣ್ಣಿನ ಪದರದ ಶಿಥಿಲತೆ ಪಶ್ಚಿಮ ಘಟ್ಟ ಪ್ರದೇಶ ಕುಸಿಯಲು ಕಾರಣ

Monday, August 12th, 2019
shiradi-ghat

ಮಂಗಳೂರು : ಕಳೆದ ವರ್ಷ ಮಡಿಕೇರಿ, ಶಿರಾಡಿ ಘಾಟಿಯಲ್ಲಿ ಸಾಕಷ್ಟು ಅನಾಹುತವುಂಟು ಮಾಡಿದ್ದ ಭೂಕುಸಿತ ಈ ಬಾರಿ ಬೆಳ್ತಂಗಡಿಯ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಸಂಭವಿಸಿದೆ. ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡ ಈ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಭೂ ಕುಸಿತಕ್ಕೆ ಮಣ್ಣಿನ ಪದರದ ಶಿಥಿಲತೆ ಕಾರಣವೇ, ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ನಾಶವೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೆ ಎಂಬ ಚರ್ಚೆಗೆ ಈಗ ಮತ್ತೆ ಜೀವ ಬಂದಿದೆ. ಇದಕ್ಕೆ ಪೂರಕವಾಗಿ ಘಟಿಸುತ್ತಿರುವ ಅನಾಹುತಗಳಿಗೆ ಅರಣ್ಯ ನಾಶ ಹಾಗೂ ಅಭಿವೃದ್ಧಿ ಯೋಜನೆಗಳ ಪಾತ್ರ […]

ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆ ಸಂಚಾರ ಆರಂಭ

Monday, August 12th, 2019
ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆ ಸಂಚಾರ ಆರಂಭ

ಬೆಳ್ತಂಗಡಿ : ಕಳೆದೊಂದು ವಾರದಿಂದ ಭಾರೀ ಮಳೆಗೆ ಗುಡ್ಡ ಕುಸಿತಕ್ಕೊಳಗಾಗಿ ಸಂಚಾರಕ್ಕೆ ಆಡಚಣೆಯಾಗಿ ಬಂದ್ ಮಾಡಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ (ಹಾಸನ–ಮಂಗಳೂರು) ರಸ್ತೆಯಲ್ಲಿ ಹಗಲು ಹೊತ್ತು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಭಾನುವಾರದಂದು ಮಳೆ ತನ್ನ ಆರ್ಭಟವನ್ನು ಕೊಂಚ ಕಡಿಮೆ ಮಾಡಿದ್ದರಿಂದ ಅಂದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಆದರೆ ವಾಹನ ಚಾಲಕರು ಆತಂಕದಿಂದಲೇ ಘಾಟ್ ನಲ್ಲಿ ವಾಹನ ಚಾಲನೆ ಮಾಡಿದ್ರು. ಬೆಳಗ್ಗೆ ಹತ್ತರಿಂದ ಸಂಜೆ ಆರರವರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಆ ಬಳಿಕ ಸಂಜೆಯಾಗುತ್ತಲೇ ಸೋಮವಾರವೂ ವಾಹನ […]

ಕೊಚ್ಚಿ ಹೋದ ಕಾರ್ಕಳ ಮಂಗಳಫಾರ್ಮ್ ರಸ್ತೆ ; ಶಾಸಕ ಸುನೀಲ್ ಕುಮಾರ್ ಭೇಟಿ

Saturday, August 10th, 2019
SunilKumar

ಕಾರ್ಕಳ : ನಕ್ಸಲ್‌ಪೀಡಿತ ಪ್ರದೇಶವಾಗಿರುವ ಈದು ನೂರಾಲ್‌ಬೆಟ್ಟುನ ಕನ್ಯಾಲು ಪ್ರದೇಶಕ್ಕೆ ಶಾಸಕ ವಿ.ಸುನೀಲ್‌ಕುಮಾರ್ ಭೇಟಿ ನೀಡಿದ್ದಾರೆ. ಭಾರೀ ಮಳೆಗೆ ಮಂಗಳಫಾರ್ಮ್ ಸಮೀಪದಲ್ಲಿ ಹಾದು ಹೋಗಿರುವ ರಸ್ತೆಯು ಕೊಚ್ಚಿ ಹೋಗಿರುವುದರಿಂದ ಜನಜೀವನದ ಮೇಲೆ ನೇರ ಪರಿಣಾಮ ಬೀರಿದೆ. ಇದೇ ರಸ್ತೆಯು ಕಳೆದ ವರ್ಷ ಕೂಡಾ ಹಾನಿಗೊಳಗಾಗಿತ್ತು. ರೂ.40 ಲಕ್ಷ ವೆಚ್ಚದಲ್ಲಿ ನೂತನ ರಸ್ತೆ ಮೋರಿ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತಾದರೂ, ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭಕ್ಕೆ ವಿಘ್ನು ಎದುರಾಗಿತ್ತು. ಅದೇ ಕಾರಣದಿಂದಾಗಿ ರಸ್ತೆ ಇಕ್ಕೆಲೆಗಳಲ್ಲಿ ಕರಿಕಲ್ಲುನಿಂದ ತಡೆಗೋಡೆ ನಿರ್ಮಿಸಿ ಮಣ್ಣು […]

ಮಾಜಿ ಸಚಿವ ಬಿ. ರಮಾನಾಥ ರೈ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ

Saturday, August 10th, 2019
Ramanatha-Rai

ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಬಂಟ್ವಾಳ ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಆಲಡ್ಕ. ಬೋಗೋಡಿ, ನಂದರಬೆಟ್ಟು ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಮುಂಜಾನೆ 12 ಗಂಟೆಗೆ 11.6 ಮೀಟರ್ ನಷ್ಟು ಏರಿಕೆಯಾಗಿ ಅಪಾಯದ ಮಟ್ಟದಿಂದ ಮೇಲಮಟ್ಟದಲ್ಲಿ ಹರಿಯುತ್ತಿದೆ . ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಗಾಳಿ- ಮಳೆ ಮುಂದುವರಿದಿದ್ದು, ನೇತ್ರಾವತಿ ನೀರಿನ ಮಟ್ಟ ತೀವ್ರ ಹೆಚ್ಚಾಗಿದ್ದು, ಅಪಾಯಕಾರಿಯಾಗಿ ಹರಿಯುತ್ತಿದೆ. ಕಳೆದ ರಾತ್ರಿಯಿಂದ ಸುರಿದ ಮಳೆಗೆ ಬಂಟ್ವಾಳದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದೆ. ನಿನ್ನೆ […]

ಬೆಳ್ತಂಗಡಿ : 15ಕ್ಕೂ ಹೆಚ್ಚು ಗ್ರಾಮಗಳು ಮತ್ತು ನೂರಾರು ಮನೆಗಳು ಜಲಾವೃತ

Saturday, August 10th, 2019
netravati

ಬೆಳ್ತಂಗಡಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ನದಿ ಮತ್ತು ಉಪನದಿಗಳಲ್ಲಿ ಶುಕ್ರವಾರ ನಿರೀಕ್ಷೆ ಮೀರಿದ ಪ್ರವಾಹ ಉಂಟಾಗಿ ತಾಲೂಕಿನ ಸುಮಾರು 15ಕ್ಕೂ ಅಧಿಕ ಗ್ರಾಮಗಳ ನೂರಾರು ಮನೆಗಳು ಜಲಾವೃಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ನೇತ್ರಾವತಿ, ಕಪಿಲ, ಮೃತ್ಯುಂಜಯ, ಸೋಮಾವತಿ ನದಿಗಳು, ನೆರಿಯ ಮತ್ತು ಅಣಿಯೂರು ಹೊಳೆಯಲ್ಲಿ ಪ್ರವಾಹದ ನೀರು ಉಕ್ಕಿಹರಿದಿತ್ತು. ಶುಕ್ರವಾರ ಮುಂಜಾನೆಯೇ ಪ್ರವಾಹ ಹರಿದು ಬಂದಿದ್ದು, ಬೆಳಗ್ಗೆಜನರು ಏಳುವ ಹೊತ್ತಿಗೆ ಮನೆಯಂಗಳದಲ್ಲಿ ನೆರೆ ಕಂಡು ಬೆಚ್ಚಿದರು. ಲಾೖಲ, […]

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ಧು ಎಬಿವಿಪಿಯಿಂದ ವಿಜಯೋತ್ಸವ ; ಪೊಲೀಸರಿಂದ ವಿರೋಧ

Tuesday, August 6th, 2019
Abvp

ಮಂಗಳೂರು : ಸೋಮವಾರ ಕೇಂದ್ರ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ರದ್ಧುಗೊಳಿಸಿರುವುದನ್ನು ಮಂಗಳೂರು ಎಬಿವಿಪಿ ಘಟಕವು ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ವಿಜಯೋತ್ಸವವನ್ನಾಗಿ ಆಚರಿಸಿತು. ಈ ಸಂದರ್ಭ ಅಲ್ಲೇ ಇದ್ದ ಪೊಲೀಸರು ವಿಜಯೋತ್ಸವವನ್ನು ತಡೆಯಲು ಮುಂದಾದರು. ಇದನ್ನು ವಿರೋಧಿಸಿದ ಎಬಿವಿಪಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.